ಕನ್ನಡ ಸುದ್ದಿ  /  ಕ್ರಿಕೆಟ್  /  ಎಲ್ಲರೂ ಬ್ಯಾಟಿಂಗ್​-ಬೌಲಿಂಗ್ ಅಭ್ಯಾಸ ಮಾಡ್ತಿದ್ರೆ, ಈತ ಟಾಸ್ ಹಾಕೋದನ್ನೇ ಪ್ರಾಕ್ಟೀಸ್ ಮಾಡ್ತಾರಂತೆ!

ಎಲ್ಲರೂ ಬ್ಯಾಟಿಂಗ್​-ಬೌಲಿಂಗ್ ಅಭ್ಯಾಸ ಮಾಡ್ತಿದ್ರೆ, ಈತ ಟಾಸ್ ಹಾಕೋದನ್ನೇ ಪ್ರಾಕ್ಟೀಸ್ ಮಾಡ್ತಾರಂತೆ!

Prasanna Kumar P N HT Kannada

May 02, 2024 03:29 PM IST

ಎಲ್ಲರೂ ಬ್ಯಾಟಿಂಗ್​-ಬೌಲಿಂಗ್ ಅಭ್ಯಾಸ ಮಾಡ್ತಾರೆ; ಈತ ಮಾತ್ರ ಟಾಸ್ ಹಾಕೋದನ್ನೇ ಪ್ರಾಕ್ಟೀಸ್ ಮಾಡ್ತಾರಂತೆ!

    • IPL 2024: 17ನೇ ಆವೃತ್ತಿಯ ಐಪಿಎಲ್​ನಲ್ಲಿ ನಾಯಕನೊಬ್ಬ ಟಾಸ್ ಹಾಕೋದನ್ನೇ ಅಭ್ಯಾಸ ಮಾಡುತ್ತಿದ್ದಾರಂತೆ. ಈಗಾಗಲೇ ಅವರು ಆಡಿದ 10 ಪಂದ್ಯಗಳಲ್ಲಿ 9 ಬಾರಿ ಟಾಸ್ ಸೋತಿದ್ದಾರೆ.
ಎಲ್ಲರೂ ಬ್ಯಾಟಿಂಗ್​-ಬೌಲಿಂಗ್ ಅಭ್ಯಾಸ ಮಾಡ್ತಾರೆ; ಈತ ಮಾತ್ರ ಟಾಸ್ ಹಾಕೋದನ್ನೇ ಪ್ರಾಕ್ಟೀಸ್ ಮಾಡ್ತಾರಂತೆ!
ಎಲ್ಲರೂ ಬ್ಯಾಟಿಂಗ್​-ಬೌಲಿಂಗ್ ಅಭ್ಯಾಸ ಮಾಡ್ತಾರೆ; ಈತ ಮಾತ್ರ ಟಾಸ್ ಹಾಕೋದನ್ನೇ ಪ್ರಾಕ್ಟೀಸ್ ಮಾಡ್ತಾರಂತೆ! (hindi scoopwhoop Website)

ತನ್ನ ಸಾಮರ್ಥ್ಯ ಸಾಬೀತುಪಡಿಸಲು ಬ್ಯಾಟಿಂಗ್ ಮತ್ತು ಬೌಲಿಂಗ್ ಸತತವಾಗಿ ಅಭ್ಯಾಸ ನಡೆಸುತ್ತಾರೆ. ಅಲ್ಲದೆ, ಫೀಲ್ಡಿಂಗ್ ಪ್ರಾಕ್ಟೀಸ್ ಕೂಡ ಮಾಡುತ್ತಾರೆ. ಯಾವುದೇ ಪಂದ್ಯಕ್ಕೂ ಮುನ್ನ ಜರುಗುವ ಸಹಜ ಪ್ರಕ್ರಿಯೆ. ತಂಡಕ್ಕೆ ಆಯ್ಕೆಯಾದ ಎಲ್ಲರೂ ಸಹ ಈ ಅಭ್ಯಾಸ ನಡೆಸುತ್ತಾರೆ. ಆದರೆ, ಇಲ್ಲೊಬ್ಬ ಟಾಸ್ ಗೆಲ್ಲಲು ಸತತ ಅಭ್ಯಾಸ ನಡೆಸುತ್ತಿದ್ದಾನಂತೆ. ಆ ಆಟಗಾರ ಬೇರೆ ಯಾರೂ ಅಲ್ಲ, ಋತುರಾಜ್ ಗಾಯಕ್ವಾಡ್ (Ruturaj Gaikwad).

ಟ್ರೆಂಡಿಂಗ್​ ಸುದ್ದಿ

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಕುಸಿದ ರಾಜಸ್ಥಾನ್ ರಾಯಲ್ಸ್; ಎದ್ದುಬಿದ್ದು ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್

ಭಾರತ ತಂಡದ ಹೆಡ್​ಕೋಚ್​ ಸ್ಥಾನಕ್ಕೆ ಎಂಎಸ್ ಧೋನಿ ನೆಚ್ಚಿನ ತರಬೇತುದಾರ; ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಯಾರು?

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರ ಪರಿಸ್ಥಿತಿ ಯಾರಿಗೂ ಹೇಳತೀರದ್ದಾಗಿದೆ. ಸಿಎಸ್​ಕೆ ನಾಯಕತ್ವ ವಹಿಸಿಕೊಂಡಾಗಿನಿಂದ ಅವರು ಟಾಸ್ ಗೆಲ್ಲಲು ಹರಸಾಹಸಪಡುತ್ತಿದ್ದಾರೆ. ಆಡಿದ 10 ಪಂದ್ಯಗಳ ಪೈಕಿ 9ರಲ್ಲಿ ಟಾಸ್ ಸೋತಿದ್ದಾರೆ. ಕೇವಲ 1ರಲ್ಲಿ ಗೆದ್ದಿದ್ದಾರೆ. ಇದು ಗಾಯಕ್ವಾಡ್​ಗೆ ಹೆಚ್ಚು ಬೇಸರ ತರಿಸಿದೆ. ಹಾಗಾಗಿ ಟಾಸ್ ಜಯಿಸಲು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರಂತೆ.

ಹೀಗಂತ ಋತುರಾಜ್​ ಗಾಯಕ್ವಾಡ್ ಅವರೇ ಹೇಳಿದ್ದಾರೆ. ಮೇ 1ರ 30ರ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಟಾಸ್ ಸೋತರು. ಇದು ಈ ಋತುವಿನಲ್ಲಿ 10 ಪಂದ್ಯಗಳಲ್ಲಿ ಒಂಬತ್ತನೇ ಬಾರಿಯಾಗಿದೆ. ಎಂಎಸ್ ಧೋನಿ ಬದಲಿಗೆ ಐಪಿಎಲ್ ಆರಂಭಿಕ ಪಂದ್ಯಕ್ಕೂ ಮುನ್ನ ಗಾಯಕ್ವಾಡ್ ಅವರನ್ನು ಸಿಎಸ್​​ಕೆ ಹೊಸ ನಾಯಕನಾಗಿ ಘೋಷಿಸಲಾಯಿತು.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಸ್ಯಾಮ್ ಕರನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಪಿಬಿಕೆಎಸ್ ಏಳು ವಿಕೆಟ್​ಗಳಿಂದ ಜಯಗಳಿಸಿತು. 163 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್, 17.5 ಓವರ್​​​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಸಿಎಸ್​ಕೆ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತ್ತು.

ಟಾಸ್​ ಅಭ್ಯಾಸ ಮಾಡುತ್ತೇನೆ ಎಂದ ಋತುರಾಜ್

ಪಂದ್ಯದ ನಂತರ ಮಾತನಾಡಿದ ಗಾಯಕ್ವಾಡ್, ಟಾಸ್​​​ ವಿಚಾರದಲ್ಲಿ ತಮ್ಮ ಅದೃಷ್ಟದ ಬಗ್ಗೆ ವಿಷಾದಿಸಿದರು. ಟಾಸ್ ಹಾಕುವುದನ್ನು ಸತತ ಅಭ್ಯಾಸ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. 'ಬಹುಶಃ 50-60 ರನ್​​ಗಳ ಕೊರತೆಯಿತ್ತು, ನಾವು ಬ್ಯಾಟಿಂಗ್ ಮಾಡಿದಾಗ ಪಿಚ್ ಉತ್ತಮವಾಗಿರಲಿಲ್ಲ. ನಾನು ಟಾಸ್ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ನನ್ನ ಪರ ಫಲಿತಾಂಶ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಏನು ಮಾಡಬೇಕೆಂದು ಖಚಿತವಿಲ್ಲ. ನಿಜ ಹೇಳಬೇಕೆಂದರೆ, ಟಾಸ್​ಗೆ ಹೋದಾಗ ಒತ್ತಡಕ್ಕೆ ಒಳಗಾಗುತ್ತೇನೆ ಎಂದು ಅವರು ಹೇಳಿದ್ದಾರೆ. ಪರಿಸ್ಥಿತಿಗಳನ್ನು ಪರಿಗಣಿಸಿ ಕಳೆದ ಪಂದ್ಯದಲ್ಲಿ ನಾವು ದೊಡ್ಡ ಅಂತರದಿಂದ ಗೆದ್ದೆವು. ಕಳೆದ 2 ಪಂದ್ಯಗಳಲ್ಲಿ ಪರಿಸ್ಥಿತಿಗಳು ಮತ್ತು ಪಿಚ್ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಇದು ನಮಗೆ ಕಠಿಣವಾಗಿ ಹೋರಾಡಲು ಮತ್ತು 200+ ತಲುಪಲು ಅನುವು ಮಾಡಿಕೊಟ್ಟಿತ್ತು ಎಂದಿದ್ದಾರೆ.

ಆದರೆ ಪಂಜಾಬ್ ಕಿಂಗ್ಸ್ ವಿರುದ್ಧ 180 ರನ್ ಗಳಿಸುವಷ್ಟು ಉತ್ತಮವಾಗಿರಲಿಲ್ಲ. ತಂಡಕ್ಕೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ದೀಪಕ್ ಚಹರ್ ಮೊದಲ ಓವರ್​​​ನಲ್ಲೇ ಹೊರನಡೆದರು. ಆದರೆ ಕೇವಲ ಇಬ್ಬರು ಬೌಲರ್​​ಗಳನ್ನಷ್ಟೇ ಹೊಂದಿದ್ದೆವು. ಉಳಿದ ನಾಲ್ಕು ಪಂದ್ಯಗಳಲ್ಲಿ ನಾವು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸುತ್ತೇವೆ ಎಂದು ಗಾಯಕ್ವಾಡ್ ಅವರು ಹೇಳಿದ್ದಾರೆ.

ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದ ಗಾಯಕ್ವಾಡ್

ಗಾಯಕ್ವಾಡ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ 10 ಪಂದ್ಯಗಳಲ್ಲಿ 146.68 ಸ್ಟ್ರೈಕ್ ರೇಟ್​​ನಲ್ಲಿ 509 ರನ್​​ಗಳೊಂದಿಗೆ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಸಹ ದಾಖಲಿಸಿದ್ದಾರೆ. ಈ ಸೋಲಿನ ನಂತರ ಸಿಎಸ್​ಕೆ ಐಪಿಎಲ್ 2024 ಪಾಯಿಂಟ್ಸ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ. ಪಿಬಿಕೆಎಸ್ 7ನೇ ಸ್ಥಾನಕ್ಕೇರಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ