logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2024: ಐಪಿಎಲ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಸಹಾಯಕ ಕೋಚ್ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

IPL 2024: ಐಪಿಎಲ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಸಹಾಯಕ ಕೋಚ್ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

Mar 02, 2024 07:24 PM IST

Lucknow Super Giants : ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಸಹಾಯಕ ಕೋಚ್​ ಆಗಿ ಲ್ಯಾನ್ಸ್ ಕ್ಲೂಸ್ನರ್ ಅವರನ್ನು ನೇಮಕ ಮಾಡಿದೆ.

  • Lucknow Super Giants : ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಸಹಾಯಕ ಕೋಚ್​ ಆಗಿ ಲ್ಯಾನ್ಸ್ ಕ್ಲೂಸ್ನರ್ ಅವರನ್ನು ನೇಮಕ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್​​ನ ಮುಂಬರುವ ಆವೃತ್ತಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್​ ಲ್ಯಾನ್ಸ್ ಕ್ಲೂಸ್ನರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮುಖ್ಯಕೋಚ್ ಜಸ್ಟಿನ್ ಲ್ಯಾಂಗರ್, ಇನ್ನೊಬ್ಬ ಸಹಾಯಕ ಕೋಚ್ ಎಸ್. ಶ್ರೀರಾಮ್​ಗೆ ಜೋಡಿಯಾಗಿ ಕೆಲಸ ಮಾಡಲಿದ್ದಾರೆ.
(1 / 5)

2022 ರಿಂದ ಎರಡು ಆವೃತ್ತಿಗಳಲ್ಲಿ ಕಣಕ್ಕಿಳಿದಿರುವ ಎಲ್​ಎಸ್​ಜಿ, ಎರಡೂ ಬಾರಿಯೂ ಪ್ಲೇ ಆಫ್​​ಗೆ ಪ್ರವೇಶಿಸಿದೆ. ಕ್ಲೂಸ್ನರ್ ಅವರು ಎಲ್ಎಸ್​​ಜಿ ತಂಡದ ಮಾಲೀಕರ ದಕ್ಷಿಣ ಆಫ್ರಿಕಾದ ಫ್ರಾಂಚೈಸಿ ಡರ್ಬನ್​ ಸೂಪರ್ ಜೈಂಟ್ಸ್​ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
(2 / 5)

ಕ್ಲೂಸ್ನರ್ ವಿಶ್ವದಾದ್ಯಂತದ ಹಲವು ತಂಡಗಳಿಗೆ ತರಬೇತುದಾರರಾಗಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
(3 / 5)

ಕಳೆದ ವರ್ಷ ಮೊದಲ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅಮೆಜಾನ್ ವಾರಿಯರ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯ ಬ್ಯಾಟಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
(4 / 5)

1996 ಮತ್ತು 2004ರ ನಡುವೆ ಕ್ಲೂಸ್ನರ್ ದಕ್ಷಿಣ ಆಫ್ರಿಕಾ ಪರ 49 ಟೆಸ್ಟ್ ಮತ್ತು 171 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಮಾರ್ಚ್ 24 ರಂದು ಜೈಪುರದಲ್ಲಿ 2008ರ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಲ್ಎಸ್​ಜಿ ಐಪಿಎಲ್ 2024ರಲ್ಲಿ ತನ್ನಅಭಿಯಾನ ಪ್ರಾರಂಭಿಸಲಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು