logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ; ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐಗೆ ಐಸಿಸಿಯಿಂದ ಒತ್ತಾಯವಿಲ್ಲ

ಚಾಂಪಿಯನ್ಸ್ ಟ್ರೋಫಿ; ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐಗೆ ಐಸಿಸಿಯಿಂದ ಒತ್ತಾಯವಿಲ್ಲ

Jayaraj HT Kannada

Mar 16, 2024 07:30 AM IST

ಚಾಂಪಿಯನ್ಸ್ ಟ್ರೋಫಿಗ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐಗೆ ಒತ್ತಾಯವಿಲ್ಲ

    • 2025ರ ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. 2023ರಲ್ಲಿ ಏಷ್ಯಾಕಪ್‌ ಪಂದ್ಯಾವಳಿ ನಡೆಸಿದಂತೆ, ಚಾಂಪಿಯನ್ಸ್‌ ಟ್ರೋಫಿಯನ್ನು ಕೂಡಾ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಸಾಧ್ಯತೆ ಹೆಚ್ಚಿದೆ.
ಚಾಂಪಿಯನ್ಸ್ ಟ್ರೋಫಿಗ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐಗೆ ಒತ್ತಾಯವಿಲ್ಲ
ಚಾಂಪಿಯನ್ಸ್ ಟ್ರೋಫಿಗ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐಗೆ ಒತ್ತಾಯವಿಲ್ಲ

ಭಾರತ ಕ್ರಿಕೆಟ್‌ ತಂಡವು (Indian Cricket Team) ಪಂದ್ಯಗಳನ್ನಾಡಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಈಗಾಗಲೇ ಕಳೆದ ವರ್ಷ ನಡೆದ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಆಡಲು, ಆತಿಥೇಯ ರಾಷ್ಟ್ರ ಪಾಕಿಸ್ತಾನಕ್ಕೆ ತೆರಳಲು ಭಾರತ ಒಪ್ಪಿರಲಿಲ್ಲ. ಹೀಗಾಗಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಾವಳಿ ನಡೆದಿತ್ತು. ಇದೀಗ, ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡಾ ಇದೇ ಮಾದರಿಯಲ್ಲಿ ನಡೆಯುವ ಸುಳಿವು ಸುಕ್ಕಿದೆ. ಒಂದು ವೇಳೆ ಭಾರತ ಸರ್ಕಾರ ಅನುಮತಿ ನೀಡದಿದ್ದರೆ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐ ಮೇಲೆ ಐಸಿಸಿ ಒತ್ತಡ ಹೇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಟ್ರೆಂಡಿಂಗ್​ ಸುದ್ದಿ

ತಂಡಕ್ಕೆ ಬೇಡ ಎಂದವರೆದುರೇ ರೋಚಕ ಕಂಬ್ಯಾಕ್ ಮಾಡಿದ ಆರ್​ಸಿಬಿ ಫಿನಿಷರ್; ಎಲಿಮಿನೇಟರ್ ಪಂದ್ಯಕ್ಕೂ ಈತನ ಮೇಲೆಯೇ ನಿರೀಕ್ಷೆ

ದುರದೃಷ್ಟಕರ ರನೌಟ್ ಬಳಿಕ ಮೆಟ್ಟಿಲ ಮೇಲೆ ತಲೆತಗ್ಗಿಸಿ ಕುಳಿತ ರಾಹುಲ್ ತ್ರಿಪಾಠಿ; ಪಶ್ಚಾತ್ತಾಪದಿಂದ ನೋಡಿದ ಸಮದ್‌ -Video

ಇಂಪ್ಯಾಕ್ಟ್ ಆಟಗಾರನಾಗಿ ಈ ಸ್ಪಿನ್ನರ್ ಎಂಟ್ರಿ; ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಆರ್‌ಸಿಬಿಯ ಸಂಭಾವ್ಯ ಆಡುವ 11ರ ಬಳಗ

RCB vs RR Eliminator: ಇಂದು ಆರ್‌ಸಿಬಿ-ಆರ್‌ಆರ್ ಐಪಿಎಲ್ ಎಲಿಮಿನೇಟರ್ ಪಂದ್ಯ; ಇಲ್ಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ವೆದರ್ ರಿಪೋರ್ಟ್

ಪಾಕ್ ಮತ್ತು ಭಾರತದ ನಡುವೆ ರಾಜಕೀಯ ಸಂಬಂಧ ಉತ್ತಮವಾಗಿಲ್ಲ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್‌ ಪಂದ್ಯಗಳ ಆತಿಥ್ಯ ಸಂಬಂಧವಾಗಿ ಗೊಂದಲಗಳು ಸಹಜ. ಇದೇ ಕಾರಣದಿಂದ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಲುವಾಗಿ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಯಾವುದೇ ರೀತಿಯ ಒತ್ತಡ ಹಾಕುವುದಿಲ್ಲ ಎಂದು ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಕ್ರಿಕೆಟ್‌ನ ಜಾಗತಿಕ ಸಂಸ್ಥೆಯು ಇದಕ್ಕೆ ಪರ್ಯಾಯ ಆಯ್ಕೆಗಳನ್ನು ಪರಿಗಣಿಸಬಹುದು ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷದ ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. 2023ರಲ್ಲಿ ಏಷ್ಯಾಕಪ್‌ ಪಂದ್ಯಾವಳಿ ನಡೆಸಿದಂತೆ, ಚಾಂಪಿಯನ್ಸ್‌ ಟ್ರೋಫಿಯನ್ನು ಕೂಡಾ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ವರ್ಷ ಏಷ್ಯಾಕಪ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಪಾಕಿಸ್ತಾನವು ಪಂದ್ಯಾವಳಿಯ ಮುಖ್ಯ ಆತಿಥ್ಯ ವಹಿಸಿದ್ದ ದೇಶವಾದರೂ, ಭಾರತ ಅಲ್ಲಿಗೆ ಪ್ರಯಾಣಿಸಲಿಲ್ಲ. ಹೀಗಾಗಿ ಭಾರತದ ಎಲ್ಲಾ ಗುಂಪು ಪಂದ್ಯಗಳು ಮತ್ತು ಫೈನಲ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ | ಟಿ20 ವಿಶ್ವಕಪ್‌ ಸೆಮೀಸ್-ಫೈನಲ್‌‌ ಪಂದ್ಯಗಳಿಗೆ ಮೀಸಲು ದಿನ; ಮಳೆಬಾಧಿತ ನಾಕೌಟ್‌ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಕಡ್ಡಾಯ

ಚಾಂಪಿಯನ್ಸ್ ಟ್ರೋಫಿಯನ್ನು ಕೂಡಾ ಹೈಬ್ರಿಡ್‌ ಮಾದರಿಯಲ್ಲೇ ನಡೆಸಿದರೆ, ಯುಎಇಯನ್ನು ಸಹ ಆತಿಥೇಯ ರಾಷ್ಟ್ರವಾಗಿ ಪರಿಗಣಿಸುವ ಸಾಧ್ಯೆತೆ ಹೆಚ್ಚಿದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳು ಯುಎಇಯಲ್ಲಿ ಕ್ರಿಕೆಟ್ ಆಡಲು ಸೂಕ್ತ ಸಮಯ. ಹೀಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಒಪ್ಪದಿದ್ದರೆ, ಹೈಬ್ರಿಡ್ ಮಾದರಿಯ ಪಂದ್ಯಗಳಿಗೆ ಅರಬ್ಬರ ನಾಡು ಎರಡನೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಪರ್ಯಾಯ ಆಯ್ಕೆ ಹುಡುಕಬೇಕು

“ಪ್ರತಿಯೊಂದು ಸದಸ್ಯ ರಾಷ್ಟ್ರಗಳು ಮಂಡಳಿಯ ಸಭೆಗಳಲ್ಲಿ ಕಳವಳಗಳನ್ನು ಎತ್ತಬಹುದು. ಯಾವುದೇ ಸದಸ್ಯ ರಾಷ್ಟ್ರದ ಸರ್ಕಾರವು ಪಾಕಿಸ್ತಾನದಲ್ಲಿ ಆಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ, ಐಸಿಸಿ ಪರ್ಯಾಯ ಆಯ್ಕೆಯನ್ನು ಹುಡುಕಬೇಕಾಗುತ್ತದೆ” ಎಂದು ಅನೇಕ ಮಂಡಳಿ ಸಭೆಗಳಲ್ಲಿ ಭಾಗವಹಿಸಿರುವ ಹಿರಿಯ ಸದಸ್ಯರೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ | ನಿದ್ದೆಯಿಂದ ಎದ್ದೇಳಿ; ವಿರಾಟ್ ಜೊತೆಗೆ ಬಾಬರ್ ಆರ್‌ಸಿಬಿ ಪರ ಆಡಬೇಕೆಂಬ ಪಾಕ್ ಅಭಿಮಾನಿ ಕನಸಿಗೆ ಹರ್ಭಜನ್ ನೀಡಿದ್ರು ಉತ್ತರ

2008ರಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಕುಂಠಿತವಾಗಿದೆ. 2012ರಲ್ಲಿ ವೈಟ್ ಬಾಲ್ ಸರಣಿಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿತ್ತು. ಆದರೆ, ಕಳೆದ ಒಂದೂವರೆ ದಶಕದಿಂದ ಭಾರತ ತಂಡವು ನೆರೆಯ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿಲ್ಲ. 2011ರ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್ ಹಾಗೂ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿ ಸಮಯದಲ್ಲೂ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಪ್ರಯಾಣಿಸಿತ್ತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ