logo
ಕನ್ನಡ ಸುದ್ದಿ  /  ಕ್ರಿಕೆಟ್  /  ಈ ವರ್ಷದ ಚೊಚ್ಚಲ ಶತಕದೊಂದಿಗೆ ನೂತನ ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ; ಆಸ್ಟ್ರೇಲಿಯಾದಲ್ಲಿ ಸಚಿನ್ ದಾಖಲೆ ಉಡೀಸ್

ಈ ವರ್ಷದ ಚೊಚ್ಚಲ ಶತಕದೊಂದಿಗೆ ನೂತನ ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ; ಆಸ್ಟ್ರೇಲಿಯಾದಲ್ಲಿ ಸಚಿನ್ ದಾಖಲೆ ಉಡೀಸ್

Prasanna Kumar P N HT Kannada

Nov 24, 2024 06:09 PM IST

google News

ಈ ವರ್ಷದ ಚೊಚ್ಚಲ ಶತಕದೊಂದಿಗೆ ನೂತನ ಮೈಲಿಗಲ್ಲು ನೆಟ್ಟಿದ ವಿರಾಟ್ ಕೊಹ್ಲಿ; ಆಸ್ಟ್ರೇಲಿಯಾದಲ್ಲಿ ಸಚಿನ್ ದಾಖಲೆ ಉಡೀಸ್

    • Virat Kohli: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 30ನೇ ಶತಕವನ್ನು ಪೂರೈಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಈ ವರ್ಷದ ಚೊಚ್ಚಲ ಶತಕದೊಂದಿಗೆ ನೂತನ ಮೈಲಿಗಲ್ಲು ನೆಟ್ಟಿದ ವಿರಾಟ್ ಕೊಹ್ಲಿ; ಆಸ್ಟ್ರೇಲಿಯಾದಲ್ಲಿ ಸಚಿನ್ ದಾಖಲೆ ಉಡೀಸ್
ಈ ವರ್ಷದ ಚೊಚ್ಚಲ ಶತಕದೊಂದಿಗೆ ನೂತನ ಮೈಲಿಗಲ್ಲು ನೆಟ್ಟಿದ ವಿರಾಟ್ ಕೊಹ್ಲಿ; ಆಸ್ಟ್ರೇಲಿಯಾದಲ್ಲಿ ಸಚಿನ್ ದಾಖಲೆ ಉಡೀಸ್ (AFP)

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಸೂಪರ್​ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 30ನೇ ಟೆಸ್ಟ್​ ಶತಕವನ್ನು ಸಿಡಿಸಿದ್ದಾರೆ. ಇದರೊಂದಿಗೆ ಹಲವು ಪಂದ್ಯಗಳಿಂದ ತೀವ್ರ ವೈಫಲ್ಯಕ್ಕೆ ಒಳಗಾಗಿದ್ದ ಕೊಹ್ಲಿ, ಕೊನೆಗೂ ಲಯಕ್ಕೆ ಮರಳಿದ್ದಾರೆ. 16 ಇನ್ನಿಂಗ್ಸ್​​ಗಳ ಬಳಿಕ ಶತಕ ಪೂರೈಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಟೆಸ್ಟ್​​ನಲ್ಲಿ 30ನೇ ಶತಕ, ಒಟ್ಟಾರೆ 81ನೇ ಅಂತಾರಾಷ್ಟ್ರೀಯ ಶತಕ ಇದಾಗಿದೆ. ಮತ್ತೊಂದು ಅಚ್ಚರಿ ಏನೆಂದರೆ 2024ರಲ್ಲಿ ವಿರಾಟ್ ಸಿಡಿಸಿದ ಮೊದಲ ಸೆಂಚುರಿ ಇದಾಗಿದೆ. ಈ ವರ್ಷದ ಚೊಚ್ಚಲ ಶತಕದೊಂದಿಗೆ ಸಚಿನ್ ತೆಂಡೂಲ್ಕರ್​ ಸೇರಿ ಹಲವರ ದಾಖಲೆಗಳನ್ನು ಮುರಿದಿದ್ದಾರೆ.

ಪರ್ತ್​ನ ಆಪ್ಟಸ್​ನಲ್ಲಿ ನಡೆಯುತ್ತಿರುವ ಈ ಟೆಸ್ಟ್​ನಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್​​ನಲ್ಲಿ 150 ರನ್​ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಇದಕ್ಕೆ ಪ್ರತಿ ದಾಳಿಯಾಗಿ ಆಸೀಸ್ ತಂಡವನ್ನು ಪ್ರಥಮ ಇನ್ನಿಂಗ್ಸ್​​ನಲ್ಲಿ 104 ರನ್​ಗೆ ​ಕಟ್ಟಿ ಹಾಕಿ 46 ರನ್​ಗಳ ಅಲ್ಪ ಮುನ್ನಡೆ ಸಾಧಿಸಿತು. 2ನೇ ಇನ್ನಿಂಗ್ಸ್​ನಲ್ಲಿ ಅಬ್ಬರಿಸಿದ ಭಾರತ ತಂಡ, ಆತಿಥೇಯರ ತಂಡಕ್ಕೆ ಬೃಹತ್ ಗುರಿ ನೀಡಿತು. ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕಗಳ ನೆರವಿನಿಂದ 534 ರನ್​ ಬೃಹತ್ ಟಾರ್ಗೆಟ್ ನೀಡಿದೆ. ಕೊಹ್ಲಿ ಅವರು 144ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ 100 ರನ್ ಪೂರೈಸುತ್ತಿದ್ದಂತೆ ಭಾರತ ತಂಡ ಡಿಕ್ಲೇರ್ ಘೋಷಿಸಿತು.

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಶತಕ, ಸಚಿನ್ ದಾಖಲೆ ಬ್ರೇಕ್

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಕಾಂಗರೂ ನಾಡಿನಲ್ಲಿ ಸಚಿನ್ ಸಿಡಿಸಿದ್ದ 6 ಶತಕಗಳ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಪ್ರಸ್ತುತ ಇಲ್ಲಿ ಕೊಹ್ಲಿ ಸೆಂಚುರಿಗಳ ಸಂಖ್ಯೆ 7. ಆಸೀಸ್ ಮಣ್ಣಿನಲ್ಲಿ ಅತ್ಯಧಿಕ 100 ಬಾರಿಸಿದ ವಿಶ್ವದ ಮೂರನೇ ಆಟಗಾರ. ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚು ಸೆಂಚುರಿ ಬಾರಿಸಿದ ಪ್ರವಾಸಿಗರ ಪಟ್ಟಿ ಇಲ್ಲಿದೆ.

ಆಸ್ಟ್ರೇಲಿಯಾದಲ್ಲಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಪ್ರವಾಸಿ ಬ್ಯಾಟರ್ಸ್

9 ಶತಕ - ಜ್ಯಾಕ್ ಹಾಬ್ಸ್

7 ಶತಕ - ವಾಲಿ ಹ್ಯಾಮಂಡ್

7 ಶತಕ - ವಿರಾಟ್ ಕೊಹ್ಲಿ

6 ಶತಕ - ಹರ್ಬರ್ಟ್ ಸಟ್ಕ್ಲಿಫ್

6 ಶತಕ - ಸಚಿನ್ ತೆಂಡೂಲ್ಕರ್

ಇದು ಎಲ್ಲಾ ಫಾರ್ಮೆಟ್​ಲ್ಲೂ ಸೇರಿ ಆಸ್ಟ್ರೇಲಿಯಾದಲ್ಲಿ ಕೊಹ್ಲಿಯ 10ನೇ ಶತಕವಾಗಿದೆ. ಇದು ವಿಸಿಟಿಂಗ್​ ಬ್ಯಾಟರ್‌ನಿಂದ ಅತಿ ಹೆಚ್ಚು ಶತಕದ ದಾಖಲೆ. ಸಚಿನ್ ಸಹ ಈ ದಾಖಲೆ ಹೊಂದಿಲ್ಲ.

ಭಾರತದ ಪರ ವಿದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದವರು

7 ಶತಕ - ವೆಸ್ಟ್ ಇಂಡೀಸ್‌ನಲ್ಲಿ ಸುನಿಲ್ ಗವಾಸ್ಕರ್

7 ಶತಕ - ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ

6 ಶತಕ - ಇಂಗ್ಲೆಂಡ್‌ನಲ್ಲಿ ರಾಹುಲ್ ದ್ರಾವಿಡ್

6 ಶತಕ - ಆಸ್ಟ್ರೇಲಿಯಾದಲ್ಲಿ ಸಚಿನ್ ತೆಂಡೂಲ್ಕರ್

ತಂಡವೊಂದರ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯರು

13 ಶತಕ - ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್

11 ಶತಕ - ಸಚಿನ್ ತೆಂಡೂಲ್ಕರ್ vs ಆಸ್ಟ್ರೇಲಿಯಾ

9 ಶತಕ - ಸಚಿನ್ ತೆಂಡೂಲ್ಕರ್ vs ಶ್ರೀಲಂಕಾ

9 ಶತಕ - ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ

8 ಶತಕ - ಸುನಿಲ್ ಗವಾಸ್ಕರ್ vs ಆಸ್ಟ್ರೇಲಿಯಾ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ