logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಗೆಲ್ಲುವ ಕನಸಲ್ಲಿದ್ದ ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ನಿರಾಶೆ; ಪಾಕಿಸ್ತಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸರ್ಕಾರ

ಟಿ20 ವಿಶ್ವಕಪ್ ಗೆಲ್ಲುವ ಕನಸಲ್ಲಿದ್ದ ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ನಿರಾಶೆ; ಪಾಕಿಸ್ತಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸರ್ಕಾರ

Jayaraj HT Kannada

Nov 20, 2024 12:28 PM IST

google News

ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ನಿರಾಶೆ; ಪಾಕಿಸ್ತಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸರ್ಕಾರ

    • ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತ ಅಂಧರ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಆದರೆ ಭಾರತ ಸರ್ಕಾರವು ಅನುಮತಿ ನಿರಾಕರಿಸಿದ್ದು, ತಂಡಕ್ಕೆ ಭಾರಿ ನಿರಾಶೆಯಾಗಿದೆ.
ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ನಿರಾಶೆ; ಪಾಕಿಸ್ತಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸರ್ಕಾರ
ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ನಿರಾಶೆ; ಪಾಕಿಸ್ತಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸರ್ಕಾರ (CABI)

ಪಾಕಿಸ್ತಾನದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್‌ ಟ್ರೋಫಿಯಲ್ಲಿ ಆಡಲು ಭಾರತೀಯ ಪುರುಷರ ಕ್ರಿಕೆಟ್‌ ತಂಡವು ಪ್ರಯಾಣಿಸುವುದು ಇನ್ನೂ ಖಚಿತವಾಗಿಲ್ಲ. ಹಲವು ಗೊಂದಲಗಳ ನಡುವೆ, ಟೂರ್ನಿ ಪಾಕ್‌ ನೆಲದಲ್ಲಿ ನಡೆಯುವುದು ಅನುಮಾನವಾಗಿದೆ. ಇದರ ನಡುವೆ, ಭಾರತೀಯ ಅಂಧರ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಷ್ಟ್ರೀಯ ಫೆಡರೇಶನ್ ಮಂಗಳವಾರ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ರಾಜಕೀಯ ಸಂಬಂಧ ಹದಗೆಟ್ಟಿದೆ. ಇದರ ನಡುವೆ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದೆ. ಹೀಗಾಗಿ ಅಂಧರ ತಂಡ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ಅಂಧರ ವಿಶ್ವಕಪ್‌ ಟೂರ್ನಿಯು ನವೆಂಬರ್ 23ರಿಂದ ಡಿಸೆಂಬರ್ 3ರವರೆಗೆ ನಡೆಯಲಿದೆ. ಭಾರತ ಅಂಧರ ತಂಡವು ನೆವೆಂಬರ್‌ 20ರ ಬುಧವಾರ ವಾಘಾ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಇದಕ್ಕೆ ಕ್ರೀಡಾ ಸಚಿವಾಲಯದಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) ಸಿಕ್ಕಿತ್ತು. ಆದರೆ, ಭಾರತೀಯ ವಿದೇಶಾಂಗ ಇಲಾಖೆ ಅನುಮತಿ ನೀಡಿಲ್ಲ.

ತಂಡಕ್ಕೆ ನಿರಾಶೆ

“ಅಂಧರ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ ಎಂದು ನಮಗೆ ಅನಧಿಕೃತವಾಗಿ ತಿಳಿಸಲಾಗಿದೆ. ನಾವು ಬುಧವಾರ ವಾಘಾ ಗಡಿಗೆ ಪ್ರಯಾಣಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಸಚಿವಾಲಯದ ಅಧಿಕಾರಿಗಳಿಂದ ಯಾವುದೇ ಅನುಮತಿ ಬಂದಿಲ್ಲ. ಹೀಗಾಗಿ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ” ಎಂದು ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಷನ್ (ಐಬಿಸಿಎ) ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ನಿರಾಕರಣೆಗೆ ಬೇಸರ

“ಭಾರತದ ಪುರುಷರ ಕ್ರಿಕೆಟ್ ತಂಡವೇ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿಲ್ಲದಿದ್ದಾಗ ಅಂಧರ ತಂಡ ಅಲ್ಲಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಅವರು ಹೇಳುತ್ತಿದ್ದಾರೆ. ಸಹಜವಾಗಿ, ನಾವು ಈ ನಿರ್ಧಾರವನ್ನು ಸ್ವೀಕರಿಸುತ್ತೇವೆ. ಆದರೆ ಕೊನೆಯ ಕ್ಷಣದವರೆಗೆ ಈ ನಿರ್ಧಾರವನ್ನು ಏಕೆ ತಡೆಹಿಡಿಯಬೇಕು? ಒಂದು ತಿಂಗಳು ಅಥವಾ 25 ದಿನಗಳ ಹಿಂದೆ ನಮಗೆ ಏಕೆ ತಿಳಿಸಿಲ್ಲ,” ಎಂದು ಯಾದಾಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೂ ಪಾಕಿಸ್ತಾನ ಆತಿಥ್ಯ ನೀಡಬೇಕಿದೆ. ಆದರೆ ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ವೇಳಾಪಟ್ಟಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಎಂಟು ತಂಡಗಳು ಭಾಗವಹಿಸುವ ಪ್ರಮುಖ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತ ಈವರೆಗೂ ಸಮ್ಮತಿ ಸೂಚಿಸಿಲ್ಲ. ಪಾಕಿಸ್ತಾನದ ಗಡಿಯಾಚೆಗೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ದಿಟ್ಟವಾಗಿ ಹೇಳಿದೆ. ಹೀಗಾಗಿ ಪಂದ್ಯಾವಳಿ ಎಲ್ಲಿ ನಡೆಯಲಿದೆ ಹಾಗೂ ಭಾರತ ತಂಡ ಟೂರ್ನಿಯಲ್ಲಿ ಭಾಗವಹಿಸುತ್ತಾ ಎಂಬುದು ಸದ್ಯದ ಕುತೂಹಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ