logo
ಕನ್ನಡ ಸುದ್ದಿ  /  ಕ್ರಿಕೆಟ್  /  ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರಲು ಕೊಹ್ಲಿಯೂ ಪ್ರಮುಖ ಕಾರಣ; ಕ್ರೀಡಾಕೂಟ ಆಯೋಜಕ ಹೇಳಿಕೆ

ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರಲು ಕೊಹ್ಲಿಯೂ ಪ್ರಮುಖ ಕಾರಣ; ಕ್ರೀಡಾಕೂಟ ಆಯೋಜಕ ಹೇಳಿಕೆ

Prasanna Kumar P N HT Kannada

Oct 17, 2023 07:00 AM IST

ವಿರಾಟ್ ಕೊಹ್ಲಿ ಮತ್ತು ನಿಕೊಲೊ ಕ್ಯಾಂಪ್ರಿಯಾನಿ.

    • Virat Kohli: ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಕ್ರಿಕೆಟ್ ಸೇರ್ಪಡೆಯಾಗಲು ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯೂ ಕಾರಣ ಎಂದು 2028ರ ಲಾಸ್ ಏಂಜಲೀಸ್ ಸ್ಥಳೀಯ ಸಂಘಟನಾ ಸಮಿತಿಯ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ನಿಕೊಲೊ ಕ್ಯಾಂಪ್ರಿಯಾನಿ.
ವಿರಾಟ್ ಕೊಹ್ಲಿ ಮತ್ತು ನಿಕೊಲೊ ಕ್ಯಾಂಪ್ರಿಯಾನಿ.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯು ಕ್ರಿಕೆಟ್​ಗೆ ಸಂಬಂಧಿಸಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 1900ರ ನಂತರ ಅಂದರೆ 123 ವರ್ಷಗಳ ಬಳಿಕ ಕ್ರಿಕೆಟ್​ ಅನ್ನು ಪದಕದ ಸ್ಪರ್ಧೆಯಾಗಿ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ. ಟಿ20 ಮಾದರಿಯ ಕ್ರಿಕೆಟ್ (Cricket)​ ಅನ್ನು ಒಲಿಂಪಿಕ್ಸ್​​ನಲ್ಲಿ (Los Angeles Olympics 2028) ಆಡಿಸಲು ಒಲಿಂಪಿಕ್ಸ್​ ಸಂಸ್ಥೆ ನಿರ್ಧಾರ ಕೈಗೊಂಡಿದೆ. ಪುರುಷ ಮತ್ತು ಮಹಿಳೆಯರ ತಲಾ ಆರು ತಂಡಗಳು ಕಣಕ್ಕಿಳಿಯಲಿವೆ.

ಟ್ರೆಂಡಿಂಗ್​ ಸುದ್ದಿ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

ಕೊಹ್ಲಿಯೂ ಪ್ರಮುಖ ಕಾರಣ!

ಆದರೆ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಕ್ರಿಕೆಟ್ ಸೇರ್ಪಡೆಯಾಗಲು ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯೂ (Virat Kohli) ಕಾರಣ ಎಂದು 2028ರ ಲಾಸ್ ಏಂಜಲೀಸ್ ಸ್ಥಳೀಯ ಸಂಘಟನಾ ಸಮಿತಿಯ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ (Niccolo Campriani) ಹೇಳಿದ್ದಾರೆ. 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆಯ (International Olympic Committee) ನಂತರ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ಜಾಗತಿಕ ಪ್ರಸಿದ್ಧಿಯನ್ನು ಕೊಂಡಾಡಿದ ಲಾಸ್ ಏಂಜಲೀಸ್ ಒಲಿಂಪಿಕ್ಸ್​ ಆಯೋಜಕರು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಲು ವಿರಾಟ್ ಕೊಹ್ಲಿ ಪ್ರಮುಖ ಕಾರಣಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ. ಡಿಜಿಟಲ್ ಫ್ಲಾಟ್​​ಫಾರಂ ಮೂಲಕ ಕ್ರೀಡೆಗಳು ಪ್ರೇಕ್ಷಕರನ್ನ ಸೆಳೆಯುತ್ತಿವೆ. ಕ್ರಿಕೆಟ್ ಹೊರತಾಗಿಲ್ಲ ಎಂದು ನಿಕೊಲೊ ಕ್ಯಾಂಪ್ರಿಯಾನಿ ಹೇಳಿದ್ದಾರೆ.

ನನ್ನ ಸ್ನೇಹಿತ ವಿರಾಟ್​ ಕೊಹ್ಲಿ…

ನನ್ನ ಸ್ನೇಹಿತ ವಿರಾಟ್ ಕೊಹ್ಲಿ, ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಪ್ರಭಾವಿ. ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂನಲ್ಲೇ 25 ಕೋಟಿಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಅಥ್ಲೀಟ್. ಇದು ಟಾಮ್ ಬ್ರಾಡಿ, ಟೈಗರ್​ ವುಡ್ಸ್​, ಲೆಬ್ರಾನ್​ ಜೇಮ್ಸ್​ ಅವರಿಂತಲೂ ಅಧಿಕ. ಲಾಸ್​ ಏಂಜಲೀಸ್ 2028ರ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಗೊಳಿಸಲು ಇದು ಒಂದು ಪ್ರಮುಖ ಕಾರಣ ಎಂದು ಕ್ಯಾಂಪ್ರಿಯಾನಿ ಹೇಳಿದ್ದಾರೆ.

ಜಗತ್ತಿನ 3ನೇ ಕ್ರೀಡಾಪಟು

ಕ್ರಿಕೆಟ್​ ಲೋಕದಲ್ಲಿ ಕೊಹ್ಲಿಗಿರುವಷ್ಟು ಫ್ಯಾನ್ ಫಾಲೋಯಿಂಗ್ ಬೇರೆ ಯಾವ ಕ್ರಿಕೆಟಿಗನಿಗೂ ಇಲ್ಲ. ಇನ್​ಸ್ಟಾಗ್ರಾಂ ವೇದಿಕೆಯಲ್ಲಿ 25 ಕೋಟಿ ಅನುಯಾಯಿಗಳನ್ನು ಸಂಪಾದಿಸಿದ ಮೊದಲ ಭಾರತದ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು. ಪೋರ್ಚ್​ಗಲ್ ದೇಶದ ಕ್ರಿಸ್ಟಿಯಾನೋ ರೊನಾಲ್ಡೊ 58 ಕೋಟಿ, ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ 46 ಕೋಟಿ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇವರಿಬ್ಬರ ನಂತರ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಜನಪ್ರಿಯತೆ ವಿಶ್ವದಾದ್ಯಂತ ಹರಡಿದ ಕಾರಣಕ್ಕೆ ಕ್ಯಾಂಪ್ರಿಯಾನಿ, ಈ ಮಾತು ಹೇಳಿದ್ದಾರೆ.

ಕೊಹ್ಲಿಯೇ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲ್ಲ

ಹೌದು, ಅಚ್ಚರಿಯ ಸಂಗತಿ ಅಂದರೆ ಕ್ರಿಕೆಟ್​ ಸೇರ್ಪಡೆಗೆ ಕಾರಣ ಎಂದು ಕರೆಸಿಕೊಂಡ ಕೊಹ್ಲಿಯೇ, ಲಾಸ್ ಏಂಜಲೀಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವುದಿಲ್ಲ. ಸದ್ಯ ಕೊಹ್ಲಿಗೆ 34 ವರ್ಷ. ಈಗಾಗಲೇ ಟೀಮ್ ಇಂಡಿಯಾ ಟಿ20 ಕ್ರಿಕೆಟ್​​ಗೆ ದೂರವಾಗಿರುವ ಕೊಹ್ಲಿ, 2028ರ ಲಾಸ್​​ ಏಂಜಲೀಸ್​ ಒಲಿಂಪಿಕ್ಸ್​​ ವೇಳೆ ಅಸುಪಾಸು 40 ವರ್ಷ ಸಮೀಪಕ್ಕೆ ಬಂದಿರುತ್ತಾರೆ. ಆ ಸಮಯದಲ್ಲಿ ಕೊಹ್ಲಿ ನಿವೃತ್ತಿ ಅಂಚಿನಲ್ಲಿ ಇರಬಹುದು ಅಥವಾ ನಿವೃತ್ತಿಯೂ ಘೋಷಿಸಿರಬಹುದು. ಇದು ರೋಹಿತ್​ ಶರ್ಮಾಗೂ ಅನ್ವಯವಾಗುತ್ತದೆ.

1900ರಲ್ಲಿ ಮಾತ್ರ ಕ್ರಿಕೆಟ್ ಸೇರಿತ್ತು!

1896ರಿಂದ ಈವರೆಗೂ ಒಲಿಂಪಿಕ್ಸ್​ ಇತಿಹಾಸದಲ್ಲಿ ಒಂದು ಬಾರಿ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿತ್ತು. 1896ರ ಉದ್ಘಾಟನಾ ಏಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ವಿಫಲವಾಗಿತ್ತು. ಅಂದು ಹೆಚ್ಚಿನ ತಂಡಗಳು ಇರದ ಕಾರಣ ನಿರ್ಧಾರವನ್ನು ರದ್ದು ಮಾಡಲಾಗಿತ್ತು. ನಂತರ 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ಮೊದಲ ಬಾರಿ ಜರುಗಿತ್ತು. ಗ್ರೇಟ್‌ ಬ್ರಿಟನ್‌ ಮತ್ತು ಆತಿಥೇಯ ಫ್ರಾನ್ಸ್‌ ಮಾತ್ರ ಸ್ಪರ್ಧಿಸಿದ್ದವು. ಅಂದು ಬ್ರಿಟನ್‌ ಚಿನ್ನ ಜಯಿಸಿತ್ತು. ಆದರೆ ಬಳಿಕ ಕ್ರಿಕೆಟ್​ ಸೇರ್ಪಡೆಗೆ ಸಿದ್ಧ ನಡೆಯಿತಾದರೂ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ.

IPL, 2024

Live

PBKS

214/5

20.0 Overs

VS

SRH

129/3

(10.1)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ