logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬುಮ್ರಾ, ಅಶ್ವಿನ್ ಮಾರಕ ದಾಳಿಗೆ ಮಣಿದ ಇಂಗ್ಲೆಂಡ್; ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ 106 ರನ್‌ ಗೆಲುವು, ಸರಣಿ ಸಮಬಲ

ಬುಮ್ರಾ, ಅಶ್ವಿನ್ ಮಾರಕ ದಾಳಿಗೆ ಮಣಿದ ಇಂಗ್ಲೆಂಡ್; ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ 106 ರನ್‌ ಗೆಲುವು, ಸರಣಿ ಸಮಬಲ

Jayaraj HT Kannada

Feb 05, 2024 02:19 PM IST

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು

    • India vs England 2nd Test: ವಿಶಾಖಪಟ್ಟದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ನಲ್ಲಿ, ರೋಹಿತ್‌ ಶರ್ಮಾ ಪಡೆ ಗೆದ್ದು ಬೀಗಿದೆ. ಬೆನ್‌ ಸ್ಟೋಕ್ಸ್‌ ಬಳಗವು 292 ರನ್‌ಗಳಿಗೆ ಆಲೌಟ್‌ ಆಯ್ತು. ಹೀಗಾಗಿ ಭಾರತ ಕ್ರಿಕೆಟ್‌ ತಂಡವು 106 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು (REUTERS)

ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮೊದಲ ಟೆಸ್ಟ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್‌ನಲ್ಲಿ, ಇಂಗ್ಲೆಂಡ್‌ ಗೆಲುವಿಗೆ ಭಾರತವು 399 ರನ್‌ಗಳ ಬೃಹತ್‌ ಗುರಿ ನೀಡಿತು. ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬೆನ್‌ ಸ್ಟೋಕ್ಸ್‌ ಬಳಗವು 292 ರನ್‌ಗಳಿಗೆ ಆಲೌಟ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಈ ಗೆಲುವಿನೊಂದಿಗೆ ಭಾರತವು 5 ಪಂದ್ಯಗಳ ಟೆಸ್ಟ್‌ ಸರಣಿಯು ಸದ್ಯ 1-1 ಅಂತರದಿಂದ ಸಮಬಲಗೊಂಡಿದೆ.

ಇದನ್ನೂ ಓದಿ | ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ 4ನೇ ದಿನದಾಟಕ್ಕೆ ಶುಭ್ಮನ್ ಗಿಲ್ ಅಲಭ್ಯ; ಭಾರತಕ್ಕೆ ಸತತ ಗಾಯದ ಹೊಡೆತ

ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ಅಮೋಘ ಶತಕದ ನೆರವಿಂದ ಭಾರತವು ಆಂಗ್ಲರಿಗೆ 399 ರನ್‌ಗಳ ಬೃಹತ್ ಗುರಿ ನೀಡಿತು. ಮೂರನೇ ದಿನದಾಟದ ಅಂತ್ಯಕ್ಕೆ ಆರಂಭಿಕ ಜೋಡಿಯಾದ ಜಾಕ್ ಕ್ರಾಲೆ ಮತ್ತು ಬೆನ್ ಡಕೆಟ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ್ದರು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ 332 ರನ್‌ ಗುರಿ ಪಡೆಯಿತು. ಭಾರತದ ಸಂಘಟಿದ ಪ್ರದರ್ಶನಕ್ಕೆ ಮಣಿದ ಆಂಗ್ಲರು ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಪರದಾಡಿತು.

ಮೊದಲ ಸೆಷನ್‌ನಲ್ಲೇ 5 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್

ಮೂರನೇ ದಿನದಾಟದಲ್ಲೇ ಬೆನ್‌ ಡಕೆಟ್‌ 28 ರನ್‌ ಗಳಿಸಿ ಔಟಾಗಿದ್ದರು. ನಾಲ್ಕನೇ ದಿನದ ಮೊದಲ ಅವಧಿಯಲ್ಲಿ, 23 ರನ್‌ ಗಳಿಸಿದ್ದ ರೆಹಾನ್‌ ಅಹ್ಮದ್‌ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅಕ್ಷರ್‌ ಪಟೇಲ್‌ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಓಲಿ ಪೋಪ್‌ ಆಟ 23 ರನ್‌ಗೆ ಅಂತ್ಯವಾಯ್ತು. ಅಶ್ವಿನ್‌ ಎಸೆತದಲ್ಲಿ ಸ್ಲಿಪ್‌ನಲ್ಲಿ ರೋಹಿತ್‌ ಕ್ಯಾಚ್‌ ಹಿಡಿದರು. ವೇಗದ ಆಟಕ್ಕೆ ಮುಂದಾಗಿದ್ದ ಜೋ ರೂಟ್‌ ದೊಡ್ಡ ಹೊಡೆತಕ್ಕೆ ಕೈ ಹಾಕಿ 16 ರನ್‌ ಗಳಿಸಿದ್ದಾಗ ಅಕ್ಷರ್ ಪಟೇಲ್‌ಗೆ ಕ್ಯಾಚ್‌ ನೀಡಿದರು. ಇಂಗ್ಲೆಂಡ್‌ ಬಳಗದ ದೊಡ್ಡ ವಿಕೆಟ್‌ ಬುಮ್ರಾ ಕೈಸೇರಿತು.

ಇದನ್ನೂ ಓದಿ | ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್​​​​; ಇಂಗ್ಲೆಂಡ್​ ತಂಡಕ್ಕೆ 399 ರನ್​ಗಳ ಬೃಹತ್ ಗುರಿ

ಆರಂಭಿಕನಾಗಿ ಬಂದು 73 ರನ್‌ ಗಳಿಸಿ ಅಪಾಯಕಾರಿಯಾಗಿ ಆಡುತ್ತಿದ್ದ ಝಾಕ್‌ ಕ್ರಾಲಿಗೆ ಕುಲ್ದೀಪ್‌ ಯಾದವ್‌ ಸ್ಪಿನ್‌ ಕಂಟಕವಾಯ್ತು. ಅವರ ಬೆನ್ನಲ್ಲೇ ಜಾನಿ ಬೇರ್‌ಸ್ಟೋ ಕೂಡ್‌ 26 ರನ್‌ ಗಳಿಸಿ ಬುಮ್ರಾ ಎಸೆತದಲ್ಲಿ ಲೆಗ್‌ ಬೈ ವಿಕೆಟ್‌ ಆಗಿ ಔಟಾದರು.‌

ಸ್ಟೋಕ್ಸ್‌ ರನೌಟ್‌ ಮಾಡಿದ ಶ್ರೇಯಸ್‌ ಅಯ್ಯರ್

ತಂಡವನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಆಂಗ್ಲ ನಾಯಕ ಬೆನ್‌ ಸ್ಟೋಕ್ಸ್‌ 11 ರನ್‌ ಗಳಿಸಿದ್ದಾಗ ರನೌಟ್‌ ಆದರು. ಶ್ರೇಯಸ್‌ ಅಯ್ಯರ್‌ ಅಸಾಧ್ಯವೆಂಬಂತಿದ್ದ ರನೌಟ್‌ ಮಾಡಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ವೇಳೆ ಒಂದಾದ ಬೆನ್‌ ಫೋಕ್ಸ್‌ ಮತ್ತು ಟಾಮ್‌ ಹಾರ್ಟ್ಲೆ ಅರ್ಧಶತಕದ ಜೊತೆಯಾಟವಾಡಿದರು. ಇಬ್ಬರೂ ತಲಾ 36 ರನ್‌ ಗಳಿಸಿ ಔಟಾದರು. ಬುಮ್ರಾ ಎಸೆತದಲ್ಲಿ ಟಾಮ್‌ ಹಾರ್ಟ್ಲೆ ಔಟಾಗುವುದರೊಂದಿಗೆ ಇಂಗ್ಲೆಂಡ್‌ ಇನ್ನಿಂಗ್ಸ್‌ ಅಂತ್ಯವಾಯ್ತು.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ; ತಪ್ಪಾದ ಹೊಡೆತದಿಂದ ಔಟಾಗಿದ್ದನ್ನು ಒಪ್ಪಿದ ಪ್ರಿನ್ಸ್

ಭಾರತದ ಪರ ಬುಮ್ರಾ ಮತ್ತು ಅಶ್ವಿನ್‌ ತಲಾ ಮೂರು ವಿಕೆಟ್‌ ಕಬಳಿಸಿದರು. ಮುಕೇಶ್‌ ಕುಮಾರ್‌, ಕುಲ್ದೀಪ್‌ ಯಾದವ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದರು.

(This copy first appeared in Hindustan Times Kannada website. To read more like this please logon to kannada.hindustantime.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ