logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆತ ವಾಸೀಂ ಅಕ್ರಮ್ ಅಲ್ಲ, ತುಂಬಾ ಹೈಪ್ ಕೊಡುವ ಅಗತ್ಯವಿಲ್ಲ; ಶಾಹೀನ್ ಅಫ್ರಿದಿ ವಿರುದ್ಧ ರವಿ ಶಾಸ್ತ್ರಿ ಗರಂ

ಆತ ವಾಸೀಂ ಅಕ್ರಮ್ ಅಲ್ಲ, ತುಂಬಾ ಹೈಪ್ ಕೊಡುವ ಅಗತ್ಯವಿಲ್ಲ; ಶಾಹೀನ್ ಅಫ್ರಿದಿ ವಿರುದ್ಧ ರವಿ ಶಾಸ್ತ್ರಿ ಗರಂ

Prasanna Kumar P N HT Kannada

Oct 16, 2023 04:36 PM IST

ವಾಸೀಂ ಅಕ್ರಮ್, ಶಾಹೀನ್ ಅಫ್ರಿದಿ, ರವಿ ಶಾಸ್ತ್ರಿ.

    • Ravi Shastri: ಶಾಹೀನ್ ಅಫ್ರಿದಿ ಉತ್ತಮ ಬೌಲರ್, ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯಬಲ್ಲರು. ಹಾಗಂತ ವಾಸೀಂ ಅಕ್ರಮ್ ಆಗಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಟೀಕಿಸಿದ್ದಾರೆ.
ವಾಸೀಂ ಅಕ್ರಮ್, ಶಾಹೀನ್ ಅಫ್ರಿದಿ, ರವಿ ಶಾಸ್ತ್ರಿ.
ವಾಸೀಂ ಅಕ್ರಮ್, ಶಾಹೀನ್ ಅಫ್ರಿದಿ, ರವಿ ಶಾಸ್ತ್ರಿ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) ಟೀಮ್ ಇಂಡಿಯಾ (India vs Pakistan) ಎದುರಿನ ಪಂದ್ಯದಲ್ಲಿ ಚೆನ್ನಾಗಿ ದಂಡಿಸಿಕೊಂಡ ಪಾಕ್ ವೇಗಿ ಶಾಹೀನ್ ಅಫ್ರಿದಿ ಅವರನ್ನು (Shaheen Afridi) ಮಾಜಿ ಕ್ರಿಕೆಟಿಗ, ಕಾಮೆಂಟೇಟರ್​ ರವಿ ಶಾಸ್ತ್ರಿ (Ravishastri) ಟೀಕಿಸಿದ್ದಾರೆ. ಅಕ್ಟೋಬರ್ 14ರಂದು ಶನಿವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕಾಮೆಂಟರಿ ನಡೆಸುವ ವೇಳೆ ಶಾಹೀನ್​ ಅಫ್ರಿದಿ ಅವರು ವಾಸೀಂ ಅಕ್ರಮ್ (Wasim Akram) ಅಲ್ಲ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ಶಾಹೀನ್ ಶಾ ಅಫ್ರಿದಿ ಬೌಲಿಂಗ್​​ನಲ್ಲಿ ರೋಹಿತ್​ ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದರು. ಕಳೆದ ಎರಡು ವರ್ಷಗಳಿಂದ ರೋಹಿತ್​​ರನ್ನು ಕಾಡುತ್ತಿದ್ದ ಶಾಹೀನ್​ಗೆ ಮುಟ್ಟಿನೋಡಿಕೊಳ್ಳುವಂತೆ ಬ್ಯಾಟ್​ನಲ್ಲಿ ದಂಡಿಸಿದ್ದರು. ಅಕ್ಷರಶಃ ರೌದ್ರಾವತಾರ ತೋರಿದ ರೋಹಿತ್​, ಮೈದಾನದ ಮೂಲೆಮೂಲೆಗೂ ಚೆಂಡಿನ ದರ್ಶನ ಮಾಡಿದರು. 63 ಎಸೆತಗಳಲ್ಲಿ ತಲಾ 6 ಸಿಕ್ಸರ್, ಬೌಂಡರಿಗಳ ನೆರವಿನಿಂದ 86 ರನ್ ಚಚ್ಚಿದರು. ಇದರೊಂದಿಗೆ ಪಂದ್ಯದ ಹಿಡಿತ ಸಾಧಿಸಿದರು.

21ನೇ ಓವರ್​​ನಲ್ಲಿ ಶಾಸ್ತ್ರಿ ಪ್ರತಿಕ್ರಿಯೆ

ಈ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್​ ಶರ್ಮಾ ಮತ್ತು ಬೇಗನೇ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್​ ಅವರ ವಿಕೆಟ್ ಪಡೆದರು. ಇದರ ನಡುವೆಯೂ ಪಂದ್ಯದ ನಡುವೆ ಅಂದರೆ ಭಾರತದ ಮೊತ್ತ 150ರ ಗಡಿ ದಾಟಿದಾಗ, ರವಿ ಶಾಸ್ತ್ರಿ ಇನ್ನಿಂಗ್ಸ್‌ನ 21ನೇ ಓವರ್‌ನಲ್ಲಿ ಶಾಹೀನ್​ ಶಾ ಅಫ್ರಿದಿ ಕುರಿತು ಕುತೂಹಲಕಾರಿ ಕಾಮೆಂಟ್ ಮಾಡಿದರು. ವಾಸೀಂ ಅಕ್ರಮ್​ಗೆ ಹೋಲಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಅನೇಕ ಕ್ರಿಕೆಟಿಗರು ಶಾಹೀನ್​ರನ್ನು ವಾಸೀಂಗೆ ಹೋಲಿಸಿದ್ದಾರೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ಕಿಡಿಕಾರಿದ್ದಾರೆ.

‘ತುಂಬಾ ಹೈಪ್ ಕೊಡುವ ಅಗತ್ಯ ಇಲ್ಲ’

ಶಾಹೀನ್ ಅವರು, ವಾಸಿಂ ಅಕ್ರಮ್ ಅಲ್ಲ. ಭಾರತ-ಪಾಕಿಸ್ತಾನ ಪಂದ್ಯದ ನಂತರ ಹೆಚ್ಚು ಪ್ರಚಾರ ಮಾಡಬಾರದು. ಅವರು ಉತ್ತಮ ಬೌಲರ್, ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯಬಲ್ಲರು. ಹಾಗಂತ ವಾಸೀಂ ಅಕ್ರಮ್ ಆಗಲು ಸಾಧ್ಯವಿಲ್ಲ. ನಾವು ಅವರನ್ನು ತುಂಬಾ ಹೈಪ್ ಮಾಡುವ ಅಗತ್ಯವಿಲ್ಲ. ಒಬ್ಬ ಉತ್ತಮ ಆಟಗಾರ ಎಂದಷ್ಟೇ ನಮ್ಮ ಹೊಗಳಿಕೆಗೆ ಸೀಮಿತಗೊಳಿಸಬೇಕು. ಶ್ರೇಷ್ಠ ಆಟಗಾರನಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

ವಿಶ್ವಕಪ್​ನಲ್ಲಿ ಶಾಹೀನ್ ಪ್ರದರ್ಶನ

ಭಾರತದ ಎದುರಿನ ಪಂದ್ಯದಲ್ಲಿ 6 ಓವರ್​​ ಎಸೆದ ಶಾಹೀನ್ 36 ರನ್ ನೀಡಿದ್ದಾರೆ. ಅಲ್ಲದೆ, 2 ವಿಕೆಟ್ ಪಡೆದಿದ್ದಾರೆ. ನೆದರ್ಲೆಂಡ್ ಎದುರು 7 ಓವರ್​​ಗಳಲ್ಲಿ 37 ರನ್ ನೀಡಿ 1 ವಿಕೆಟ್ ಉರುಳಿಸಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧ 9 ಓವರ್​​ಗಳಲ್ಲಿ 66 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಡೇಂಜರಸ್ ಬೌಲರ್ ಎಂದು ಕರೆಸಿಕೊಂಡರೂ ಅವರು ರನ್​ ಬಿಟ್ಟುಕೊಟ್ಟಿದ್ದಾರೆ.

ವಾಸೀಂ ಅಕ್ರಮ್​ಗೆ ಹೋಲಿಕೆ

ಶಾಹೀನ್ ಶಾ ಅಫ್ರಿದಿಯನ್ನು ಪಾಕಿಸ್ತಾನ ದಿಗ್ಗಜ ವೇಗಿ ವಾಸೀಂ ಅಕ್ರಮ್​ಗೆ ಹೋಲಿಕೆ ಮಾಡಲಾಗಿದೆ. ಹಲವು ಮಾಜಿ ಕ್ರಿಕೆಟರ್​​ಗಳು ಪಾಕಿಸ್ತಾನದ ಎರಡನೇ ವಾಸೀಂ ಅಕ್ರಮ್​ ಎಂದೆಲ್ಲಾ ಹೇಳಿದ್ದಾರೆ. ಇನ್ನೂ ಕೆಲವರು ಅವರನ್ನೇ ಮೀರಿಸುತ್ತಾರೆ ಎಂದೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. ವಾಸೀಂ ಅಕ್ರಮ್ ಏಕದಿನ ಕ್ರಿಕೆಟ್​​ನಲ್ಲಿ 356 ಪಂದ್ಯಗಳನ್ನಾಡಿ 502 ವಿಕೆಟ್ ಪಡೆದಿದ್ದಾರೆ. 104 ಟೆಸ್ಟ್​ ಪಂದ್ಯಗಳಲ್ಲಿ 414 ವಿಕೆಟ್ ಉರುಳಿಸಿದ್ದಾರೆ. ವಾಸೀಂ ಅಕ್ರಮ್​ ಎದುರಿಸಲು ಘಟಾನುಘಟಿ ಆಟಗಾರರೇ ಹಿಂಜರಿಯುತ್ತಿದ್ದರು ಎಂಬುದು ವಿಶೇಷ.

IPL, 2024

Live

RCB

31/0

3.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ