Shreyas Iyer: 26.75 ಕೋಟಿ ರೂಪಾಯಿಗೆ ಪಂಜಾಬ್ ಪಾಲಾದ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ ಹೀಗಿದೆ
Nov 24, 2024 06:19 PM IST
ಟೀಂ ಇಂಡಿಯಾದ ಆಟಗಾರ ಶ್ರೇಯಸ್ ಅಯ್ಯರ್ ಐಪಿಎಲ್ ಹರಾಜಿನಲ್ಲಿ
- ಟೀಂ ಇಂಡಿಯಾದ ಬ್ಯಾಟರ್ ಶ್ರೇಯರ್ ಅಯ್ಯರ್ ಐಪಿಎಲ್ ಹರಾಜು 2025 ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾದ ಮೊದಲು ಭಾರತೀಯ ಆಟಗಾರ ಎನಿಸಿದ್ದಾರೆ. ಈ ಬಗ್ಗೆ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದ್ದಾರೆ.
2025ರ ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಟೂರ್ನಿಗಾಗಿ ಸೌದಿ ಅರೇಬಿಯಾ ಜೆಡ್ಡಾದಲ್ಲಿನ ಹರಾಜು ಪ್ರಕ್ರಿಯೆಯಲ್ಲಿ ಶ್ರೇಯಸ್ ಅಯ್ಯರ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) 26.75 ಕೋಟಿ ರೂಪಾಯಿಗೆ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿದೆ. ಇದು ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತ ಎನಿಸಿದೆ. ಇದೇ ಹರಾಜಿನಲ್ಲಿ ರಿಷಭ್ ಪಂತ್ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತದ ದಾಖಲೆಯಾಗಿದೆ.
ದೊಡ್ಡ ಮೊತ್ತಕ್ಕೆ ಪಿಬಿಕೆಎಸ್ ಪಾಲಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶ್ರೇಯಸ್ ಅಯ್ಯರ್, ಎಲ್ಲರಿಗೂ ನಮಸ್ಕಾರ. ಪಂಜಾಬ್ ಕಿಂಗ್ಸ್ ಕುಟುಂಬವನ್ನು ಸೇರಲು ಉತ್ಸುಕನಾಗಿದ್ದೇನೆ. ಈ ಋತುವಿನ ಕಿಕ್‌ಸ್ಟಾರ್ಟ್‌ಗಾಗಿ ಇನ್ನ ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ. ಶ್ರೇಯಸ್ ಅವರ ಈ ವಿಡಿಯೊವನ್ನು ಪಂಜಾಬ್ ಕಿಂಗ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
2022ರ ಐಪಿಎಲ್ನಲ್ಲಿ 12.50 ಕೋಟಿಗೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದ ಅಯ್ಯರ್, 2023ರಲ್ಲಿ ಗಾಯದ ಕಾರಣ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಆದರೆ 2024ರ ಐಪಿಎಲ್ಗೆ ಮರಳಿದ ಶ್ರೇಯಸ್ ಕೆಕೆಆರ್ ತಂಡವನ್ನು ಗೌತಮ್ ಗಂಭೀರ್ ಬಳಿಕ ಮೂರನೇ ಬಾರಿಗೆ ಚಾಂಪಿಯನ್ ಮಾಡಿದರು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. 2019ರಲ್ಲಿ ಆ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು. ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಡೆಲ್ಲಿ ಕ್ಯಾಪಿಟಲ್ಸ್ 26.50 ಕೋಟಿಯವರಿಗೆ ಬಿಡ್ ಮಾಡಿತು. ಆದರೆ ಅಂತಿಮವಾಗಿ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾದರು.
ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಪ್ರದರ್ಶನ
ಪಂದ್ಯ - 115
ರನ್ - 3127
ಬೆಸ್ಟ್ - 96
ಸರಾಸರಿ - 32.24
ಸ್ಟ್ರೈಕ್ರೇಟ್ 127.48
4/6 - 271/113
ನಾಟೌಟ್ - 18
ಶ್ರೇಯಸ್ ಅಯ್ಯರ್ ನಾಯಕತ್ವ ದಾಖಲೆ
ಪಂದ್ಯಗಳು - 55
ಗೆಲುವು - 27
ಸೋಲು - 26
ಟೈ - 2
ಗೆಲುವಿನ ಶೇಕಡಾವಾರು - 50.90%
2024ರ ಐಪಿಎಲ್ನಲ್ಲಿ ಅಯ್ಯರ್ ಪ್ರದರ್ಶನ
ಪಂದ್ಯ - 14
ರನ್ - 351
ಬೆಸ್ಟ್ - 58*
ಸರಾಸರಿ - 39.00
ಸ್ಟ್ರೈಕ್ರೇಟ್ - 146.86
4/6 - 34/14
ನಾಟೌಟ್ - 5