logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿ ಟ್ರೋಫಿ ಆಡದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ಗೆ ಶಿಕ್ಷೆ; ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕಿಕೌಟ್

ರಣಜಿ ಟ್ರೋಫಿ ಆಡದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ಗೆ ಶಿಕ್ಷೆ; ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕಿಕೌಟ್

Prasanna Kumar P N HT Kannada

Feb 23, 2024 09:33 PM IST

google News

ರಣಜಿ ಟ್ರೋಫಿ ಆಡದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ಗೆ ಶಿಕ್ಷೆ

    • Ishan Kishan - Shreyas Iyer : ಬಿಸಿಸಿಐ 2023-24ರ ಋತುವಿಗಾಗಿ ಕೇಂದ್ರ ಒಪ್ಪಂದಗಳಿಗೆ ಒಳಪಟ್ಟಿರುವ ಆಟಗಾರರ ಪಟ್ಟಿ ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ರಣಜಿ ಆಡದಿದ್ದಕ್ಕೆ ಶಿಕ್ಷೆಯಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.
ರಣಜಿ ಟ್ರೋಫಿ ಆಡದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ಗೆ ಶಿಕ್ಷೆ
ರಣಜಿ ಟ್ರೋಫಿ ಆಡದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ಗೆ ಶಿಕ್ಷೆ

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಇತ್ತೀಚೆಗೆ ಕೆಟ್ಟ ಸಮಯ ಎದುರಿಸುತ್ತಿದ್ದಾರೆ. ರಣಜಿ ಆಡುವಂತೆ ಬಿಸಿಸಿಐ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯತನ ತೋರಿದ ಮತ್ತು ಶಿಸ್ತು ಪಾಲಿಸದ ಇಬ್ಬರೂ ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ.

ಗುತ್ತಿಗೆ ಪಟ್ಟಿಯಿಂದ ಕಿಕೌಟ್

ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ದೇಶೀಯ ಕ್ರಿಕೆಟ್​ ಆಡುವುದನ್ನು ತಪ್ಪಿಸಿಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ನಡುವೆಯೂ ಇಬ್ಬರೂ ರಣಜಿ ಆಡುವುದರಿಂದ ಹಿಂದೆ ಸರಿದ್ದರು. ಹಾಗಾಗಿ ಯುವ ಆಟಗಾರರಿಬ್ಬರು ಸೆಂಟ್ರಲ್ ಕಾಂಟ್ರಾಕ್ಟ್​ನಿಂದ ಕಿಕೌಟ್ ಆಗುವ ಸಾಧ್ಯತೆ ಇದೆ.

ಆಟಗಾರರು ದೇಶೀಯ ರೆಡ್-ಬಾಲ್ ಟೂರ್ನಿಯನ್ನು ಕಡ್ಡಾಯವಾಗಿ ಆಡಬೇಕೆಂದು ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರು ಬ್ಯಾಟರ್‌ಗಳು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿಲ್ಲ. ಈಗ ಭಾರತದ ಇಬ್ಬರು ಸ್ಟಾರ್‌ಗಳು ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗಬಹುದು. ಅಲ್ಲದೆ, ಇಬ್ಬರು ಐಪಿಎಲ್​ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ಉನ್ನತ ಮೂಲಗಳಿಂದ ಮಾಹಿತಿ

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಬಿಸಿಸಿಐ 2023-24ರ ಋತುವಿಗಾಗಿ ಕೇಂದ್ರ ಒಪ್ಪಂದಗಳಿಗೆ ಒಳಪಟ್ಟಿರುವ ಆಟಗಾರರ ಪಟ್ಟಿ ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ರಣಜಿ ಆಡದಿದ್ದಕ್ಕೆ ಶಿಕ್ಷೆಯಾಗಿ ಇಶಾನ್ ಮತ್ತು ಅಯ್ಯರ್​ರನ್ನು ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಕಳೆದ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ನಂತರ ಕಿಶನ್ ಭಾರತದ ಪರ ಮತ್ತೆ ಕಣಕ್ಕಿಳಿದಿಲ್ಲ. ಇಂಗ್ಲೆಂಡ್ ವಿರುದ್ಧದ ಅಂತಿಮ 3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಿಂದ ಅಯ್ಯರ್​​​ರನ್ನು ಕೈಬಿಡಲಾಯಿತು. ಇದೀಗ ಗುತ್ತಿಗೆ ಪಟ್ಟಿಯಿಂದಲೇ ಹೊರಬೀಳುವ ಸ್ಥಿತಿಗೆ ಬಂದಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು 2023-24ರ ಆವೃತ್ತಿಗೆ ಕೇಂದ್ರೀಯ ಗುತ್ತಿಗೆ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಇದನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಕಿಶನ್ ಮತ್ತು ಅಯ್ಯರ್ ಆ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇಬ್ಬರೂ ಬಿಸಿಸಿಐ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ.

ಸುಳ್ಳು ಹೇಳಿದ್ದ ಉಭಯ ಆಟಗಾರರು

ಈ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಕಿಶನ್ ಜಾರ್ಖಂಡ್ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಯ್ಯರ್ ಆಂಧ್ರಪ್ರದೇಶ ವಿರುದ್ಧದ ಏಕೈಕ ರಣಜಿ ಪಂದ್ಯಕ್ಕಾಗಿ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬರೋಡಾ ವಿರುದ್ಧದ ಕ್ವಾರ್ಟರ್-ಫೈನಲ್‌ಗೆ ಬೆನ್ನು ನೋವು ಎಂದು ಸುಳ್ಳು ಹೇಳಿ ತಂಡದಿಂದ ಹಿಂದೆ ಸರಿದರು.

ಮತ್ತೊಂದೆಡೆ, ಎನ್‌ಸಿಎಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಅವರು ಅಯ್ಯರ್ ಆಡಲು ಯೋಗ್ಯರಾಗಿದ್ದಾರೆ. ಫಿಟ್​ ಆಗಿದ್ದು ಆಯ್ಕೆಗೆ ಲಭ್ಯರಿದ್ದಾರೆ ಎಂದು ಇ-ಮೇಲ್ ಮಾಡಿದ್ದಾರೆ. ಮತ್ತೊಂದೆಡೆ ಮಾನಸಿಕ ವಿಶ್ರಾಂತಿ ಎಂದು ಹೇಳಿ ಸೌತ್​ ಆಫ್ರಿಕಾ ಸರಣಿಯಿಂದ ಇಶಾನ್ ಹಿಂದೆ ಸರಿದಿದ್ದರು.

ಇಶಾನ್ ಐಪಿಎಲ್​ಗೆ ಭರ್ಜರಿ ಸಿದ್ಧತೆ

ರಣಜಿ ಆಡದೆ ತಪ್ಪಿಸಿಕೊಂಡಿದ್ದ ಇಶಾನ್ ಕಿಶನ್​ ಐಪಿಎಲ್​ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಜಿಮ್​ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಎಚ್ಚರಿಸಿದ್ದ ಜಯ್​ ಶಾ

ರಾಜ್‌ಕೋಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಆಟಗಾರರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದರು. ರೆಡ್ ಬಾಲ್ ಕ್ರಿಕೆಟ್ ಆಡದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಗುತ್ತಿಗೆ ಆಟಗಾರರಿಗೆ ಫೋನ್‌ನಲ್ಲಿ ತಿಳಿಸಲಾಗಿದೆ ಎಂದಿದ್ದರು.

ಕೇಂದ್ರೀಯ ಗುತ್ತಿಗೆ ಆಟಗಾರರಿಗೆ ಮತ್ತು ಭಾರತ ಎ ಆಟಗಾರರಿಗೆ ಪತ್ರ ಬರೆಯುತ್ತೇನೆ. ಆಯ್ಕೆಗಾರರ ​​ಅಧ್ಯಕ್ಷರು, ಕೋಚ್ ಮತ್ತು ನಾಯಕ ನೀವು ರೆಡ್-ಬಾಲ್ ಕ್ರಿಕೆಟ್ ಆಡಬೇಕೆಂದು ಬಯಸಿದರೆ ಆಡಬೇಕು. ಕಿಶನ್ ಅವರು ಚಿಕ್ಕವರಾಗಿದ್ದಾರೆ. ಅವರಿಗೆ ಮಾತ್ರ ನಿರ್ದಿಷ್ಟವಾಗಿ ಹೇಳುತ್ತಿಲ್ಲ. ಏಕೆಂದರೆ, ಇದು ಎಲ್ಲಾ ಆಟಗಾರರಿಗೆ ಏಕರೂಪವಾಗಿ ಅನ್ವಯಿಸುತ್ತದೆ ಜಯ್ ಶಾ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ