logo
ಕನ್ನಡ ಸುದ್ದಿ  /  ಕ್ರಿಕೆಟ್  /  Ravi Shastri: 50 ವರ್ಷಗಳಲ್ಲಿ ನಾನು ನೋಡಿದ ಬೆಸ್ಟ್ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಇದೇ; ಮಾಜಿ ಕೋಚ್ ರವಿಶಾಸ್ತ್ರಿ

Ravi Shastri: 50 ವರ್ಷಗಳಲ್ಲಿ ನಾನು ನೋಡಿದ ಬೆಸ್ಟ್ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಇದೇ; ಮಾಜಿ ಕೋಚ್ ರವಿಶಾಸ್ತ್ರಿ

Raghavendra M Y HT Kannada

Nov 12, 2023 03:03 PM IST

ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ್ದಾರೆ.

  • 50 ವರ್ಷಗಳಲ್ಲಿ ನಾನು ನೋಡಿದ ಬೆಸ್ಟ್ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಇದೇ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ್ದಾರೆ.
ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಟೀಂ ಇಂಡಿಯಾ (Team India) ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರ (Ravi Shastri) ತಂಡದ ಪ್ರಸ್ತುತ ಬೌಲಿಂಗ್ ವಿಭಾಗದ ಆಕ್ರಮಣಕಾರಿ ದಾಳಿಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಳೆದ 50 ವರ್ಷಗಳಲ್ಲಿ ನಾನು ಕಂಡ ಅತ್ಯುತ್ತಮ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಇದಾಗಿದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವನ ಸ್ಥಿತಿ ನೋಡಿ! ಬೆಂಗಳೂರು ಪೊಲೀಸರ ಪ್ರತಿಭೆಗೆ ಸಾಟಿಯುಂಟೆ

ಈ ಪಂದ್ಯಕ್ಕೂ ಮುನ್ನ ರವಿಶಾಸ್ತ್ರಿ ಪ್ರೈರೀ ಫೈರ್ ಕ್ಲಬ್ ಪಾಡ್‌ಕಾಸ್ಟ್‌ನೊಂದಿಗೆ ಮಾತನಾಡಿ, ಈ ಬಾರಿ ವಿಶ್ವಕಪ್ ಟ್ರೋಫಿ ಭಾರತದ ಕೈತಪ್ಪಿದರೆ ಇನ್ನ ಮೂರು ವಿಶ್ವಕಪ್‌ ವರೆಗೆ ಕಾಯಬೇಗುತ್ತದೆ ಎಂದಿದ್ದಾರೆ.

ಈ ಬಾರಿ ವಿಶ್ವಕಪ್ ಗೆಲ್ಲದಿದ್ದರೆ ಇನ್ನೂ ಮೂರು ವಿಶ್ವಕಪ್‌ಗಳ ಬಗ್ಗೆ ಅವರು ಯೋಚಿಸುವುದಿಲ್ಲ. ಪ್ರಸ್ತುತ ತಂಡದಲ್ಲಿ 7-8 ಜನರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದು ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಅವರರು ಆಡುತ್ತಿರುವ ರೀತಿ ಮತ್ತು ಪರಿಸ್ಥಿತಿಗಳನ್ನು ನೋಡಿದರೆ ಇದು ಗೆಲ್ಲುವ ತಂಡವಾಗಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

ಭಾರತದ ಬೌಲಿಂಗ್ ವೈವಿಧ್ಯತೆಯಿಂದ ಕೂಡಿದೆ

ಬೌಲರ್‌ಗಳ ಮಾರಕ ದಾಳಿಯನ್ನು ಶ್ಲಾಘಿಸಿದ ಅವರು, ವೈಟ್ ಬಾಲ್ ಕ್ರಿಕೆಟ್ ಆರಂಭವಾದಾಗಿನಿಂದ ಕಳೆದ 50 ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಬೌಲಿಂಗ್ ದಾಳಿ ಇದಾಗಿದೆ. ಇದು ಬೌಲಿಂಗ್‌ನಲ್ಲಿನ ವೈವಿಧ್ಯತೆಯಿಂದ ಕೂಡಿದೆ. ಬುಮ್ರಾ ಆರಂಭದಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಮೊಹಮ್ಮದ್ ಶಮಿ ಸೀಮ್ ಪೊಸಿಷನ್‌ನಲ್ಲಿ ಮಾಸ್ಟರ್. ಮೊಹಮ್ಮದ್ ಸಿರಾಜ್ ಬ್ಯಾಟರ್‌ಗಳಿಗೆ ಭಯಭೀತರನ್ನಾಗಿಸಿದ್ದಾರೆ. ಜಡೇಜಾ ಫಾರ್ಮ್‌ನಲ್ಲಿದ್ದಾರೆ. ಕುಲ್ದೀಪ್ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಶ್ಲಾಘಿಸಿರುವ ರವಿಶಾಸ್ತ್ರಿ, ರೋಹಿತ್ ಅವರು ತಮ್ಮ ಸಂಪನ್ಮೂಲಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇವರೆಲ್ಲರಿಗೂ ಅನುಭವವಿದೆ. ಆದರೆ ರೋಹಿತ್ ಶರ್ಮಾ ಸೋಮಾರಿತನವನ್ನು ಸಹಿಸುವುದಿಲ್ಲ. ಆಟಗಾರರು ಏನಾದರೂ ತಪ್ಪು ಮಾಡಿದರೆ ತಕ್ಷಣವೇ ಅವರನ್ನು ಎಚ್ಚರಿಸುತ್ತಾರೆ. ಶಿಸ್ತು ಅಲ್ಲಿಂದ ಬರುತ್ತದೆ. ಅಂತಿಮವಾಗಿ ಇರುವ ಸಂಪನ್ಮೂಲವನ್ನು ಚೆನ್ನಾಗಿ ಬಳಿಸಿಕೊಂಡಿದ್ದು, ವಿಶ್ವಕಪ್‌ನಲ್ಲಿ ಅತ್ಯುತ್ತಮ ನಾಯಕರಾಗಿದ್ದಾರೆ. ರೋಹಿತ್ ತುಂಬಾ ಕ್ರಿಯಾಶೀಲರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಗ್ರಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ

2023ರ ವಿಶ್ವಕಪ್‌ನ ಗ್ರೂಪ್‌ ಹಂತದ ಆರಂಭದಿಂದಲೂ ಪ್ರಾಬಲ್ಯ ಮೆರೆದಿರುವ ರೋಹಿತ್ ಅಂಡ್ ಟೀಂ ಇಂಡಿಯಾ ಅಗ್ರಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ. ಆಡಿರುವ 8 ಪಂದ್ಯಗಳ ಪೈಕಿ ಎಂಟರಲ್ಲೂ ಗೆಲುವು ಸಾಧಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಇಂದು (ನವೆಂಬರ್ 12, ಭಾನುವಾರ) ಆಡುತ್ತಿದೆ. ಈ ಪಂದ್ಯವನ್ನೂ ಗೆದ್ದು ಗ್ರೂಪ್ ಹಂತದಲ್ಲಿ 9ಕ್ಕೆ 9 ಪಂದ್ಯಗಳನ್ನೂ ಗೆದ್ದು, ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪೈಪೋಟಿಗೆ ಪ್ಲಾನ್ ಮಾಡಿಕೊಂಡಿದೆ.

ನವೆಂಬರ್ 15ರ ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವಿಶ್ವಕಪ್‌ನ ಮೊದಲ ಸೆಮಿ ಫೈನಲ್ ನಡೆಯಲಿದೆ. ನವೆಂಬರ್ 16 ರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿ ಫೈನಲ್ ಪಂದ್ಯ ಜರುಗಳಿದೆ.

IPL, 2024

Live

RCB

218/5

20.0 Overs

VS

CSK

151/6

(17.0)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ