ಏಷ್ಯಾಕಪ್ ಇತಿಹಾಸದಲ್ಲಿ ಅಧಿಕ ಟ್ರೋಫಿ ಗೆದ್ದ ತಂಡ ಯಾವುದು; ಭಾರತ-ಲಂಕಾ ತಂಡಗಳದ್ದೇ ಪಾರುಪತ್ಯ
Aug 30, 2023 09:00 AM IST
ಏಷ್ಯಾಕಪ್ ವಿಜೇತರು.
- Most Asia cup Tournament Winners: ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿ ತಂಡ ಯಾವುದು? ಯಾವ ವರ್ಷ ಎಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ.
ಏಷ್ಯಾಕಪ್ ವಿಜೇತರು.
ಇಂದಿನಿಂದ ಏಷ್ಯಾಕಪ್ ಟೂರ್ನಿ (Asia Cup 2023) ಆರಂಭ. ಪಾಕಿಸ್ತಾನ ಮತ್ತು ನೇಪಾಳ (Pakistan vs Nepal) ತಂಡಗಳು ಕಾದಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಲಿವೆ. ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೆಲುವಿಗಾಗಿ ಸೆಣಸಾಟ ನಡೆಸಲಿವೆ. ಆದರೆ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿ ಜಯಿಸಿದ ತಂಡ ಯಾವುದು? ಯಾವ ವರ್ಷ ಎಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ 1984ರಲ್ಲಿ ಏಷ್ಯಾಕಪ್‌ನ ಮೊದಲ ಆವೃತ್ತಿಯು ಪ್ರಾರಂಭವಾಯಿತು. ಈ ಟೂರ್ನಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಿತು.
- 1984ರಲ್ಲಿ ನಡೆದ ಚೊಚ್ಚಲ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು ಹಿಂದಕ್ಕೆ ತಳ್ಳಿ ಭಾರತ ಚಾಂಪಿಯನ್ ಆಗಿತ್ತು. ಅದಕ್ಕೂ ಹಿಂದಿನ ವರ್ಷ ಭಾರತ ಏಕದಿನ ವಿಶ್ವಕಪ್ ಗೆದ್ದು ಮೇಲುಗೈ ಸಾಧಿಸಿತ್ತು.
- 1986ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕಣಕ್ಕಿಳಿದಿರಲಿಲ್ಲ. ಈ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸಿತ್ತು. ಈ ದೇಶದೊಂದಿಗೆ ಉತ್ತಮ ಕ್ರಿಕೆಟ್ ಸಂಬಂಧದ ಕೊರತೆಯಿಂದ ಭಾರತ, ಟೂರ್ನಿ ಬಹಿಷ್ಕರಿಸಿತ್ತು. ಆ ವರ್ಷ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಚಾಂಪಿಯನ್ ಆಗಿತ್ತು.
- 1988ರಲ್ಲಿ ಏಷ್ಯಾಕಪ್ ಟೂರ್ನಿಗೆ ಮರಳಿದ ಭಾರತ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು.
- 1988ರ ನಂತರ 1990, 1995ರಲ್ಲಿ ನಡೆದ ಟೂರ್ನಿಯಲ್ಲೂ ಭಾರತವೇ ಚಾಂಪಿಯನ್ ಪಟ್ಟಕೇರಿತು. ಆ ಮೂಲಕ ಹ್ಯಾಟ್ರಿಕ್ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- 1997ರಲ್ಲಿ ಶ್ರೀಲಂಕಾ, 2ನೇ ಬಾರಿಗೆ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿತು. 1996ರಲ್ಲಿ ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ, 1997ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
- ಒಂದು ಬಾರಿಯೂ ಟ್ರೋಫಿ ಗೆಲ್ಲದ ಪಾಕಿಸ್ತಾನ, 2000ರಲ್ಲಿ ಕೊನೆಗೂ ಟ್ರೋಫಿಗೆ ಮುತ್ತಿಕ್ಕಿತು. ಆ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದಿತ್ತು. ಅದೇ ವರ್ಷ, ಭಾರತವು ಮೊದಲ ಬಾರಿಗೆ ಫೈನಲ್ ತಲುಪಲು ಎಡವಿತು. ಫೈನಲ್‌ನಲ್ಲಿ ಪಾಕಿಸ್ತಾನವು ಶ್ರೀಲಂಕಾವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ನಂತರ 2004 ಮತ್ತು 2008ರಲ್ಲಿ ಶ್ರೀಲಂಕಾ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು. ನಂತರ 2010ರಲ್ಲಿ ಭಾರತ ಚಾಂಪಿಯನ್ ಆದರೆ, 2012ರಲ್ಲಿ ಪಾಕಿಸ್ತಾನ 2ನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
- ಬಳಿಕ 2014ರಲ್ಲಿ ಶ್ರೀಲಂಕಾ ಚಾಂಪಿಯನ್, 2016 ಮತ್ತು 2018ರಲ್ಲಿ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತು. 2016ರಲ್ಲಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಿತು. ಆಗ ಭಾರತ ಜಯ ಗಳಿಸಿತ್ತು. 2022ರಲ್ಲಿ ನಡೆದ ಟಿ20 ಮಾದರಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಯಿತು.
- ಈವರೆಗೆ ಭಾರತ 7 ಬಾರಿ ಹಾಗೂ ಶ್ರೀಲಂಕಾ 6 ಬಾರಿ ಏಷ್ಯಾಕಪ್ ಗೆದ್ದುಕೊಂಡಿವೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಏಷ್ಯಾಕಪ್‌ನಲ್ಲಿ ಟಿ20 ಹಾಗೂ 50 ಓವರ್‌ಗಳ ಏಕದಿನ ಪಂದ್ಯಗಳು, ಹೀಗೆ ಎರಡೂ ಸ್ವರೂಪದಲ್ಲಿ ಪಂದ್ಯಗಳು ನಡೆಯುತ್ತವೆ. 2023ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ.
ಕ್ರಿಕೆಟ್ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರಿಕೆಟ್