logo
ಕನ್ನಡ ಸುದ್ದಿ  /  ಕ್ರಿಕೆಟ್  /  Dharamshala Stadium: ವಿಶ್ವಕಪ್‌ ಸಮೀಪಿಸುತ್ತಿರುವ ಬೆನ್ನಲ್ಲೇ ಧರ್ಮಶಾಲಾ ಸ್ಟೇಡಿಯಂ ಔಟ್‌ಫೀಲ್ಡ್‌ನಲ್ಲಿ ಫಂಗಸ್; ಐಸಿಸಿ ತಂಡ ಅಸಮಾಧಾನ

Dharamshala Stadium: ವಿಶ್ವಕಪ್‌ ಸಮೀಪಿಸುತ್ತಿರುವ ಬೆನ್ನಲ್ಲೇ ಧರ್ಮಶಾಲಾ ಸ್ಟೇಡಿಯಂ ಔಟ್‌ಫೀಲ್ಡ್‌ನಲ್ಲಿ ಫಂಗಸ್; ಐಸಿಸಿ ತಂಡ ಅಸಮಾಧಾನ

Raghavendra M Y HT Kannada

Sep 17, 2023 12:29 PM IST

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಕ್ರಿಕೆಟ್ ಸ್ಟೇಡಿಯಂ (ಫೋಟೋ ಫೈಲ್)

  • ವಿಶ್ವಕಪ್‌ಗೆ ಕೆಲವೇ ಕೆಲವು ದಿನಗಳ ಬಾಕಿ ಇರುವಾಗ ಧರ್ಮಶಾಲಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಫಂಗಸ್ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಇದು ಐಸಿಸಿ ತಂಡದ ಅಸಮಾಧಾನಕ್ಕೂ ಕಾರಣವಾಗಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಕ್ರಿಕೆಟ್ ಸ್ಟೇಡಿಯಂ (ಫೋಟೋ ಫೈಲ್)
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಕ್ರಿಕೆಟ್ ಸ್ಟೇಡಿಯಂ (ಫೋಟೋ ಫೈಲ್)

ಧರ್ಮಶಾಲಾ (ಹಿಮಾಚಲ ಪ್ರದೇಶ): ಬಹು ನಿರೀಕ್ಷಿತ ಮತ್ತು ಇಡೀ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ (ICC ODI World Cup 2023) ಮಹಾ ಟೂರ್ನಿಗೆ ಕೇವಲ ಮೂರು ವಾರಗಳಷ್ಟೇ ಬಾಕಿ ಇರುವಾಗ ಬಿಸಿಸಿಐ (BCCI) ದೊಡ್ಡ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ.

ಟ್ರೆಂಡಿಂಗ್​ ಸುದ್ದಿ

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದ ಔಟ್‌ಫೀಲ್ಡ್‌ನಲ್ಲಿ ಫಂಗಸ್ ಕಾಣಿಸಿಕೊಂಡಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಪಂದ್ಯಗಳು ಆತಿಥ್ಯ ವಹಿಸುತ್ತಿರುವ ಕ್ರೀಡಾಂಗಣಗಳು ಇನ್ನೂ ಸಂಪೂರ್ಣವಾಗಿ ಸಿದ್ಧಗೊಳ್ಳದ ಕಾರಣ, ಈಗಾಗಲೇ ನಿಗದಿಯಾಗಿರುವ ಪಂದ್ಯಗಳು ಬೇರೆ ಸ್ಟೇಡಿಯಂಗಳಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಸ್ಟೇಡಿಯಂಗಳ ಪಟ್ಟಿಯಲ್ಲಿದೆ ಧರ್ಮಶಾಲಾ

ಮುಂದಿನ ಎರಡು ತಿಂಗಳುಗಳ ಕಾಲ ವಿಶ್ವಕಪ್ ಪಂದ್ಯಗಳು ನಡೆಯುವ ಭಾರತದ 10 ಸ್ಥಳಗಳ ಪೈಕಿ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣ ಕೂಡ ಒಂದು. ವಿಶ್ವದ ಅತ್ಯಂತ ಸುಂದರವಾದ ಕ್ರಿಕೆಟ್ ಸ್ಥಳಗಳಲ್ಲಿ ಧರ್ಮಶಾಲಾ ಕ್ರಿಕೆಟ್ ಮೈದಾನ ಸ್ಥಾನ ಪೆಡದಿದೆ. ಇಲ್ಲಿ ಐಸಿಸಿ ವಿಶ್ವಕಪ್‌ನ ಐದು ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಹೆಚ್‌ಪಿಸಿಎ ಸ್ಟೇಡಿಯಂನ ಔಟ್‌ಫೀಲ್ಡ್‌ನಲ್ಲಿ ಫಂಗಸ್ ಬೆಳೆದಿರುವುದು ಬಿಸಿಸಿಐಅನ್ನು ಚಿಂತೆಗೀಡು ಮಾಡಿದೆ. ಇದೇ ವಿಚಾರವಾಗಿ ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆಯಂತೆ.

ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ನೇತೃತ್ವದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ-ಐಸಿಸಿ ತಪಾಸಣಾ ತಂಡವು ಧರ್ಮಶಾಲಾ ಔಟ್‌ಫೀಲ್ಡ್‌ ಬಗ್ಗೆ ತೃಪ್ತಿದಾಯಕ ವಿಮರ್ಶೆಯನ್ನು ನೀಡಿಲ್ಲ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಆತಂಕಕ್ಕೆ ಕಾರಣವಾದ ಔಟ್‌ಫೀಲ್ಡ್‌ನಲ್ಲಿ ಬೆಳೆದಿರುವ ಶಿಲೀಂಧ್ರಗಳು

ಔಟ್‌ಫೀಲ್ಡ್‌ನಲ್ಲಿ ಶಿಲೀಂಧ್ರಗಳು ಬೆಳೆದಿರುವುದು ಐಸಿಸಿ ತಪಾಸಣಾ ತಂಡವನ್ನು ತೃಪ್ತಿಕರ ವಿಮರ್ಶೆಯನ್ನು ಮಾಡಿಲ್ಲ. ಹಿಮಾಚಾಲ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಓಟ್‌ಫೀಲ್ಡ್‌ನ ಸ್ಥಿತಿಯ ಸ್ಪಷ್ಟ ಚಿತ್ರಣವನ್ನು ಪಡೆಯಲು ಬಿಸಿಸಿಐ ತಂಡವು ಮುಂದಿನ ಕೆಲವು ದಿನಗಳಲ್ಲಿ ಮತ್ತೊಂದು ತಪಾಸಣೆ ಮಾಡಲು ಸಿದ್ಧವಾಗಿದೆ.

ಬಿಸಿಸಿಐ ಮತ್ತು ಹೆಚ್‌ಪಿಸಿಎ ಈ ಸಮಸ್ಯೆಯನ್ನು ಅದಷ್ಟು ಬೇಗ ಪರಿಹರಿಸಿ ಐಸಿಸಿ ಏಕದಿನ ವಿಶ್ವಕಪ್ ಆರಂಭದ ವೇಳೆಗೆ ಮೈದಾನವನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವ ಭರವಸೆಯಲ್ಲಿವೆ. ಧರ್ಮಶಾಲಾ ಸ್ಟೇಡಿಯಂನ ಔಟ್‌ಫೀಲ್ಡ್‌ ಹೀಗೆ ಸಮಸ್ಯೆಗಳಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ.

2023ರ ಆರಂಭದಲ್ಲಿ ಔಟ್‌ಫೀಲ್ಡ್ ಬೋಲ್ಡ್‌ ಆಗಿದ್ದ ಕಾರಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವನ್ನು ಧರ್ಮಶಾಲದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಆನಂತರ ಇಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೆ ಐಪಿಎಲ್‌ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಆದೆರ ಇದೀಗ ಔಟ್‌ಫೀಲ್ಡ್‌ನಲ್ಲಿ ಫಂಗಸ್ ಕಾಣಿಸಿಕೊಂಡಿರುವುದು ಐಸಿಸಿ ಮತ್ತು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಮುಂದೆ ಇಂತಹ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು.

ಧರ್ಮಶಾಲದಲ್ಲಿ ಅಕ್ಟೋಬರ್ 7 ರಂದು ಮೊದಲ ಪಂದ್ಯ

ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಎರಡು ದಿನಗಳ ಬಳಿಕ ಅಂದರೆ ಅಕ್ಟೋಬರ್ 7 ರಂದು ಧರ್ಮಶಾಲಾ ಮೈದಾನದಲ್ಲಿ ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ನಡುವೆ ಟೂರ್ನಿಯ ಮೂರನೇ ಪಂದ್ಯವನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 10 ರಂದು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಇದಾದ ಒಂದು ವಾರದ ಬಳಿಕ ಅಂದರೆ ಅಕ್ಟೋಬರ್ 17 ರಂದು ದಕ್ಷಿಣ ಅಫ್ರಿಕಾ ವಿರುದ್ಧ ನೆದರ್‌ಲ್ಯಾಂಡ್ಸಸ್, ಅಕ್ಟೋಬರ್ 22 ರಂದು ಇದೇ ಮೈದಾನದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹಣಾಹಣಿ ನಡೆಸಲಿವೆ.

ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ

IPL, 2024

Live

PBKS

180/3

17.0 Overs

VS

SRH

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ