logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಡೆಡ್​ಲೈನ್ ಮುಗಿದರೂ ವಿಶ್ವಕಪ್​ಗೆ ತಂಡ ಘೋಷಿಸದ ಪಿಸಿಬಿ

ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಡೆಡ್​ಲೈನ್ ಮುಗಿದರೂ ವಿಶ್ವಕಪ್​ಗೆ ತಂಡ ಘೋಷಿಸದ ಪಿಸಿಬಿ

Prasanna Kumar P N HT Kannada

May 02, 2024 02:36 PM IST

google News

ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಡೆಡ್​ಲೈನ್ ಮುಗಿದರೂ ವಿಶ್ವಕಪ್​ಗೆ ತಂಡದ ಘೋಷಿಸದ ಪಿಸಿಬಿ

    • Pakistan Cricket Team: ಟಿ20 ವಿಶ್ವಕಪ್ 2024​ ಟೂರ್ನಿಗೆ ತಮ್ಮ ತಂಡವನ್ನು ಅಂತಿಮಗೊಳಿಸದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಬಾಬರ್ ಅಜಮ್ ನೇತೃತ್ವದ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಡೆಡ್​ಲೈನ್ ಮುಗಿದರೂ ವಿಶ್ವಕಪ್​ಗೆ ತಂಡದ ಘೋಷಿಸದ ಪಿಸಿಬಿ
ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಡೆಡ್​ಲೈನ್ ಮುಗಿದರೂ ವಿಶ್ವಕಪ್​ಗೆ ತಂಡದ ಘೋಷಿಸದ ಪಿಸಿಬಿ

ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ (Ireland and England) ವಿರುದ್ಧದ ಟಿ20ಐ ಸರಣಿಗೆ 18 ಸದಸ್ಯರ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರಕಟಿಸಿದೆ.​ ಮೇ 10, 12 ಮತ್ತು 14 ರಂದು ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿರುವ 2009ರ ಟಿ20 ವಿಶ್ವಕಪ್ ಚಾಂಪಿಯನ್ ತಂಡವು, ಮೇ 22 ರಿಂದ 4 ಪಂದ್ಯಗಳ ಟಿ20ಐ ಸರಣಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.

ಟಿ20 ವಿಶ್ವಕಪ್ 2024ರ ಮೊದಲು ಎರಡು ವಿದೇಶಿ ಪ್ರವಾಸಗಳಿಗೆ ಆಯ್ಕೆಯಾದ ತಂಡದಲ್ಲಿ ಸ್ಟಾರ್ ವೇಗಿ ಹ್ಯಾರಿಸ್ ರೌಫ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸುಮಾರು 3 ತಿಂಗಳ ನಂತರ ರೌಫ್ ತಂಡಕ್ಕೆ ಮರಳುತ್ತಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) 2024ರ ಪಂದ್ಯದ ವೇಳೆ ಲಾಹೋರ್ ಖಲಂದರ್ಸ್‌ ಪರ ಆಡುವಾಗ ಗಾಯಗೊಂಡಿದ್ದರು. ಹೀಗಾಗಿ, ಕಳೆದ ತಿಂಗಳು ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಗೆ ಮಿಸ್ ಆಗಿದ್ದರು.

ವಿಕೆಟ್‌ಕೀಪರ್-ಬ್ಯಾಟರ್​​ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಅಜಮ್ ಖಾನ್ ಅವರು ಗಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನ್ಯೂಜಿಲೆಂಡ್ ಟಿ20ಐ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗೆ ಆಯ್ಕೆಯಾದ ತಂಡಕ್ಕೆ ಮರಳಿದ್ದಾರೆ. ವೇಗಿ ಹಸನ್ ಅಲಿ ಪುನರಾಗಮನ ಮಾಡಿದ್ದಾರೆ. 18 ಸದಸ್ಯರ ತಂಡವನ್ನು ಬಾಬರ್ ಅಜಮ್ ಮುನ್ನಡೆಸಲಿದ್ದಾರೆ.

ಹ್ಯಾರಿಸ್ ರೌಫ್ ಮತ್ತು ಹಸನ್ ಅಲಿ ಹೊರತುಪಡಿಸಿ ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್ ಮತ್ತು ಅಬ್ಬಾಸ್ ಅಫ್ರಿದಿ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಲಾಗಿದೆ. ಅಬ್ರಾರ್ ಅಹ್ಮದ್ ಮಾತ್ರ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಆಡಿದ ಉಸಾಮಾ ಮಿರ್ ಮತ್ತು ಜಮಾನ್ ಖಾನ್ ಅವರನ್ನು ಮುಂಬರುವ ಎರಡು ಸರಣಿಗಳಿಗೆ ತಂಡದಿಂದ ಕೈಬಿಡಲಾಗಿದೆ.

ಇಫ್ತಿಕಾರ್ ಅಹ್ಮದ್, ಇಮಾದ್ ವಾಸೀಂ, ಶಾದಾಬ್ ಖಾನ್, ಸಲ್ಮಾನ್ ಅಲಿ ಅಘಾ ನಾಲ್ವರು ಆಲ್​​ರೌಂಡರ್ಸ್ ಮತ್ತು ಮೊಹಮ್ಮದ್ ರಿಜ್ವಾನ್, ಅಜಮ್ ಖಾನ್ ಮತ್ತು ಉಸ್ಮಾನ್ ಖಾನ್ 3 ವಿಕೆಟ್ ಕೀಪರ್-ಬ್ಯಾಟರ್​​ಗಳಿದ್ದಾರೆ. ಬಾಬರ್ ಅಜಮ್, ಸೈಮ್ ಅಯೂಬ್, ಫಖರ್ ಜಮಾನ್ ಮತ್ತು ಮೊಹಮ್ಮದ್ ಇರ್ಫಾನ್ ತಂಡದಲ್ಲಿರುವ ಸ್ಪೆಷಲಿಸ್ಟ್ ಬ್ಯಾಟರ್​ಗಳಾಗಿದ್ದಾರೆ.

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಪಾಕಿಸ್ತಾನದ ತಂಡ

ಬಾಬರ್ ಅಜಮ್ (ನಾಯಕ), ಸೈಮ್ ಅಯೂಬ್, ಫಖಾರ್ ಜಮಾನ್, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅಜಮ್ ಖಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಇಮಾದ್ ವಾಸಿಮ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಅಬ್ರಾರ್ ಅಹ್ಮದ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ಅಮೀರ್, ಅಬ್ಬಾಸ್ ಅಫ್ರಿದಿ.

ಟಿ20 ವಿಶ್ವಕಪ್​ಗೆ ಮೇ 24ರೊಳಗೆ ತಂಡ ಪ್ರಕಟ

ಸದ್ಯ ಐರ್ಲೆಂಡ್ ಮತ್ತು ಇಂಗ್ಲೆಂಡ್​ ಸರಣಿಗೆ ತಂಡವನ್ನು ಪ್ರಕಟಿಸಿರುವ ಪಿಸಿಬಿ, ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಅಂತಿಮಗೊಳಿಸಿಲ್ಲ. ಈ ತಂಡವನ್ನು ಮೇ 24ರೊಳಗೆ ಪ್ರಕಟಿಸುವುದಾಗಿ ಪಿಸಿಬಿ ತಿಳಿಸಿದೆ. ಈ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಮಣೆ ಹಾಕುವುದಾಗಿ ತಿಳಿಸಿದೆ. ಪಾಕಿಸ್ತಾನವು ತನ್ನ ಟಿ20 ವಿಶ್ವಕಪ್ ತಂಡವನ್ನು ಮೇ 23 ಅಥವಾ 24 ರಂದು ಪ್ರಕಟಿಸಲಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಮೇ 1ರೊಳಗೆ ತಂಡವನ್ನು ಪ್ರಕಟಿಸಬೇಕಿತ್ತು. ಇದು ಡೆಡ್​​ಲೈನ್​ ಆಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ