logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಮಿಂಚಿದ ಕೆಳಕ್ರಮಾಂಕದ ಆಟಗಾರರು; ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ

ಮತ್ತೆ ಮಿಂಚಿದ ಕೆಳಕ್ರಮಾಂಕದ ಆಟಗಾರರು; ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ

Jayaraj HT Kannada

Mar 04, 2024 06:25 PM IST

ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ

    • ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಇನ್ನಿಂಗ್ಸ್ ಹಾಗೂ 70 ರನ್‌ಗಳಿಂದ ಸೋಲಿಸಿ 48ನೇ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದೆ. ಕೆಳ ಕ್ರಮಾಂಕದ ಆಟಗಾರರಾದ ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್ ಆಟವು ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ
ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ

ಮುಂಬೈ ರಣಜಿ ತಂಡವು ಮತ್ತೊಂದು ದಾಖಲೆ ನಿರ್ಮಿಸಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಪ್ರಬಲ ಪ್ರದರ್ಶನ ನೀಡಿದ ತಂಡವು, ದಾಖಲೆಯ 48ನೇ ಬಾರಿಗೆ ರಣಜಿ ಟ್ರೋಫಿ (Ranji Trophy 2023-24) ಫೈನಲ್‌ ಪ್ರವೇಶಿಸಿದೆ. ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು, ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು (Mumbai vs Tamil Nadu) ತಂಡವನ್ನು ಭರ್ಜರಿಯಾಗಿ ಸೋಲಿಸಿದೆ. ಇನ್ನಿಂಗ್ಸ್ ಹಾಗೂ 70 ರನ್‌ಗಳಿಂದ ಸೋಲಿಸಿದ ತಂಡವು ಫೈನಲ್‌ನಲ್ಲಿ ವಿದರ್ಭ ಅಥವಾ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ; ರಾಜೀವ್‌ ಹೆಗಡೆ ಬರಹ

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

ಶಾರ್ದೂಲ್ ಠಾಕೂರ್ ಆಕರ್ಷಕ ಶತಕ ಹಾಗೂ ಕರ್ನಾಟಕ ಮೂಲದ ಆಟಗಾರ ತನುಷ್ ಕೋಟ್ಯಾನ್ ಜವಾಬ್ದಾರಿಯುತ ಆಟದ ನರವಿಂದ ಮುಂಬೈ ತಂಡವು ತಮಿಳುನಾಡು ಮೇಲೆ ಒತ್ತಡ ಹೇರಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಆಲೌಟ್ ಆಗಿದ್ದ ತಮಿಳುನಾಡು, ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಕೇವಲ 162 ರನ್‌ಳಿಗೆ ಆಲೌಟ್ ಆಯ್ತು. ಮೊದಲ ಇನ್ನಿಂಗ್ಸ್‌ ಬಳಿಕ 232 ರನ್‌ಗಳ ಮುನ್ನಡೆ ಸಾಧಿಸಿದ ಮುಂಬೈ, ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ಮತ್ತೆ ತಮಿಳರನ್ನು ಕಟ್ಟಿಹಾಕಿತು.

ತಮಿಳುನಾಡು ಪರ ಬಾಬಾ ಇಂದ್ರಜಿತ್ 70 ರನ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಆದರೆ ಅವರಿಗೆ ಸೂಕ್ತ ಜೊತೆಯಾಟ ಸಿಗಲಿಲ್ಲ. ಬಿರುಸಿನ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಪರ ಶಮ್ಸ್ ಮುಲಾನಿ 4 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್ ಹಾಗೂ ಮೋಹಿತ್ ಅವಸ್ಥಿ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ | AFG vs IRE: ಚೊಚ್ಚಲ ಟೆಸ್ಟ್ ಜಯ ದಾಖಲಿಸಿದ ಐರ್ಲೆಂಡ್; ಭಾರತಕ್ಕಿಂತ ವೇಗವಾಗಿ ಮೊದಲ ಗೆಲುವಿನ ಸಾಧನೆ

ಮುಂಬೈ ಪರ ತನುಷ್ ಕೋಟ್ಯಾನ್ ಅಜೇಯ 89 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದ ಕೋಟ್ಯಾನ್, ಮತ್ತೆ ಅಜೇಯ ಆಟವಾಡಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಕೆಳಕ್ರಮಾಂಕದಲ್ಲಿ ತಂಡ ಗಳಿಸಿದ ರನ್‌ಗಳೇ, ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಎರಡನೇ ದಿನದಾಟದಲ್ಲಿ ಚೊಚ್ಚಲ ಪ್ರಥಮ ದರ್ಜೆ ಶತಕ ಸಿಡಿಸಿದ ಶಾರ್ದೂಲ್ ಆಟವು, ಮುಂಬೈ ಗೆಲುವಿಗೆ ಅಡಿಪಾಯ ಹಾಕಿಕೊಟ್ಟಿತು. 104 ಎಸೆತಗಳಲ್ಲಿ 109 ರನ್‌ ಗಳಿಸಿ ಶಾರ್ದುಲ್‌ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 13 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಇವರ ಆಟವು ಮುಂಬೈ ತಂಡವು ಬೃಹತ್‌ ಮೊತ್ತ ಪೇರಿಸಲು ನೆರವಾಯ್ತು.

ಸಂಕ್ಷಿಪ್ತ ಸ್ಕೋರ್

ತಮಿಳುನಾಡು 146 ಮತ್ತು 162 (ಬಾಬಾ ಇಂದ್ರಜಿತ್ 70; ಶಾರ್ದೂಲ್ ಠಾಕೂರ್ 16ಕ್ಕೆ 2, ಶಮ್ಸ್ ಮುಲಾನಿ 53ಕ್ಕೆ 4, ತನುಷ್ ಕೋಟ್ಯಾನ್ 18ಕ್ಕೆ 2). ಮುಂಬೈ 106.5 ಓವರ್‌ಗಳಲ್ಲಿ 378 ರನ್ (ಮುಶೀರ್ ಖಾನ್ 55, ಶಾರ್ದೂಲ್ ಠಾಕೂರ್ 109, ತನುಷ್ ಕೋಟ್ಯಾನ್ 89*; ಆರ್ ಸಾಯಿ ಕಿಶೋರ್ 6/99).‌

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL, 2024

Live

SRH

44/4

5.4 Overs

VS

KKR

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ