logo
ಕನ್ನಡ ಸುದ್ದಿ  /  ಕ್ರಿಕೆಟ್  /  World Cup 2023: ವಿಶ್ವಕಪ್ 31ನೇ ಪಂದ್ಯದ ಬಳಿಕ ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಇವರೇ

World Cup 2023: ವಿಶ್ವಕಪ್ 31ನೇ ಪಂದ್ಯದ ಬಳಿಕ ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಇವರೇ

Raghavendra M Y HT Kannada

Nov 01, 2023 08:17 AM IST

google News

2023ರ ವಿಶ್ವಕಪ್ ಟ್ರೋಫಿ

  • ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. ಅತಿ ಹೆಚ್ಚು ರನ್ ಗಳಿಸಿದವರು, ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ವಿವರ ಇಲ್ಲಿದೆ. 

2023ರ ವಿಶ್ವಕಪ್ ಟ್ರೋಫಿ
2023ರ ವಿಶ್ವಕಪ್ ಟ್ರೋಫಿ (REUTERS)

ಬೆಂಗಳೂರು: ಭಾರತದ ನೆಲದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) 31ನೇ ಪಂದ್ಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ (Pakistan vs Bangladesh) ನಡುವೆ ನಡೆದಿದ್ದು, ಬಾಬರ್ ಅಜಂ ಪಡೆ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಕಪ್ ಪ್ರಮುಖ ಘಟ್ಟ ತಲುಪಿದೆ.

ಪ್ರಶಸ್ತಿ ಸುತ್ತಿನ ರೇಸ್‌ನಲ್ಲಿ ಉಳಿದಿರುವ ತಂಡಗಳಿಗೆ ಮುಂದಿನ ಪಂದ್ಯಗಳು ತುಂಬಾ ಮಹತ್ವದ್ದಾಗಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ (ನವೆಂಬರ್ 1, ಬುಧವಾರ) ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪಂದ್ಯವೂ ಗರಿಷ್ಠ ಮನರಂಜನೆಯನ್ನು ನೀಡುತ್ತದೆ.

2023ರ ವಿಶ್ವಕಪ್‌ನಲ್ಲಿ 31ನೇ ಪಂದ್ಯದ ಬಳಿ ಗರಿಷ್ಠ ರನ್ (Most Runs) ಮತ್ತು ವಿಕೆಟ್ ಗಳಿಸಿದವರನ್ನು ನೋಡುವುದಾರೆ ಈವರೆಗೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕಂ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ 431 ರನ್‌ಗಳೊಂದಿಗೆ ನಂಬರ್ 1ನೇ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಅನುಭವಿ ಹಾಗೂ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ಆರು ಪಂದ್ಯಗಳಿಂದ 413 ರನ್ ಗಳಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ (406) ಮತ್ತು ನಾಲ್ಕನೇ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ 6 ಪಂದ್ಯಗಳಿಂದ 398 ರನ್ ಬಾರಿಸಿದ್ದಾರೆ. ಇನ್ನ ಐದನೇ ಸ್ಥಾನದಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಕಂ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಇದ್ದಾರೆ. ಆರು ಪಂದ್ಯಗಳನ್ನ ಆಡಿರುವ ರಿಜ್ವಾನ್ 359 ರನ್ ಬಾರಿಸಿದ್ದಾರೆ. ಅಕ್ಟೋಬರ್ 31ಕ್ಕೆ ಮುಕ್ತಾಯವಾದ 31ನೇ ವಿಶ್ವಕಪ್ ಪಂದ್ಯದ ವೇಳೆಗೆ ದಾಖಲಾಗಿರುವ ಅಂಕಿ ಅಂಶಗಳಾಗಿವೆ.

ವಿಶ್ವಕಪ್‌ನಲ್ಲಿ ಬ್ಯಾಟರ್‌ಗಳಷ್ಟೇ ಬೌಲರ್‌ಗಳು ಕೂಡ ಪ್ರಮುಖ ಪಾತ್ರವಹಿಸಿದ್ದು, ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. 31ನೇ ಪಂದ್ಯದ ಮುಕ್ತಾಯದ ವೇಳೆ ಅತಿ ಹೆಚ್ಚು ವಿಕೆಟ್

ಪಾಕಿಸ್ತಾನ-ಬಾಂಗ್ಲಾದೇಶ ನಡುವಿ ವಿಶ್ವಕಪ್ 31ನೇ ಪಂದ್ಯದ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಅಗ್ರ 5 ಬ್ಯಾಟರ್‌ಗಳು (Most Leading Runs)

1. ಕ್ವಿಂಟರ್ ಡಿ ಕಾಕ್ (ದಕ್ಷಿಣ ಆಫ್ರಿಕಾ) - 431 ರನ್

2. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 413 ರನ್

3. ರಚಿನ್ ರವೀಂದ್ರ (ನ್ಯೂಜಿಲೆಂಡ್) - 406 ರನ್

4. ರೋಹಿತ್ ಶರ್ಮಾ (ಇಂಡಿಯಾ) - 398 ರನ್

5. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) - 359 ರನ್

ಪಡೆದವರ ಟಾಪ್ 5ರ ಪಟ್ಟಿಯಲ್ಲಿ ಯಾವ ದೇಶದ ಆಟಗಾರರ ಇದ್ದಾರೆ ಅನ್ನೋದನ್ನು ನೋಡೋಣ. ಆಸ್ಟ್ರೇಲಿಯಾ ಸ್ಪಿನ್ನರ್ ಆಡಮ್ ಜಂಪಾ 16 ವಿಕೆಟ್‌ಗಳನ್ನು ಪಡೆದಿದ್ದು, ಟಾಪ್ ಐದರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಕೂಡ 16 ವಿಕೆಟ್‌ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಟಾಪ್ ವಿಕೆಟ್ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಈವರೆಗೆ 14 ವಿಕೆಟ್ ಗಳಿಸಿದ್ದಾರೆ. ನ್ಯೂಜಿಲೆಂಡ್ ತಂಡದ ಮಿಚೆಲ್ ಸ್ಯಾಂಟ್ನರ್ 14, ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಚಾನ್ಸೆನ್ 13 ವಿಕೆಟ್‌ಗಳೊಂದಿಗೆ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನದ ಮೇಲೆ ಈ ಸ್ಥಾನಗಳು ಬದಲಾವಣೆಯಾಗುತ್ತಲೇ ಇರುತ್ತವೆ.

ವಿಶ್ವಕಪ್‌ನ 31ನೇ ಪಂದ್ಯದ ಬಳಿಕ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು (Most Leading Wickets)

1. ಆಡಮ್ ಜಂಪಾ (ಆಸ್ಟ್ರೇಲಿಯಾ) - 16 ವಿಕೆಟ್

2. ಶಾಹೀನ್ ಅಫ್ರಿದಿ (ಪಾಕಿಸ್ತಾನ) - 16 ವಿಕೆಟ್

3. ಜಸ್ಪ್ರೀತ್ ಬುಮ್ರಾ (ಇಂಡಿಯಾ) - 14 ವಿಕೆಟ್

4. ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್) - 14 ವಿಕೆಟ್

5. ಮಾರ್ಕೊ ಜಾನ್ಸೆನ್ (ದಕ್ಷಿಣ ಆಫ್ರಿಕಾ) - 13 ವಿಕೆಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ