ಟೀಮ್ ಇಂಡಿಯಾಕ್ಕೆ ಒಂದು ವರ್ಷದ ಬಳಿಕ ಸ್ಟಾರ್ ಪ್ಲೇಯರ್ ಕಂಬ್ಯಾಕ್: ಕಿವೀಸ್ಗೆ ಶುರುವಾಯಿತು ನಡುಕ
Oct 05, 2024 10:15 AM IST
ಭಾರತ ಟೆಸ್ಟ್ ಕ್ರಿಕೆಟ್ ತಂಡ
- India vs New Zealand Test: ನವೆಂಬರ್ 16 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲು ಸಜ್ಜಾಗಿದೆ. ಪತ್ರಿಕಾ ವರದಿಯ ಪ್ರಕಾರ, ಈ ಸರಣಿಯಲ್ಲಿ ಶಮಿ ಟೀಮ್ ಇಂಡಿಯಾಕ್ಕೆ ಮರಳಬಹುದು.
ಮೊಹಮ್ಮದ್ ಶಮಿ ಅವರು 2023 ರ ಏಕದಿನ ವಿಶ್ವಕಪ್‌ನ (ODI World Cup 2023) ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಆಟದಿಂದ ಹೊರಗುಳಿದಿದ್ದಾರೆ. ಅವರು ಪಾದದ ಗಾಯದಿಂದ ಬಳಲುತ್ತಿದ್ದು, ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿ ಪಡೆಯುತ್ತಿದ್ದಾರೆ. ಇಲ್ಲುಕೂಡ ಅವರು ಮತ್ತೊಮ್ಮೆ ಗಾಯಗೊಂಡಿದ್ದಾರೆ ಎಂದು ವರದಿಗಳಿವೆ. ಇದರ ನಡುವೆ ಅವರು ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 16 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲು ಸಜ್ಜಾಗಿದೆ. ಪತ್ರಿಕಾ ವರದಿಯ ಪ್ರಕಾರ, ಈ ಸರಣಿಯಲ್ಲಿ ಶಮಿ ಟೀಮ್ ಇಂಡಿಯಾಕ್ಕೆ ಮರಳಬಹುದು. ರಣಜಿ ಟ್ರೋಫಿ 2024 ರ ಮೊದಲ ಎರಡು ಸುತ್ತುಗಳಿಗೆ ಶಮಿ ಅನ್ನು ಬಂಗಾಳ ತಂಡದಲ್ಲಿ ಸೇರಿಸಿಕೊಳ್ಳದ ಕಾರಣ ಅವರು ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೊಹಮ್ಮದ್ ಶಮಿಗೆ ಮತ್ತೆ ಗಾಯ?
ಮತ್ತೊಂದು ವರದಿಯ ಪ್ರಕಾರ, ಮೊಹಮ್ಮದ್ ಶಮಿ ಅವರು NCA ನಲ್ಲಿ ತಮ್ಮ ಪಾದದ ಗಾಯದಿಂದ ಪುನರ್ವಸತಿ ಪಡೆಯುತ್ತಿರುವಾಗ ಮತ್ತೊಮ್ಮೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅದು ಅವರನ್ನು ಇನ್ನೂ ಆರರಿಂದ ಎಂಟು ವಾರಗಳವರೆಗೆ ಮೈದಾನದಿಂದ ಹೊರಗಿಡಬಹುದು ಎಂದು ಹೇಳಲಾಗಿದೆ.
‘ಶಮಿ ಬೌಲಿಂಗ್ ಅನ್ನು ಪುನರಾರಂಭಿಸಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದಾರೆ. ಆದರೆ ಈ ಮೊಣಕಾಲಿನ ಗಾಯವು ಇತ್ತೀಚೆಗೆ ಉಲ್ಬಣಗೊಂಡಿದೆ. ಬಿಸಿಸಿಐಯ ವೈದ್ಯಕೀಯ ತಂಡವು ಇವರ ವಿಚಾರದಲ್ಲಿ ಕೆಲಸ ಮಾಡುತ್ತಿದೆ, ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. NCA ವೈದ್ಯಕೀಯ ತಂಡವು ಒಂದು ವರ್ಷದಿಂದ ಅವರನ್ನು ನೋಡಿಕೊಳ್ಳುತ್ತಿದೆ’ ಎಂದು ವರದಿಯಲ್ಲಿದೆ.
ಆದಾಗ್ಯೂ, ಈ ವರ್ಷದ ಕೊನೆಯಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿಯಿಂದ ಹೊರಗುಳಿದ ವರದಿಗಳನ್ನು ವೇಗಿ ಶಮಿ ಇತ್ತೀಚೆಗೆ ತಳ್ಳಿಹಾಕಿದ್ದಾರೆ. ಇವುಗಳನ್ನು ಆಧಾರರಹಿತ ವದಂತಿಗಳಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.
‘ಈ ರೀತಿಯ ಆಧಾರರಹಿತ ವದಂತಿಗಳು ಏಕೆ? ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಮತ್ತು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ಬಾರ್ಡರ್ ಗವಾಸ್ಕರ್ ಸರಣಿಯಿಂದ ಹೊರಗುಳಿದಿದ್ದೇನೆ ಎಂದು ಬಿಸಿಸಿಐ ಆಗಲಿ ಅಥವಾ ನಾನು ಹೇಳಿಲ್ಲ. ಅಂತಹ ಸುದ್ದಿಗಳಿಗೆ ಗಮನ ಕೊಡುವುದನ್ನು ನಿಲ್ಲಿಸುವಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ಅನಧಿಕೃತ ಮೂಲಗಳು ದಯವಿಟ್ಟು ನಿಲ್ಲಿಸಿ ಮತ್ತು ನನ್ನ ಹೇಳಿಕೆಯಿಲ್ಲದೆ ಅಂತಹ ನಕಲಿ ಮತ್ತು ಸುಳ್ಳು ಸುದ್ದಿಗಳನ್ನು ಹರಡಬೇಡಿ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.