ಭಾರತ vs ಜಿಂಬಾಬ್ವೆ ಟಿ20ಐ ಸರಣಿ ರಾತ್ರಿ 7 ಅಥವಾ 8 ಗಂಟೆಗೆ ಅಲ್ಲ, ಸಂಜೆ ಈ ಸಮಯಕ್ಕೆ ಆರಂಭ; ಲೈವ್ಸ್ಟ್ರೀಮಿಂಗ್ ವಿವರ ಇಲ್ಲಿದೆ
Jul 06, 2024 10:15 AM IST
ಭಾರತ vs ಜಿಂಬಾಬ್ವೆ ಟಿ20ಐ ಸರಣಿ ರಾತ್ರಿ 7 ಅಥವಾ 8 ಗಂಟೆಗೆ ಅಲ್ಲ, ಸಂಜೆ _ ಗಂಟೆಗೆ ಆರಂಭ; ಲೈವ್ಸ್ಟ್ರೀಮಿಂಗ್ ವಿವರ ಇಲ್ಲಿದೆ
- India vs Zimbabwe T20I: ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20ಐ ಸರಣಿಯು ಜುಲೈ 6 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳ ಲೈವ್ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ (India vs Zimbabwe T20I) ನಡುವಿನ ಐದು ಪಂದ್ಯಗಳ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಯು ಜುಲೈ 6 ರಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಪ್ರಾರಂಭವಾಗಲಿದೆ. ಟಿ20 ವಿಶ್ವಕಪ್ ಗೆದ್ದ ನಂತರ, ಮೆನ್ ಇನ್ ಬ್ಲೂ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ರವೀಂದ್ರ ಜಡೇಜಾ (Ravindra Jadeja) ಟಿ20ಐಗೆ ನಿವೃತ್ತಿ ನೀಡಿದ್ದು, ಇವರ ಸ್ಥಾನ ತುಂಬಲು ಯುವ ಆಟಗಾರರು ಸನ್ನದ್ಧಗೊಂಡಿದ್ದಾರೆ.
ಭಾರತ vs ಜಿಂಬಾಬ್ವೆ ವೇಳಾಪಟ್ಟಿ
1ನೇ ಟಿ20ಐ: ಜುಲೈ 6, ಹರಾರೆ ಸ್ಪೋರ್ಟ್ಸ್ ಕ್ಲಬ್
2ನೇ ಟಿ20ಐ: ಜುಲೈ 7, ಹರಾರೆ ಸ್ಪೋರ್ಟ್ಸ್ ಕ್ಲಬ್
3ನೇ ಟಿ20ಐ: ಜುಲೈ 10, ಹರಾರೆ ಸ್ಪೋರ್ಟ್ಸ್ ಕ್ಲಬ್
4ನೇ ಟಿ20ಐ: ಜುಲೈ 13, ಹರಾರೆ ಸ್ಪೋರ್ಟ್ಸ್ ಕ್ಲಬ್
5ನೇ ಟಿ20ಐ: ಜುಲೈ 14, ಹರಾರೆ ಸ್ಪೋರ್ಟ್ಸ್ ಕ್ಲಬ್
ಭಾರತ vs ಜಿಂಬಾಬ್ವೆ 1ನೇ ಟಿ20ಐ ದಿನಾಂಕ, ಸಮಯ, ಟೆಲಿಕಾಸ್ಟ್ ಮಾಹಿತಿ (ಭಾರತದಲ್ಲಿ)
ಪಂದ್ಯದ ದಿನಾಂಕ: ಶನಿವಾರ, ಜುಲೈ 6
ಪಂದ್ಯದ ಆರಂಭದ ಸಮಯ: 4:30 ಸಂಜೆ (ಭಾರತೀಯ ಕಾಲಮಾಮನ)
ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 3 ಚಾನೆಲ್
ಲೈವ್ ಸ್ಟ್ರೀಮಿಂಗ್: SonyLIV (ಸೋನಿ ಲಿವ್)
ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ
ಟಿ20ಐ ಕ್ರಿಕೆಟ್ನಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಹೆಚ್ಚು ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಮುಖಾಮುಖಿಯಾದ 8 ಪಂದ್ಯಗಳ ಪೈಕಿ ಭಾರತ 6 ಬಾರಿ ಗೆದ್ದಿದೆ. ಜಿಂಬಾಬ್ವೆ 2ರಲ್ಲಿ ಗೆಲುವಿನ ನಗೆ ಬೀರಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವನ್ನು 115 ರನ್‌ಗಳಿಗೆ ಆಲೌಟ್ ಮಾಡಿತ್ತು. ಅಂದು ಭಾರತ 186 ರನ್ ಗಳಿಸಿತ್ತು.
ಹರಾರೆ ಮೈದಾನದಲ್ಲಿ ಭಾರತ vs ಜಿಂಬಾಬ್ವೆ ಟಿ20ಐ ದಾಖಲೆ
ಪಂದ್ಯಗಳು: 7
ಭಾರತ ಗೆದ್ದಿದೆ: 5
ಜಿಂಬಾಬ್ವೆ ಗೆಲುವು: 2
ಭಾರತ ವಿರುದ್ಧ ಜಿಂಬಾಬ್ವೆಗೆ ಗರಿಷ್ಠ ಮೊತ್ತ: 178
ಭಾರತ ವಿರುದ್ಧ ಜಿಂಬಾಬ್ವೆಗೆ ಕಡಿಮೆ ಮೊತ್ತ: 135
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗರಿಷ್ಠ ಮೊತ್ತ: 170
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಕಡಿಮೆ ಮೊತ್ತ: 99
ಜಿಂಬಾಬ್ವೆ ವಿರುದ್ಧದ 1ನೇ ಮತ್ತು 2ನೇ ಟಿ20ಐಗೆ ಭಾರತ ತಂಡ
ಶುಭ್ಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್ಷಿತ್ ರಾಣಾ.
ಜಿಂಬಾಬ್ವೆ ತಂಡ
ಸಿಕಂದರ್ ರಜಾ (ನಾಯಕ), ಫರಾಜ್ ಅಕ್ರಮ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ರ್ಯಾಂಡನ್ ಮೌಝಾರಾಬ್, ಬ್ರ್ಯಾಂಡನ್ ಮೌಝಾರಾಬ್, ಬ್ರ್ಯಾಂಡನ್ ಮವುಟರಾಬ್ , ರಿಚರ್ಡ್ ಶಿಪ್, ಮಿಲ್ಟನ್ ಲಯನ್.