logo
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಪ್ಯಾಟ್ ಕಮ್ಮಿನ್ಸ್ ಅಲ್ಲ; ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್

IPL 2024: ಪ್ಯಾಟ್ ಕಮ್ಮಿನ್ಸ್ ಅಲ್ಲ; ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್

Umesh Kumar S HT Kannada

Oct 17, 2024 10:59 AM IST

google News

ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್. ಯಾರು ಅಂತ ಗೆಸ್ ಮಾಡ್ತೀರಾ..

  • ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅಥವಾ ಸ್ಟಾರ್ ಓಪನರ್ ಟ್ರಾವಿಸ್ ಹೆಡ್‌ಗೆ ಈ ಮೊತ್ತವನ್ನು ಪಾವತಿಸುತ್ತಿಲ್ಲ. ಬದಲಾಗಿ, ದಕ್ಷಿಣ ಆಫ್ರಿಕಾದ ಸ್ಫೋಟಕ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳುತ್ತದೆ ಎಂದು ವರದಿಯೊಂದು ಹೇಳಿದೆ. (ವರದಿ - ವಿನಯ್ ಭಟ್‌)

ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್. ಯಾರು ಅಂತ ಗೆಸ್ ಮಾಡ್ತೀರಾ..
ಆಫ್ರಿಕಾದ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ನೀಡಲು ಮುಂದಾದ ಕಾವ್ಯಾ ಮಾರನ್. ಯಾರು ಅಂತ ಗೆಸ್ ಮಾಡ್ತೀರಾ.. (ICC)

ಇಂಡಿಯನ್ ಪ್ರೀಮಿಯರ್ ಲೀಗ್ 2025 ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ನವೆಂಬರ್ ಅಂತ್ಯದಲ್ಲಿ ಬಿಸಿಸಿಐ ಮೆಗಾ ಹರಾಜನ್ನು ಆಯೋಜಿಸುತ್ತಿದೆ. ಇದಕ್ಕೂ ಮುನ್ನ, ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಹೆಸರನ್ನು ಬಹಿರಂಗಪಡಿಸಬೇಕು. ಈ ಘೋಷಣೆಗೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಕಳೆದ ಋತುವಿನಲ್ಲಿ ರನ್ನರ್ ಅಪ್ ಆಗಿದ್ದ ಹೈದರಾಬಾದ್ ತಂಡ ಈ ಬಾರಿ ಈ ಆಟಗಾರನನ್ನು ಉಳಿಸಿಕೊಳ್ಳಲು 23 ಕೋಟಿ ರೂ. ನೀಡಲು ಮುಂದಾಗಿದೆ ಎಂದು ಬರದಿ ಆಗಿದೆ. ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅಥವಾ ಸ್ಟಾರ್ ಓಪನರ್ ಟ್ರಾವಿಸ್ ಹೆಡ್‌ಗೆ ಈ ಮೊತ್ತವನ್ನು ಪಾವತಿಸುತ್ತಿಲ್ಲ. ಬದಲಾಗಿ, ದಕ್ಷಿಣ ಆಫ್ರಿಕಾದ ಸ್ಫೋಟಕ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳುತ್ತದೆ ಎಂದು ವರದಿಯೊಂದು ಹೇಳಿದೆ.

ಕ್ಲಾಸೆನ್ ಮೊದಲ ಆಯ್ಕೆ, ಕಮ್ಮಿನ್ಸ್ ನಾಯಕ

ಹೈದರಾಬಾದ್ ಕಳೆದ ಋತುವಿನಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿಗೆ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಆದರು. ಹೈದರಾಬಾದ್ ಅವರನ್ನು ನಾಯಕನನ್ನಾಗಿ ಮಾಡಿ, ತಂಡವನ್ನು ಫೈನಲ್‌ಗೆ ಕರೆದೊಯ್ದರು. ಇದರ ಹೊರತಾಗಿಯೂ, ಹೆಚ್ಚಿನ ಮೊತ್ತವನ್ನು ಪಾವತಿಸಿ ಅವರನ್ನು ಉಳಿಸಿಕೊಳ್ಳಲು ಎಸ್​ಆರ್​ಹೆಚ್ ಸಿದ್ಧವಾಗಿಲ್ಲ.

ESPN-Cricinfo ವರದಿಯ ಪ್ರಕಾರ, ಕಳೆದ ಋತುವಿನಲ್ಲಿ 171 ರ ಪ್ರಚಂಡ ಸ್ಟ್ರೈಕ್ ರೇಟ್​ನಲ್ಲಿ 479 ರನ್​ಗಳನ್ನು ಗಳಿಸಿದ ಕ್ಲಾಸೆನ್ ಅವರನ್ನು ತನ್ನ ಮೊದಲ ಧಾರಣ ಆಟಗಾರನಾಗಿ ಆಯ್ಕೆ ಮಾಡುತ್ತದೆ ಎಂದು ಹೇಳಿದೆ. ಇದರ ಜೊತೆಗೆ ಈ ಬಾರಿ ಕಮ್ಮಿನ್ಸ್ ಸುಮಾರು 2.5 ಕೋಟಿ ರೂಪಾಯಿ ಕಡಿಮೆ ಮೊತ್ತ ಪಡೆಯಲಿದ್ದಾರಂತೆ. ಫ್ರಾಂಚೈಸಿಯು ತನ್ನ ನಾಯಕನನ್ನು ಎರಡನೇ ಧಾರಣ ಆಟಗಾರನಾಗಿ 18 ಕೋಟಿ ರೂ. ಗೆ ಉಳಿಸಿಕೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇನ್ಯಾರಿದ್ದಾರೆ

ಅಂತೆಯೆ ಕಳೆದ ಋತುವಿನಲ್ಲಿ ಸ್ಫೋಟಕ ಓಪನಿಂಗ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದ ಭಾರತದ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ಮೂರನೇ ಸ್ಥಾನದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು 14 ಕೋಟಿ ರೂ. ನೀಡಲಿದೆ. ಇವರು ಕಳೆದ ಸೀಸನ್​ನಲ್ಲಿ 204 ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಗಳಿಸಿದ್ದರು ಮತ್ತು ಗರಿಷ್ಠ 42 ಸಿಕ್ಸರ್‌ಗಳನ್ನು ಬಾರಿಸಿದ್ದರು. ಟ್ರಾವಿಸ್ ಹೆಡ್ 191.55 ಸ್ಟ್ರೈಕ್ ರೇಟ್‌ನಲ್ಲಿ 567 ರನ್ ಗಳಿಸಿದ್ದರು.

ಹೆಡ್ ಅಥವಾ ಪ್ಯಾಟ್ ಕಮ್ಮಿನ್ಸ್ ಹೈದರಾಬಾದ್​ನ ಮೊದಲ ಧಾರಣ ಆಟಗಾರರು ಎಂದು ನಂಬಲಾಗಿತ್ತು. ಆದರೆ ಕ್ಲಾಸೆನ್ ಬಗ್ಗೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಅಂತೆಯೆ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಉಳಿಸಿಕೊಳ್ಳಲು ಎಸ್‌ಆರ್‌ಹೆಚ್ ನಿರ್ಧರಿಸಿದೆ. ಇತ್ತೀಚೆಗೆ ಟೀಮ್ ಇಂಡಿಯಾಕ್ಕಾಗಿ ಇವರು ತಮ್ಮ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಇಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ 34 ಎಸೆತಗಳಲ್ಲಿ 74 ರನ್ ಗಳಿಸಿದರು. ಇದಲ್ಲದೇ ಸರಣಿಯಲ್ಲಿ 3 ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು.

ವರದಿ: ವಿನಯ್ ಭಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ