logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಣಕ್ಯನ ಬದಲಿಗೆ ಧೋನಿಯ 3d ಚಿತ್ರ ರಚಿಸಿದ ಎಐ; ನಗೆಪಾಟಲಿಗೀಡಾದ ಮಗಧ ಡಿಎಸ್ ವಿಶ್ವವಿದ್ಯಾಲಯ ಟ್ರೋಲ್

ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ; ನಗೆಪಾಟಲಿಗೀಡಾದ ಮಗಧ ಡಿಎಸ್ ವಿಶ್ವವಿದ್ಯಾಲಯ ಟ್ರೋಲ್

Prasanna Kumar P N HT Kannada

Mar 11, 2024 07:12 PM IST

ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ

    • Mahendra Singh Dhoni : ಮಗಧ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಂತ್ರಜ್ಞಾನದ ಮೂಲಕ ರಚಿಸಿದ ಚಾಣಾಕ್ಯನ ಚಿತ್ರವು ಕ್ರಿಕೆಟಿಗ ಎಂಎಸ್ ಧೋನಿಯನ್ನು ಹೋಲುತ್ತಿದೆ. ಈ ಚಿತ್ರವು ಭಾರಿ ವೈರಲ್ ಆಗುತ್ತಿದೆ.
ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ
ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ

ಆಧುನಿಕ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ತಂತ್ರಜ್ಞಾನದಿಂದ ಏನು ಬೇಕಾದರೂ ಮಾಡಬಹುದಾಗಿದೆ. ಆದರೆ ಅಂತಹ ಸಾಹಸಕ್ಕೆ ಕೈ ಹಾಕಿದ ಮಗಧ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಹಾ ಎಡವಟ್ಟೊಂದನ್ನು ಮಾಡಿದ್ದಾರೆ. ವಿಜ್ಞಾನಿಗಳು ಸದ್ಯ ನಗೆಪಾಟಲಿಗೆ ಒಳಗಾಗಿದ್ದು, ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಎಐನಿಂದ (Artificial intelligence) 3ಡಿ ಎಫೆಕ್ಟ್ ಮೂಲಕ ತತ್ವಜ್ಞಾನಿ ಚಾಣಕ್ಯನ ಚಿತ್ರ ಅಭಿವೃದ್ಧಿಪಡಿಸಿ ಟ್ರೋಲ್ ಆಗುತ್ತಿದ್ದಾರೆ. ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಚಿತ್ರವು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು (MS Dhoni) ಹೋಲುವಂತಿದೆ. ಧೋನಿ ಫ್ಯಾನ್ಸ್ ಈ ಚಿತ್ರ ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದಾರೆ.

2011ರ ಏಕದಿನ ವಿಶ್ವಕಪ್ ಜಯಿಸಿದ ನಂತರ ಧೋನಿ ಅವರು ತಲೆ ಕೂದಲು ತೆಗೆಸಿದ್ದರು. ಆಗ ಟ್ರೋಫಿ ಜೊತೆಗೆ ಫೋಟೋ ಕೂಡ ತೆಗಿಸಿಕೊಂಡಿದ್ದರು. ಧೋನಿ ಟ್ರೋಫಿಯೊಂದಿಗಿರುವ ಚಿತ್ರ ಮತ್ತು ಮಗಧ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ 3D ಚಿತ್ರವು ಒಂದೇ ರೀತಿ ಹೋಲುತ್ತದೆ.

ಚಾಣಕ್ಯನನ್ನು ಅಭಿವೃದ್ಧಿಪಡಿಸುವ ಬದಲಿಗೆ ಕ್ರಿಕೆಟ್ ಚಾಣಕ್ಯನನ್ನು ಅಭಿವೃದ್ಧಿಪಡಿಸಿದ್ದೀರಿ ಎಂದು ನೆಟ್ಟಿಗರು ಆ ಚಿತ್ರವನ್ನು ವೈರಲ್ ಮಾಡುತ್ತಿದ್ದಾರೆ. ಈಗ ವಿಜ್ಞಾನಿಗಳು ಸಹ ಗೊಂದಲಕ್ಕೆ ಒಳಗಾಗಿದ್ದಾರೆ. ಧೋನಿ ಫ್ಯಾನ್ಸ್​​ ತರಹೇವಾರಿ ಕಾಮೆಂಟ್​​ಗಳ ಮೂಲಕ ಸೈಂಟಿಸ್ಟ್​​ಗಳನ್ನು ಫುಲ್ ರೋಸ್ಟ್ ಮಾಡುತ್ತಿದ್ದಾರೆ.

ಧೋನಿಯನ್ನೂ ಚಾಣಕ್ಯ ಎನ್ನುತ್ತಾರೆ!

ಕ್ರಿಕೆಟ್​​ನಲ್ಲಿ ಧೋನಿಯನ್ನೂ ಚಾಣಾಕ್ಯ ಎಂದೇ ಕರೆಯಲಾಗುತ್ತದೆ. ಚಾಣಕ್ಯನಂತೆ ಅತ್ಯಂತ ತಾಳ್ಮೆಯಿಂದ ಯಾವುದೇ ಸಂದರ್ಭವನ್ನು ನಿರ್ವಹಿಸುವ ಧೋನಿ, ಎದುರಾಳಿ ತಂಡಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಾರೆ. ಇದೇ ನಡೆಯಿಂದ ಅದೆಷ್ಟೋ ಪಂದ್ಯಗಳನ್ನು ಗೆದ್ದು ಕೊಟ್ಟ ಕೀರ್ತಿ ಧೋನಿಗಿದೆ.

ಧೋನಿ ಭರ್ಜರಿ ಸಿದ್ಧತೆ

2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ಗೆ ಟ್ರೋಫಿ ಗೆದ್ದುಕೊಟ್ಟಿದ್ದ ಧೋನಿ, ಈ ಬಾರಿಯೂ ಮತ್ತೊಂದು ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಶುರುವಾಗಲಿದ್ದು, ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಧೋನಿ ನೆಟ್ಸ್​ನಲ್ಲಿ ಭರ್ಜರಿ​ ಅಭ್ಯಾಸ ಆರಂಭಿಸಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ vs ಆರ್​ಸಿಬಿ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಎಂಎಸ್ ಧೋನಿ, ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮಥೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ