logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಮೆಗಾ ಹರಾಜಿನಲ್ಲಿ ಈ ಸ್ಟಾರ್‌ ಆಟಗಾರರ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು; ವಿಕೆಟ್‌ ಕೀಪರ್-ಬೌಲರ್‌ಗಳಿಗೆ ಆದ್ಯತೆ

ಐಪಿಎಲ್‌ ಮೆಗಾ ಹರಾಜಿನಲ್ಲಿ ಈ ಸ್ಟಾರ್‌ ಆಟಗಾರರ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು; ವಿಕೆಟ್‌ ಕೀಪರ್-ಬೌಲರ್‌ಗಳಿಗೆ ಆದ್ಯತೆ

Jayaraj HT Kannada

Nov 19, 2024 07:10 AM IST

google News

ಐಪಿಎಲ್‌ ಮೆಗಾ ಹರಾಜಿನಲ್ಲಿ ಈ ಸ್ಟಾರ್‌ ಆಟಗಾರರ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು

    • ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡವು, ಈ ಬಾರಿ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ‌ ಬಲಿಷ್ಠ ಪ್ರಮುಖ ಆಟಗಾರರನ್ನು ಖರೀದಿಸುವ ಉದ್ದೇಶ ಹೊಂದಿದೆ. ಎಂಐ ತಂಡ ಖರೀದಿ ಮಾಡಬಲ್ಲ ಆಟಗಾರರ ಬಗ್ಗೆ ನೋಡೋಣ.
ಐಪಿಎಲ್‌ ಮೆಗಾ ಹರಾಜಿನಲ್ಲಿ ಈ ಸ್ಟಾರ್‌ ಆಟಗಾರರ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು
ಐಪಿಎಲ್‌ ಮೆಗಾ ಹರಾಜಿನಲ್ಲಿ ಈ ಸ್ಟಾರ್‌ ಆಟಗಾರರ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು

ಬಹುನಿರೀಕ್ಷಿತ ಐಪಿಎಲ್ 2025ರ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಯು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಹತ್ತು ಫ್ರಾಂಚೈಸಿಗಳು ಈಗಾಗಲೇ ಕೆಲವು ಆಟಗಾರರನ್ನು ಉಳಿಸಿಕೊಂಡಿವೆ. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ. ಈಗ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹಾಗೂ, ಆಕ್ಷನ್‌ನಲ್ಲಿ ತಂಡವು ಖರೀದಿಸಲು ಉದ್ದೇಶಿಸಿರುವ ಆಟಗಾರರ ಕುರಿತು ತಿಳಿಯೋಣ.

ಐದು ಬಾರಿಯ ಐಪಿಎಲ್ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡವು, 2021ರಿಂದ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿ ಕಪ್‌ ಮೇಲೆ ಗುರಿ ಇಟ್ಟಿರುವ ತಂಡವು, ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಉದ್ದೇಶ ಹೊಂದಿದೆ. ತಂಡವು ರಿಟೆನ್ಷನ್‌ ಸಮಯದಲ್ಲಿ ಐವರು ಆಟಗಾರರನ್ನು ಖರೀದಿಸಿದೆ.

ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ ಆಟಗಾರರ ಪಟ್ಟಿ

  • ಜಸ್ಪ್ರೀತ್ ಬುಮ್ರಾ -18 ಕೋಟಿ
  • ರೋಹಿತ್ ಶರ್ಮಾ -16.30 ಕೋಟಿ
  • ಹಾರ್ದಿಕ್ ಪಾಂಡ್ಯ -16.35 ಕೋಟಿ
  • ತಿಲಕ್ ವರ್ಮಾ -8 ಕೋಟಿ
  • ಸೂರ್ಯಕುಮಾರ್ ಯಾದವ್ -16.35 ಕೋಟಿ

ಇದನ್ನೂ ಓದಿ | ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಪ್ರಕಟ; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ ಯಾರಿಗೆಷ್ಟಿದೆ?

  • ಫ್ರಾಂಚೈಸಿ ಬಳಿ ಉಳಿದಿರುವ ಪರ್ಸ್ ಮೊತ್ತ -45 ಕೋಟಿ ರೂಪಾಯಿ
  • ಹರಾಜಿನಲ್ಲಿ ತುಂಬಬೇಕಿರುವ ಸ್ಲಾಟ್‌ಗಳು- 20

ಐಪಿಎಲ್ ಮೆಗಾ ಹರಾಜಿನಲ್ಲಿ ತಂಡ ಖರೀದಿಸಬಲ್ಲ ಆಟಗಾರರು

ಮುಂಬೈ ತಂಡದಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಪ್ರಬಲ ಆಟಗಾರರಿದ್ದಾರೆ. ರೋಹಿತ್ ಶರ್ಮಾ, ಸೂರ್ಯಕುಮಾರ್, ತಿಲಕ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಬ್ಯಾಟಿಂಗ್ ಬಲಿಷ್ಠವಾಗಿದೆ. ತಂಡಕ್ಕೆ ರೋಹಿತ್‌ ಶರ್ಮಾಗೆ ಸಾಥ್‌ ನೀಡಬಲ್ಲ ಒಬ್ಬ ಆರಂಭಿಕ ಆಟಗಾರ ಹಾಗೂ ವಿಕೆಟ್‌ ಕೀಪರ್‌ ಬೇಕಾಗಿದೆ. ಈ ಸ್ಥಾನ ತುಂಬಲು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರನ್ನು ತಂಡ ಖರೀದಿ ಮಾಡುವ ಸಾಧ್ಯತೆ ಇದೆ. ಇಶಾನ್ ಕಿಶನ್ ಅವರನ್ನು ಕೈಬಿಟ್ಟ ತಂಡವು, ಅವರಿಗಿಂತ ಕಡಿಮೆ ಬೆಲೆಗೆ ಮತ್ತೊಬ್ಬ ಆಟಗಾರನ ಖರೀದಿಗೆ ಮುಂದಾಗಿದೆ. ಜೋಸ್‌ ಬಟ್ಲರ್‌ ಕೂಟಾ ಎಂಐ ಆದ್ಯತೆಯಾಗಲಿದ್ದಾರೆ.

ಮಧ್ಯಮ ಕ್ರಮಾಂಕ

ತಂಡದ ಮಧ್ಯಮ ಕ್ರಮಾಂಕವನ್ನು ಇನ್ನಷ್ಟು ಬಲಿಷ್ಠಗೊಳಿಸಲು ತಂಡವು ವಿದೇಶಿ ಆಟಗಾರರ ಮೊರೆ ಹೋಗಬಹುದು. ಡೇವಿಡ್ ಮಿಲ್ಲರ್ (ಮೂಲ ಬೆಲೆ 2 ಕೋಟಿ), ಗ್ಲೆನ್ ಫಿಲಿಪ್ಸ್ (2 ಕೋಟಿ), ಮಾರ್ಕಸ್ ಸ್ಟೊಯ್ನನಿಸ್ ಹಾಗೂ ನೆಹಾಲ್ ವಧೇರಾ (ಮೂಲ ಬೆಲೆ 30 ಲಕ್ಷ) ಮೇಲೆ ನೀತಾ ಅಂಬಾನಿ ಕಣ್ಣಿಟ್ಟಿದ್ದಾರೆ. ಈ ಎಲ್ಲಾ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ತಂಡದ ಮೊತ್ತ ಹೆಚ್ಚಿಸಬಲ್ಲರು. ಹೀಗಾಗಿ ಪವರ್ ಹಿಟ್ಟರ್‌ಗಳನ್ನು ಗುರಿಯಾಗಿಸಿ ಖರೀದಿಗೆ ಮುಂದಾಗಬಹುದು.

ಆಲ್‌ರೌಂಡರ್‌ಗಳು

ತಂಡದ ಬಳಿ ಸದ್ಯ ಹಾರ್ದಿಕ್‌ ಪಾಂಡ್ಯ ಮಾತ್ರ ಆಲ್‌ರೌಂಡರ್ ಆಗಿದ್ದಾರೆ. ಇವರಿಗೆ ಬಲ ತುಂಬಬಲ್ಲ ಮತ್ತೊಬ್ಬ ಆಟಗಾರನ ಅಗತ್ಯ ತಂಡಕ್ಕಿದೆ. ಹೀಗಾಗಿ ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್ ಕರನ್ ಮೇಲೆ ಮುಂಬೈ ಕಣ್ಣಿಟ್ಟಿದೆ. ಕರನ್‌ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೂ ಬಲ ತುಂಬಬಲ್ಲರು. ಚೆಂಡನ್ನು ಮುಂಭಾಗದಲ್ಲಿ ಸ್ವಿಂಗ್ ಮಾಡಬಲ್ಲ ಆಟಗಾರ, ತಂಡಕ್ಕೆ ಆಲ್‌ರೌಂಡ್‌ ಬಲ ತುಂಬಬಲ್ಲರು. ಇದೇ ವೇಳೆ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ವಾಷಿಂಗ್ಟನ್‌ ಸುಂದರ್‌ ಖರೀದಿಗೆ ತಂಡ ಆಸಕ್ತಿ ತೋರಬಹುದು.

ಬೌಲರ್‌ಗಳು

ಟ್ರೆಂಟ್ ಬೌಲ್ಟ್ (ಮೂಲ ಬೆಲೆ 2 ಕೋಟಿ), ಕಗಿಸೊ ರಬಾಡ (2 ಕೋಟಿ), ಆಕಾಶ್ ಮಧ್ವಲ್ (30 ಲಕ್ಷ), ಸುಯಶ್ ಶರ್ಮಾ (30 ಲಕ್ಷ), ರಸಿಖ್ ದಾರ್ (30 ಲಕ್ಷ).

ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ತಂಡದ ಬಳಿ ಗುಣಮಟ್ಟದ ಹೊಸ ಬಾಲ್ ಬೌಲರ್ ಇಲ್ಲ. ಹೀಗಾಗಿ ತಂಡವು ಟ್ರೆಂಟ್ ಬೌಲ್ಟ್ ಅಥವಾ ಕಗಿಸೊ ರಬಾಡ ಅವರನ್ನು ಖರೀದಿಸುವ ಗುರಿ ಹೊಂದಿದೆ. ಇದೇ ವೇಳೆ ಆಕಾಶ್ ಮಧ್ವಲ್, ರಸಿಖ್ ದಾರ್ ಮತ್ತು ಕಾರ್ತಿಕ್ ತ್ಯಾಗಿ ಅವರಂತಹ ದೇಶೀಯ ಬೌಲರ್‌ಗಳ ಮೇಲೂ ತಂಡ ಕಣ್ಣಿಟ್ಟಿದೆ. ಇದೇ ವೇಳೆ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸುಯಾಶ್ ಶರ್ಮಾ ಖರೀದಿ ಮಾಡಬಹುದು.

ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್/ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್)‌, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಸ್ಯಾಮ್ ಕರನ್/ವಾಷಿಂಗ್ಟನ್‌ ಸುಂದರ್, ಜಸ್ಪ್ರೀತ್ ಬುಮ್ರಾ, ಕಗಿಸೊ ರಬಾಡ, ಆಕಾಶ್ ಮಧ್ವಲ್, ಸುಯಶ್ ಶರ್ಮಾ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ