IPL 2025: ಐಪಿಎಲ್ 2025 ಮೆಗಾ ಹರಾಜಿನಲ್ಲಿ ದೊಡ್ಡ ಬದಲಾವಣೆ: ಈ ಬಾರಿ ಆಕ್ಷನ್ ನಡೆಯೋದು ಭಾರತದಲ್ಲಲ್ಲ?
Oct 14, 2024 12:12 PM IST
ಐಪಿಎಲ್ 2025 ಮೆಗಾ ಹರಾಜಿನಲ್ಲಿ ದೊಡ್ಡ ಬದಲಾವಣೆ: ಈ ಬಾರಿಯ ಆಕ್ಷನ್ ನಡೆಯೋದು ಭಾರತದಲ್ಲಲ್ಲ!
- ಬಿಸಿಸಿಐ ಈ ಹಿಂದೆ ಲಂಡನ್ ಮತ್ತು ಸೌದಿ ಅರೇಬಿಯಾವನ್ನು ಐಪಿಎಲ್ 2025 ರ ಮೆಗಾ ಹರಾಜಿಗೆ ಸ್ಥಳವಾಗಿ ಪರಿಗಣಿಸಿತ್ತು. ಆದರೆ, ಈ ಸ್ಥಳವನ್ನು ಇದೀಗ ಕೈಬಿಟ್ಟು ಮತ್ತೊಂದು ಸುಂದರ ದೇಶವನ್ನು ಆಯ್ಕೆ ಮಾಡಿದ್ದು, ಅಲ್ಲಿ ಹರಾಜು ನಡೆಸಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025ರ (IPL 2025) ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಆದರೆ, ಬಿಸಿಸಿಐ ಹರಾಜು ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಅಪ್‌ಡೇಟ್ ಕೊಟ್ಟಿಲ್ಲ. ವರದಿಗಳ ಪ್ರಕಾರ, ಬಿಸಿಸಿಐ ಈ ಹಿಂದೆ ಲಂಡನ್ ಮತ್ತು ಸೌದಿ ಅರೇಬಿಯಾವನ್ನು ಐಪಿಎಲ್ 2025 ರ ಮೆಗಾ ಹರಾಜಿಗೆ ಸ್ಥಳವಾಗಿ ಪರಿಗಣಿಸಿತ್ತು. ಆದರೆ, ಈ ಸ್ಥಳವನ್ನು ಇದೀಗ ಕೈಬಿಟ್ಟು ಮತ್ತೊಂದು ಸುಂದರ ದೇಶವನ್ನು ಆಯ್ಕೆ ಮಾಡಿದ್ದು, ಅಲ್ಲಿ ಹರಾಜು ನಡೆಸಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಐಪಿಎಲ್ 2025 ರ ಮೆಗಾ ಹರಾಜು ಎಲ್ಲಿ ನಡೆಯಲಿದೆ?
ಕಳೆದ ಬಾರಿಯಂತೆ ಈ ಬಾರಿಯೂ ಐಪಿಎಲ್ ಹರಾಜು ಭಾರತದ ಹೊರಗೆ ನಡೆಯಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಐಪಿಎಲ್ 2024 ಹರಾಜನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಐಪಿಎಲ್ 2025 ಋತುವಿನ ಹರಾಜು ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿತ್ತು, ಈಗ ಮತ್ತೊಂದು ಅಪ್ಡೇಟ್ ಹೊರಬಂದಿದೆ. ಕ್ರಿಕ್‌ಬಝ್‌ನ ವರದಿಯ ಪ್ರಕಾರ, ಸೌದಿ ಅರೇಬಿಯಾವನ್ನು ಹೊರತುಪಡಿಸಿ, ಸಿಂಗಾಪುರದಲ್ಲಿ ಐಪಿಎಲ್ 2025 ಆಕ್ಷನ್ ನಡೆಯಲಿದೆಯಂತೆ. ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳು ಈ ಸ್ಥಳವನ್ನೇ ಫೈನಲ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಫ್ರಾಂಚೈಸಿಗಳಿ್ಎ ಇನ್ನೂ ಸ್ಥಳದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ, ಅವರು ಹರಾಜಿನಲ್ಲಿ ಭಾಗವಹಿಸುವ ತಮ್ಮ ಪ್ರತಿನಿಧಿಗಳಿಗೆ ವೀಸಾ ಮತ್ತು ಪ್ರಯಾಣದ ವ್ಯವಸ್ಥೆಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಲು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಧಾರಣೆ ಪಟ್ಟಿ ಶೀಘ್ರದಲ್ಲೇ ಪ್ರಕಟ
ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಈಗ ತಮ್ಮ ಅಸ್ತಿತ್ವದಲ್ಲಿರುವ ತಂಡದಿಂದ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಈ ಪೈಕಿ, 5 ಆಟಗಾರರನ್ನು (ಭಾರತೀಯ ಮತ್ತು ವಿದೇಶಿ) ಕ್ಯಾಪ್ ಮಾಡಬಹುದು, ಆದರೆ ಗರಿಷ್ಠ 2 ಆಟಗಾರರನ್ನು ಮಾತ್ರ ಅನ್‌ಕ್ಯಾಪ್ ಮಾಡಬಹುದು. ವರದಿಯ ಪ್ರಕಾರ, ಹರಾಜಿನ ಮೊದಲು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಮತ್ತು ಸಲ್ಲಿಸಲು ಫ್ರಾಂಚೈಸಿಗೆ ಅಕ್ಟೋಬರ್ 31, 2024 ರಂದು ಸಂಜೆ 5 ಗಂಟೆಯವರೆಗೆ ಸಮಯವಿದೆ. ಇದರ ಹೊರತಾಗಿ, ಯಾವುದೇ ಆಟಗಾರ ಅಕ್ಟೋಬರ್ 31 ರ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೆ, ಅವರನ್ನು ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
ಸಂಜು ಸ್ಯಾಮ್ಸನ್ಗೆ ಸತತ 5 ಸಿಕ್ಸರ್ ಬಾರಿಸಲು ಹೇಳಿದ್ದು ಯಾರು?
ಬಾಂಗ್ಲಾದೇಶ ವಿರುದ್ಧದ 3ನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸತತ ಐದು ಸಿಕ್ಸರ್ ಬಾರಿಸಿ ಗಮನ ಸೆಳೆದರು. ಈ ಬಗ್ಗೆ ಮಾತನಾಡಿದ ಸಂಜು, ‘ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಂದು ಶಕ್ತಿ ಇದೆ. ನಾನು ಈ ರೀತಿ ಆಡಿದ್ದಕ್ಕೆ ತಂಡ ಸಂತೋಷವಾಗಿದೆ. ಆದರೂ ಸಾಕಷ್ಟು ಅನುಭವದೊಂದಿಗೆ ನಾನು ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು. ಒತ್ತಡವನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ. ದೇಶಕ್ಕಾಗಿ ಆಡುವಾಗ ನೀವು ಸಾಕಷ್ಟು ಒತ್ತಡದಿಂದ ಬರುತ್ತೀರಿ. ನಿಜಕ್ಕೂ ಒತ್ತಡವಿತ್ತು, ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಕಳೆದ ಸರಣಿಯಲ್ಲಿ ನಾನು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ನನಗೆ ಬೆಂಬಲ ನೀಡಿತು. ಕೆಲವು ಸಮಯದಿಂದ, ನನ್ನ ಗುರುಗಳು ನಾನು ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಬಲ್ಲೆ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಹೇಳಿದಂತೆ ನಾನು ಹಾಗೆ ಮಾಡಲು ಪ್ರಯತ್ನಿಸುತ್ತಿದ್ದೆ. ಅದು ಇಂದು ನೆವೇರಿದೆ,’ ಎಂದು ಹೇಳಿದ್ದಾರೆ.