logo
ಕನ್ನಡ ಸುದ್ದಿ  /  ಕ್ರಿಕೆಟ್  /  Wt20 Wc Prize Money: ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ತು ಕೋಟಿ ಕೋಟಿ: ಆದ್ರೆ ಭಾರತಕ್ಕೆ ಸಿಕ್ಕಿದ್ದು...

WT20 WC Prize Money: ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ತು ಕೋಟಿ ಕೋಟಿ: ಆದ್ರೆ ಭಾರತಕ್ಕೆ ಸಿಕ್ಕಿದ್ದು...

Prasanna Kumar P N HT Kannada

Oct 21, 2024 11:03 AM IST

google News

ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ತು ಕೋಟಿ ಕೋಟಿ

    • ಅಕ್ಟೋಬರ್ 3 ರಂದು ಯುಎಇಯಲ್ಲಿ ಪ್ರಾರಂಭವಾದ ಪಂದ್ಯಾವಳಿಯು ಅಕ್ಟೋಬರ್ 20 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನೊಂದಿಗೆ ಮುಕ್ತಾಯಗೊಂಡಿತು. ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 32 ರನ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಮಹಿಳಾ T20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿದಿದೆ.
ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ತು ಕೋಟಿ ಕೋಟಿ
ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ತು ಕೋಟಿ ಕೋಟಿ (AP)

ಎಂಟು ವರ್ಷಗಳ ಬಳಿಕ ಮಹಿಳಾ ಟಿ20 ಕ್ರಿಕೆಟ್‌ಗೆ ಹೊಸ ಚಾಂಪಿಯನ್‌ ಸಿಕ್ಕಿದೆ. ನ್ಯೂಜಿಲೆಂಡ್ ಮೊದಲ ಬಾರಿಗೆ ಮಹಿಳಾ T20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಈ ಮೂಲಕ ಹಲವಾರು ವರ್ಷಗಳಿಂದ ಆಸ್ಟ್ರೇಲಿಯಾದ ಮಹಿಳಾ ತಂಡದ ಆಳ್ವಿಕೆಯನ್ನು ಆಫ್ರಿಕನ್ ಪಡೆ ಕೊನೆಗೊಳಿಸಿತು. ಅಕ್ಟೋಬರ್ 20 ರಂದು ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 32 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ತನ್ನ ಮೂರನೇ ಫೈನಲ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್‌ಶಿಪ್ ಆಗಿ ಹೊರಹೊಮ್ಮಿದೆ.

ಅಕ್ಟೋಬರ್ 3 ರಂದು ಯುಎಇಯಲ್ಲಿ ಪ್ರಾರಂಭವಾದ ಪಂದ್ಯಾವಳಿಯು ಅಕ್ಟೋಬರ್ 20 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನೊಂದಿಗೆ ಮುಕ್ತಾಯಗೊಂಡಿತು. ಈ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 158 ರನ್‌ಗಳ ಸವಾಲಿನ ಸ್ಕೋರ್ ಮಾಡಿತು. ಈ ಗುರಿಯು ದಕ್ಷಿಣ ಆಫ್ರಿಕಾಕ್ಕೆ ತುಂಬಾ ಕಠಿಣವಾಯಿತು. ಇಡೀ ತಂಡವು 20 ಓವರ್‌ಗಳಲ್ಲಿ ಕೇವಲ 126 ರನ್ ಗಳಿಸಲು ಸಾಧ್ಯವಾಯಿತಷ್ಟೆ.

ಈ ಮೂಲಕ ನ್ಯೂಜಿಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅತ್ತ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಪ್ರಶಸ್ತಿಯಿಂದ ವಂಚಿತವಾಯಿತು. ಕಳೆದ ವರ್ಷವೂ ಆಫ್ರಿಕಾ ಫೈನಲ್‌ನಲ್ಲಿ ಆಸ್ಟ್ರೇಲಿಯಾದಿಂದ ಸೋಲನ್ನು ಎದುರಿಸಬೇಕಾಯಿತು.

ಟ್ರೋಫಿಯೊಂದಿಗೆ ಸಂಭ್ರಮಿಸಿದ ನ್ಯೂಜಿಲೆಂಡ್ ತಂಡ

ಈ ಗೆಲುವಿನೊಂದಿಗೆ ಮೊದಲ ಬಾರಿಗೆ, ನ್ಯೂಜಿಲೆಂಡ್ ಮಹಿಳಾ T20 ವಿಶ್ವಕಪ್‌ನ ಸುಂದರ ಟ್ರೋಫಿಯನ್ನು ಪಡೆದುಕೊಂಡಿತು. ಟ್ರೋಫಿ ಮಾತ್ರವಲ್ಲದೆ, ನ್ಯೂಜಿಲೆಂಡ್‌ಗೆ ಪಂದ್ಯಾವಳಿಯ ಅತ್ಯುತ್ತಮ ತಂಡ ಎಂಬ ಪ್ರಚಂಡ ಬಹುಮಾನವೂ ಸಿಕ್ಕಿದೆ. ಐಸಿಸಿ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ನ ಬಹುಮಾನದ ಮೊತ್ತವನ್ನು ದ್ವಿಗುಣಗೊಳಿಸಿತ್ತು. ಈ ಮೂಲಕ ಚಾಂಪಿಯನ್ ನ್ಯೂಜಿಲೆಂಡ್ ಕೂಡ 2.34 ಮಿಲಿಯನ್ ಡಾಲರ್ ಅಂದರೆ ಸುಮಾರು 19.67 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ.

ಇದು ಮಹಿಳಾ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಯಾವುದೇ ಚಾಂಪಿಯನ್ ತಂಡ ಪಡೆದ ದೊಡ್ಡ ಬಹುಮಾನ ಮೊತ್ತವಾಗಿದೆ. ಇದಲ್ಲದೆ, ಗುಂಪು ಹಂತದ ಒಂದು ಪಂದ್ಯವನ್ನು ಗೆದ್ದ ಪ್ರತಿ ತಂಡಕ್ಕೆ 26.19 ಲಕ್ಷ ರೂ. ನೀಡಲಾಗಿದೆ. ನ್ಯೂಜಿಲೆಂಡ್ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದಿದ್ದರಿಂದ ಹೆಚ್ಚುವರಿ 78 ಲಕ್ಷ ರೂ. ಗಳಿಸುತ್ತದೆ. ಈ ಮೂಲಕ ನ್ಯೂಜಿಲೆಂಡ್ ಸುಮಾರು 20.45 ಕೋಟಿ ಬಹುಮಾನ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ಎಷ್ಟು ಮೊತ್ತ?

ರನ್ನರ್ ಅಪ್ ಆಗಿರುವ ದಕ್ಷಿಣ ಆಫ್ರಿಕಾ, ಫೈನಲ್‌ಗೆ ತಲುಪಿದ್ದಕ್ಕಾಗಿ 1.17 ಮಿಲಿಯನ್ ಡಾಲರ್ ಅಂದರೆ 9.83 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ದಕ್ಷಿಣ ಆಫ್ರಿಕಾ ಕೂಡ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಇದರಿಂದ ಹೆಚ್ಚುವರಿಯಾಗಿ 78 ಲಕ್ಷ ರೂ. ಅಂದರೆ ದಕ್ಷಿಣ ಆಫ್ರಿಕಾ ತಂಡ ಒಟ್ಟು ಸುಮಾರು 10.62 ಕೋಟಿ ರೂ. ಸಿಗುತ್ತದೆ.

ಟೀಮ್ ಟೀಮ್ ಇಂಡಿಯಾದ ಮಟ್ಟಿಗೆ ಹೇಳುವುದಾದರೆ, ಟೂರ್ನಿಯಲ್ಲಿ ತೋರಿದ ನಿರಾಶಾದಾಯಕ ಪ್ರದರ್ಶನವು ಮೊತ್ತದ ಮೇಲೂ ಪರಿಣಾಮ ಬೀರಿದೆ. ಭಾರತ ತಂಡ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು. ಆದರೆ, ತನ್ನ ಗುಂಪಿನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಸೋಲಿಸಿದ ಕಾರಣ ಈ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಕೇವಲ 52 ಲಕ್ಷ ರೂ. ಪಡೆದುಕೊಂಡಿದೆಯಷ್ಟೆ.

 

ಮಹಿಳಾ ಟಿ20 ವಿಶ್ವಕಪ್​ನಲ್ಲಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಸೌತ್ ಆಫ್ರಿಕಾ ತಂಡ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ