ಭಾರತ ತಂಡಕ್ಕೆ ಆಯ್ಕೆಯಾಗ್ತಿದ್ದಂತೆ ವಿಶಿಷ್ಟ ದಾಖಲೆ ಬರೆದ ರೋಹಿತ್ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ-rohit sharma created history in the process after being named part of the squad hitman to play most t20 world cups prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡಕ್ಕೆ ಆಯ್ಕೆಯಾಗ್ತಿದ್ದಂತೆ ವಿಶಿಷ್ಟ ದಾಖಲೆ ಬರೆದ ರೋಹಿತ್ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

ಭಾರತ ತಂಡಕ್ಕೆ ಆಯ್ಕೆಯಾಗ್ತಿದ್ದಂತೆ ವಿಶಿಷ್ಟ ದಾಖಲೆ ಬರೆದ ರೋಹಿತ್ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

Rohit Sharma : ಐಸಿಸಿ ಟಿ20 ಕ್ರಿಕೆಟ್​ ವಿಶ್ವಕಪ್ 2024 ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೆ ನಾಯಕ ರೋಹಿತ್​ ಶರ್ಮಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಭಾರತ ತಂಡಕ್ಕೆ ಆಯ್ಕೆಯಾಗ್ತಿದ್ದಂತೆ ವಿಶಿಷ್ಟ ದಾಖಲೆ ಬರೆದ ರೋಹಿತ್ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ
ಭಾರತ ತಂಡಕ್ಕೆ ಆಯ್ಕೆಯಾಗ್ತಿದ್ದಂತೆ ವಿಶಿಷ್ಟ ದಾಖಲೆ ಬರೆದ ರೋಹಿತ್ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ

ಬಹುನಿರೀಕ್ಷಿತ ಟಿ20 ವಿಶ್ವಕಪ್​ ಟೂರ್ನಿಗೆ (T) 15 ಸದಸ್ಯರ ಬಲಿಷ್ಠ ತಂಡ ಪ್ರಕಟಗೊಂಡಿದೆ. ಇದೇ ವೇಳೆ ನಾಯಕ ರೋಹಿತ್​ ಶರ್ಮಾ ಅವರಿಗೆ ಬಿಸಿಸಿಐ 37ನೇ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಭಾರತೀಯ ತಂಡದಲ್ಲಿ ಹಿಟ್​ಮ್ಯಾನ್​ಗೆ ಅಧಿಕೃತವಾಗಿ ಸ್ಥಾನ ಕಲ್ಪಿಸಿದೆ. ಅಲ್ಲದೆ, ಮೆಗಾ ಈವೆಂಟ್​ಗೆ ನಾಯಕನನ್ನಾಗಿಯೂ ನೇಮಿಸಲಾಗಿದೆ. ಇದೀಗ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ರೋಹಿತ್​ ವಿಶ್ವ ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ಹೊರತಾಗಿಯೂ ರಿಂಕು ಸಿಂಗ್​ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಶುಭ್ಮನ್ ಗಿಲ್​ಗೂ ಸ್ಥಾನ ಸಿಗಲಿಲ್ಲ. ಕೆಎಲ್ ರಾಹುಲ್ ಪುನರಾಗಮನದ ನಿರೀಕ್ಷೆಯೂ ಕೊನೆಗೊಂಡಿತು. ಯುಜ್ವೇಂದ್ರ ಚಹಾಲ್ ಅಚ್ಚರಿಯ ಪುನರಾಗಮನ ಮಾಡಿದರೆ, ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಈವೆಂಟ್ ಆಡಲು ಸಜ್ಜಾಗಿದ್ದಾರೆ. ಕೊನೆಯ ಟಿ20 ವಿಶ್ವಕಪ್​ ಆಡಲು ಸಜ್ಜಾಗಿರುವ ರೋಹಿತ್​, ನೂತನ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಟಿ20 ವಿಶ್ವಕಪ್​ಗೆ ಭಾರತ ತಂಡದ ಭಾಗವಾದ ಬೆನ್ನಲ್ಲೇ ಹಿಟ್​ಮ್ಯಾನ್ ಹೊಸ ಇತಿಹಾಸ ಸೃಷ್ಟಿಸಿದರು. ಅತಿ ಹೆಚ್ಚು ಟಿ20 ವಿಶ್ವಕಪ್ ಟೂರ್ನಿಯ ಭಾಗವಾದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಭಾರತೀಯ ನಾಯಕ ಇಲ್ಲಿಯವರೆಗೆ ಟಿ20 ವಿಶ್ವಕಪ್‌ನ ಎಲ್ಲಾ 9 ಆವೃತ್ತಿಗಳಿಗೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ 2007, 2009, 2010, 2012, 2014, 2016, 2021, 2022ರಲ್ಲಿ ಭಾರತ ತಂಡದ ಪರ ಆಡಿದ್ದರು.

2021ರಲ್ಲಿ ಉಪನಾಯಕ ಮತ್ತು 2022ರಲ್ಲಿ ನಾಯಕರಾಗಿದ್ದ ಹಿಟ್​ಮ್ಯಾನ್, 2024ರಲ್ಲೂ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ. ಒಂದು ವೇಳೆ ಬಾಂಗ್ಲಾದೇಶ ತಂಡದ ಪರ ಶಕೀಬ್ ಅಲ್ ಹಸನ್ ಅವರನ್ನು ಆಯ್ಕೆ ಮಾಡಿದರೆ, ಅವರು ಸಹ ಎಲ್ಲಾ 9 ಟಿ20 ವಿಶ್ವಕಪ್ ಟೂರ್ನಿಗಳಲ್ಲೂ ಆಡಿದ ದಾಖಲೆಯನ್ನು ಬರೆಯಲಿದ್ದಾರೆ. ಭಾರತದ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರು 2016 ರವರೆಗೆ ಟೂರ್ನಿಯ ಎಲ್ಲಾ ಆವೃತ್ತಿಗಳನ್ನು ಆಡಿದ್ದರೆ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 2024 ರಲ್ಲಿ 6ನೇ ಬಾರಿಗೆ ಟೂರ್ನಿಯನ್ನು ಆಡಲು ಸಜ್ಜಾಗಿದ್ದಾರೆ.

ಆಟಗಾರಆಡಿದ ಟಿ20 ವಿಶ್ವಕಪ್‌ಗಳ ಸಂಖ್ಯೆವರ್ಷ
ರೋಹಿತ್ ಶರ್ಮಾ92007, 2009, 2010, 2012, 2014, 2016, 2021, 2022, 2024
ಎಂಎಸ್ ಧೋನಿ62007, 2009, 2010, 2012, 2014, 2016
ಯುವರಾಜ್ ಸಿಂಗ್62007, 2009, 2010, 2012, 2014, 2016
ವಿರಾಟ್ ಕೊಹ್ಲಿ62012, 2014, 2016, 2021, 2022, 2024
ರವೀಂದ್ರ ಜಡೇಜಾ62009, 2010, 2014, 2016, 2021, 2024

ರೋಹಿತ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಟಿ20ಐಗೆ ಪದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ವರ್ಚುವಲ್ ಕ್ವಾರ್ಟರ್-ಫೈನಲ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಪ್ರಮುಖ ಅರ್ಧಶತಕ ಸಿಡಿಸಿದರು. ಆಗ ರೋಹಿತ್​ಗೆ 20 ವರ್ಷ ಆಗಿತ್ತು. ರೋಹಿತ್ ಫೈನಲ್​​ನಲ್ಲಿ ಪಾಕಿಸ್ತಾನದ ವಿರುದ್ಧ 16 ಎಸೆತಗಳಲ್ಲಿ 30 ರನ್‌ ಗಳಿಸಿದ್ದರು. ಎಂಎಸ್ ಧೋನಿ ನೇತೃತ್ವದ ತಂಡವು ಕೊನೆಯ ಓವರ್‌ನ ರೋಚಕ ಪಂದ್ಯದಲ್ಲಿ ಐದು ರನ್‌ಗಳ ವಿಜಯದ ನಂತರ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

mysore-dasara_Entry_Point