logo
ಕನ್ನಡ ಸುದ್ದಿ  /  ಕ್ರಿಕೆಟ್  /  Kl Rahul: ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್; ಕೆಎಲ್ ರಾಹುಲ್​ಗೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?

KL Rahul: ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್; ಕೆಎಲ್ ರಾಹುಲ್​ಗೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?

Prasanna Kumar P N HT Kannada

Jul 21, 2024 01:57 PM IST

google News

KL Rahul: ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್; ಕೆಎಲ್ ರಾಹುಲ್​ಗೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?

    • KL Rahul: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಫ್ರಾಂಚೈಸಿ ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರೆ ಎಂದು ವರದಿಯಾಗಿದೆ.
KL Rahul: ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್; ಕೆಎಲ್ ರಾಹುಲ್​ಗೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?
KL Rahul: ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್; ಕೆಎಲ್ ರಾಹುಲ್​ಗೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?

ಇಂಡಿಯನ್ ಪ್ರೀಮಿಯರ್ ಲೀಗ್-2025 ಆರಂಭಕ್ಕೂ ಮುನ್ನ ನಾಯಕ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರೆ ಎಂದು ವರದಿಯಾಗಿದೆ. ಇದೇ ವರ್ಷದ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ನಡೆಯಲಿರುವ ಐಪಿಎಲ್​ ಹರಾಜಿಗೆ ಟ್ರೇಡ್ ಮೂಲಕ ತವರಿನ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

2022 ರಿಂದ 3 ವರ್ಷಗಳ ಕಾಲ ಲಕ್ನೋ ಪರ ಸೇವೆ ಸಲ್ಲಿಸಿದ ರಾಹುಲ್ ಒಪ್ಪಂದ ಮುಕ್ತಾಯಗೊಂಡಿದ್ದು, ಕನ್ನಡಿಗನನ್ನು ಉಳಿಸಿಕೊಳ್ಳುವ ಆಸಕ್ತಿಯನ್ನು ಫ್ರಾಂಚೈಸಿ ತೋರುತ್ತಿಲ್ಲ. ಹೀಗಾಗಿ 2025 ಐಪಿಎಲ್​​ಗೆ ಬೇರೊಂದು ತಂಡ ಸೇರಲಿದ್ದಾರೆ ಎನ್ನಲಾಗ್ತಿದೆ. ಮುಂದಿನ ಆವೃತ್ತಿಗೆ ಎಷ್ಟು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕೆಂಬ ನಿಯಮವನ್ನು ಐಪಿಎಲ್ ಆಡಳಿತ ಮಂಡಳಿ ಇನ್ನೂ ಅಂತಿಮಗೊಳಿಸಿಲ್ಲ.

ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗಿನ ರಾಹುಲ್ ಸಂಬಂಧ ಹದಗೆಟ್ಟಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಏಕೆಂದರೆ ಐಪಿಎಲ್-2024ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಎದುರು ಲಕ್ನೋ ಸೋತ ನಂತರ ರಾಹುಲ್ ವಿರುದ್ಧ ಗೋಯೆಂಕಾ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವೇ ದಿನಗಳ ನಂತರ ಗೋಯೆಂಕಾ ದೆಹಲಿಯ ತಮ್ಮ ಮನೆಯಲ್ಲಿ ರಾಹುಲ್​ಗೆ ವಿಶೇಷ ಔತಣಕೂಟ ಆಯೋಜಿಸಿದ್ದರು. ಅಂದು ಗೋಯೆಂಕಾ ಮತ್ತು ರಾಹುಲ್ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡಿದ್ದರು. ಆದರೂ ರಾಹುಲ್​ ಲಕ್ನೋ ಫ್ರಾಂಚೈಸಿಯೊಂದಿಗೆ ಮುಂದುವರೆಯುವ ಮನಸ್ಸು ಮಾಡುತ್ತಿಲ್ಲ ಎಂದು ವರದಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ರಾಹುಲ್ ಮುಂದಿನ ಋತುವಿನಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಬಹುದು ಎಂದು ಹೇಳಲಾಗುತ್ತಿದೆ. ಆರ್​​ಸಿಬಿಯೊಂದಿಗೆ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಾಹುಲ್, ಇದೀಗ ಮತ್ತೊಮ್ಮೆ ಫ್ರಾಂಚೈಸಿ ಸೇರುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಆರ್​​ಸಿಬಿ ನಂತರ ಎಸ್​ಆರ್​​ಹೆಚ್​, ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ತಂಡದ ಪರ ಕಣಕ್ಕಿಳಿದಿದ್ದರು. 2013 ಮತ್ತು 2016ರಲ್ಲಿ ಆರ್​​ಸಿಬಿ ತಂಡದ ಭಾಗವಾಗಿದ್ದರು.

ಫಾಫ್ ಡು ಪ್ಲೆಸಿಸ್​ಗೆ ಗೇಟ್​ಪಾಸ್?

ಆರ್​​ಸಿಬಿ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ಭಾರತೀಯ ಆಟಗಾರನ ಹುಡುಕಾಟ ನಡೆಸುತ್ತಿದೆ. 17 ಆವೃತ್ತಿಗಳಿಂದ ಟ್ರೋಫಿ ಗೆಲ್ಲಲು ವಿಫಲವಾಗುತ್ತಿರುವ ರೆಡ್​ ಆರ್ಮಿ, ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಡಲು ಚಿಂತಿಸುತ್ತಿದೆ. 2022ರಲ್ಲಿ ವಿರಾಟ್ ಕೊಹ್ಲಿ ಅವರಿಂದ ತಂಡದ ಜವಾಬ್ದಾರಿ ಪಡೆದ ಫಾಫ್​ ನಾಯಕತ್ವದಲ್ಲೂ ಆರ್​​ಸಿಬಿ ಟ್ರೋಫಿ ಗೆಲ್ಲಲು ವಿಫಲವಾಯಿತು.

ಪ್ರಸ್ತುತ ಫಾಫ್​ಗೆ ಈಗ 40 ವರ್ಷ ವಯಸ್ಸಾಗಿರುವ ಕಾರಣ ಆರ್​​ಸಿಬಿ, ದೀರ್ಘಕಾಲೀನ ಯೋಜನೆಯತ್ತ ನೋಡುತ್ತಿದೆ. ಹಾಗಾಗಿ, ರಾಹುಲ್ ಯೋಗ್ಯ ಆಯ್ಕೆ ಎಂದು ಆರ್​​ಸಿಬಿ ಚಿಂತಿಸಿದೆ. ಟ್ರೇಡ್ ಮೂಲಕವೇ ರಾಹುಲ್​ಗೆ ಮಣೆ ಹಾಕಲು ಯೋಜನೆ ರೂಪಿಸುತ್ತಿದೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ ಯಶಸ್ವಿಯಾಗಿ ಮುಕ್ತಾಯಗೊಂಡ 2025ರ ಟೂರ್ನಿಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.

ರೋಹಿತ್​ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್​ ತಂಡ ತೊರೆಯುತ್ತಾರೆ ಎಂದೂ ಸುದ್ದಿಯಾಗಿದೆ. ಅಲ್ಲದೆ, ರಿಷಭ್ ಪಂತ್​ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ಬೇರ್ಪಟ್ಟು ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಎಂಎಸ್ ಧೋನಿ ಸ್ಥಾನ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಪಿಎಲ್​ನಲ್ಲಿ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದರ ನಿಯಮ ಬಿಡುಗಡೆ ಮಾಡಿದ ನಂತರ ಈ ವದಂತಿಗಳಿಗೂ ಸ್ಪಷ್ಟನೆ ಸಿಗಲಿದೆ. ಕೆಲವು ವರದಿಗಳು ಒಂದು ತಂಡ ಒಬ್ಬರನ್ನಷ್ಟೇ ಉಳಿಸಿಕೊಳ್ಳುವ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ