logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆಡದಿದ್ದರೇನಂತೆ ಡಕೌಟ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ನೋಡಿ ಗ್ಲೆನ್ ಮ್ಯಾಕ್ಸ್​ವೆಲ್; ಆರ್​ಸಿಬಿ ಸೋತಿದ್ದೇ ನಿನ್ನಿಂದ ಎಂದ ಫ್ಯಾನ್ಸ್

ಆಡದಿದ್ದರೇನಂತೆ ಡಕೌಟ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ನೋಡಿ ಗ್ಲೆನ್ ಮ್ಯಾಕ್ಸ್​ವೆಲ್; ಆರ್​ಸಿಬಿ ಸೋತಿದ್ದೇ ನಿನ್ನಿಂದ ಎಂದ ಫ್ಯಾನ್ಸ್

Prasanna Kumar P N HT Kannada

May 23, 2024 02:20 PM IST

google News

ಆಡದಿದ್ದರೇನಂತೆ ಡಕೌಟ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ನೋಡಿ ಗ್ಲೇನ್ ಮ್ಯಾಕ್ಸ್​ವೆಲ್; ಆರ್​ಸಿಬಿ ಸೋತಿದ್ದೇ ನಿನ್ನಿಂದ ಎಂದ ಫ್ಯಾನ್ಸ್

    • Glenn Maxwell : ಪ್ರಸಕ್ತ ಐಪಿಎಲ್​ನಲ್ಲಿ ಹೀನಾಯ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್, ಆಡದಿದ್ದರೂ ಡಕೌಟ್​ನಲ್ಲಿ ದಾಖಲೆ ಬರೆದಿದ್ದಾರೆ.
ಆಡದಿದ್ದರೇನಂತೆ ಡಕೌಟ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ನೋಡಿ ಗ್ಲೇನ್ ಮ್ಯಾಕ್ಸ್​ವೆಲ್; ಆರ್​ಸಿಬಿ ಸೋತಿದ್ದೇ ನಿನ್ನಿಂದ ಎಂದ ಫ್ಯಾನ್ಸ್
ಆಡದಿದ್ದರೇನಂತೆ ಡಕೌಟ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ನೋಡಿ ಗ್ಲೇನ್ ಮ್ಯಾಕ್ಸ್​ವೆಲ್; ಆರ್​ಸಿಬಿ ಸೋತಿದ್ದೇ ನಿನ್ನಿಂದ ಎಂದ ಫ್ಯಾನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್​​-2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) 4 ವಿಕೆಟ್​ಗಳ ಸೋಲನುಭವಿಸಿತು. ಬ್ಯಾಟರ್​ಗಳ ವೈಫಲ್ಯವೇ ಸೋಲಿಗೆ ಕಾರಣವಾಗಿದೆ. ಅದರಲ್ಲೂ ಗ್ಲೆನ್​ ಮ್ಯಾಕ್ಸ್​ವೆಲ್ (Glenn Maxwell) ಸತತ ವೈಫಲ್ಯ ತಂಡ ಭಾರಿ ಹಿನ್ನಡೆ ಅನುಭವಿಸುವಂತೆ ಮಾಡಿತು. ಮಹತ್ವದ ಪಂದ್ಯದಲ್ಲೂ ಶೂನ್ಯಕ್ಕೆ ಡಕೌಟ್ ಆಗುವ ದಾಖಲೆ ಬರೆದಿದ್ದಾರೆ.

ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಡು ಆರ್​ ಡೈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡವು, ಬ್ಯಾಟರ್​ಗಳ ವೈಫಲ್ಯದಿಂದ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್​ಆರ್​, 19 ಓವರ್​ಗಳಲ್ಲೇ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಆ ಮೂಲಕ ಮೇ 24 ರಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

ಸೋತ ಆರ್​ಸಿಬಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಬ್ಯಾಟರ್​ಗಳು ನಿರಾಸೆ ಮೂಡಿಸಿದ್ದೇ ಬ್ಯಾಟರ್​​ಗಳ ಕಳಪೆ ಪ್ರದರ್ಶನ. ಅದರಲ್ಲೂ ಗ್ಲೆನ್ ಮ್ಯಾಕ್ಸ್​ವೆಲ್ ಕೆಟ್ಟ ಆಟವೇ ತಂಡವು ಮುಳುಗಲು ಕಾರಣ. ಟೂರ್ನಿಯ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆ ಹಲವು ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಬದಲಿಗೆ ವಿಲ್ ಜಾಕ್ಸ್ ಅವಕಾಶ ಪಡೆದು ಮಿಂಚಿದ್ದರು.

ವಿಲ್ ಜಾಕ್ಸ್ ತವರಿಗೆ ಮರಳಿದ ನಂತರ ಮತ್ತೆ ಅವಕಾಶ ಪಡೆದ ಮ್ಯಾಕ್ಸ್​ವೆಲ್, ಪುನರಾಗಮನ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಮತ್ತದೇ ಹೀನಾಯ ಪ್ರದರ್ಶನ ತೋರಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಗ್ಲೆನ್ ಮ್ಯಾಕ್ಸ್​ವೆಲ್, ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ಅಶ್ವಿನ್ ಅವರ ಬೌಲಿಂಗ್​ನಲ್ಲಿ ಧ್ರುವ್​ ಜುರೆಲ್​ಗೆ ಕ್ಯಾಚ್​ ನೀಡಿ ಡಕೌಟ್ ಆದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅಧಿಕ ಡಕೌಟ್ ಆದ ಆಟಗಾರ ಎನಿಸಿದ್ದಾರೆ.

ಡಿಕೆ ದಾಖಲೆ ಸರಿಗಟ್ಟಿದ ಮ್ಯಾಕ್ಸ್​ವೆಲ್

ಐಪಿಎಲ್​ನಲ್ಲಿ ಅತ್ಯಧಿಕ ಬಾರಿ ಡಕೌಟ್ ಆದ ಆಟಗಾರ ಎಂಬ ಕುಖ್ಯಾತಿಗೆ ದಿನೇಶ್ ಕಾರ್ತಿಕ್ ಪಾತ್ರರಾಗಿದ್ದಾರೆ. ಡಿಕೆ ಒಟ್ಟು 18 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಕಾರ್ತಿಕ್ ದಾಖಲೆಯನ್ನು ಮ್ಯಾಕ್ಸ್​ವೆಲ್ ಸರಿಗಟ್ಟಿದ್ದಾರೆ. ಮ್ಯಾಕ್ಸಿ ಸಹ 18 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ. ಇನ್ನು ಇದೇ ಸೀಸನ್​ನಲ್ಲಿ ಆಸೀಸ್​ ಆಟಗಾರ ನಾಲ್ಕು ಬಾರಿ ಡಕೌಟ್ ಆಗಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ರೋಹಿತ್​ ಶರ್ಮಾ 17, ಪಿಯೂಷ್ ಚಾವ್ಲಾ ಮತ್ತು ಸುನಿಲ್ ನರೇನ್ ತಲಾ 16 ಬಾರಿ ಶೂನ್ಯಕ್ಕೆ ಔಟಾಗಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

ಮ್ಯಾಕ್ಸಿಯನ್ನು ಮೊದಲು ತಂಡದಿಂದ ಕಿತ್ತಾಕಿ ಎಂದ ಫ್ಯಾನ್ಸ್

17ನೇ ಆವೃತ್ತಿಯ ಐಪಿಎಲ್​ ಗ್ಲೆನ್ ಮ್ಯಾಕ್ಸ್​ವೆಲ್ ಪಾಲಿಗೆ ಕೆಟ್ಟ ಸೀಸನ್​ ಆಗಿದೆ. ಈ ಬಾರಿ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಕೇವಲ 52 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 5.78. ಇದು ಒಬ್ಬ ಬೌಲರ್​​ಗಿಂತಲೂ ಕಡಿಮೆ. ಅವರ ಗರಿಷ್ಠ ಸ್ಕೋರ್ 28. ನಾಲ್ಕು ಬಾರಿ ಡಕೌಟ್ ಆಗಿದ್ದಾರೆ. ಅವರ ಹೀನಾಯ ಪ್ರದರ್ಶನದ ವಿರುದ್ಧ ಮ್ಯಾಕ್ಸ್​​​ವೆಲ್, ಆರ್​ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಸೀಸನ್​ಗೆ ಕೈಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ