logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಭರ್ಜರಿ ಗೆಲುವು; ಸೆಮಿಫೈನಲ್ ಟಿಕೆಟ್ ಪಡೆದ ಮೈಸೂರು ವಾರಿಯರ್ಸ್

ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಭರ್ಜರಿ ಗೆಲುವು; ಸೆಮಿಫೈನಲ್ ಟಿಕೆಟ್ ಪಡೆದ ಮೈಸೂರು ವಾರಿಯರ್ಸ್

Jayaraj HT Kannada

Aug 26, 2023 09:54 PM IST

google News

ಮೈಸೂರು ವಾರಿಯರ್ಸ್‌ ಜಯಭೇರಿ

    • Maharaja Trophy: ಚೇಸಿಂಗ್‌ನಲ್ಲಿ ಮೈಸೂರು ತಂಡಕ್ಕೆ ಆಸರೆಯಾದವರು ರವಿಕುಮಾರ್‌ ಸಮರ್ಥ್.‌ 50 ಎಸೆತಗಳಲ್ಲಿ 62 ರನ್‌ ಸಿಡಿಸಿದ ಅವರು ಅಜೇಯರಾಗಿ ಇನ್ನಿಂಗ್ಸ್‌ ಮುಗಿಸಿದರು.
ಮೈಸೂರು ವಾರಿಯರ್ಸ್‌ ಜಯಭೇರಿ
ಮೈಸೂರು ವಾರಿಯರ್ಸ್‌ ಜಯಭೇರಿ (Twitter)

ಮೈಸೂರು ವಾರಿಯರ್ಸ್ (Mysore Warriors) ತಂಡವು ಎರಡನೇ ತಂಡವಾಗಿ ಮಹಾರಾಜ ಟ್ರೋಫಿ (Maharaja Trophy KSCA T20 2023) ಸೆಮಿಫೈಲ್‌ಗೆ ಲಗ್ಗೆ ಇಟ್ಟಿದೆ. ಗುಲ್ಬರ್ಗ ಮಿಸ್ಟಿಕ್ಸ್‌ (Gulbarga Mystics) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದ ಕರುಣ್‌ ನಾಯರ್‌ ಪಡೆ, ಲೀಗ್‌ ಹಂತವನ್ನು ಯಶಸ್ವಿಯಾಗಿ ಮುಗಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ, 7 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್‌ 18 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸುವ ಮೂಲಕ ಗೆಲವಿನ ದಡ ಸೇರಿತು. ಈ ಗೆಲುವಿನೊಂದಿಗೆ ಒಟ್ಟು 12 ಅಂಕ ಗಳಿಸಿದ ತಂಡವು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಸೆಮಿ ಕದನಕ್ಕೆ ಲಗ್ಗೆ ಇಟ್ಟಿದೆ.

ಚೇಸಿಂಗ್‌ನಲ್ಲಿ ಮೈಸೂರು ತಂಡಕ್ಕೆ ಆಸರೆಯಾದವರು ರವಿಕುಮಾರ್‌ ಸಮರ್ಥ್.‌ 50 ಎಸೆತಗಳಲ್ಲಿ 62 ರನ್‌ ಸಿಡಿಸಿದ ಅವರು ಅಜೇಯರಾಗಿ ಇನ್ನಿಂಗ್ಸ್‌ ಮುಗಿಸಿದರು.

ಸದ್ಯ ಹುಬ್ಬಳ್ಳಿ ಮತ್ತು ಮೈಸೂರು ತಂಡಗಳು ನಾಕೌಟ್‌ ಹಂತ ಪ್ರವೇಶಿಸಿದ್ದು, ಇನ್ನೂ ಎರಡು ತಂಡಗಳು ಅರ್ಹತೆ ಪಡೆಯುವ ಅವಕಾಶ ಪಡೆಯಲಿದೆ. ಈ ಜಿದ್ದಿನಲ್ಲಿ ಮೂರು ತಂಡಗಳು ಉಳಿದಿವೆ. ಗುಲ್ಬರ್ಗ, ಮಂಗಳೂರು ಮತ್ತು ಶಿವಮೊಗ್ಗ ಲಯನ್ಸ್‌ ತಂಡಕ್ಕೆ ಗೆಲ್ಲುವ ಅವಕಾಶವಿದೆ. ಲೀಗ್‌ ಹಂತದ ಅಂತಿಮ ಪಂದ್ಯಗಳು ನಾಳೆ(ಭಾನುವಾರ) ನಡೆಯುತ್ತಿದ್ದು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಯಾವುವೆಂಬುದು ಖಚಿತವಾಗಲಿದೆ. ಅತ್ತ ಈಗಾಗಲೇ ಬೆಂಗಳೂರು ಬ್ಲಾಸ್ಟರ್ಸ್‌ ಟೂರ್ನಿಯಿಂದ ಎಲಿಮನೇಟ್‌ ಆಗಿದೆ.

ಮಹಾರಾಜ ಟ್ರೋಫಿಯಲ್ಲಿ (Maharaja Trophy KSCA T20 2023) ಹುಬ್ಬಳ್ಳಿ ಟೈಗರ್ಸ್‌ (Hubli Tigers) ಗೆಲುವಿನ ನಾಗಾಲೋಟ ಮುಂದುವರೆಸಿದೆ. ಶನಿವಾರದ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ (Mangalore Dragons) ವಿರುದ್ಧವೂ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಡ್ರ್ಯಾಗನ್ಸ್‌, ಆರಂಭಿಕ ಅಬ್ಬರದ ಹೊರತಾಗಿಯೂ ದಿಢೀರ್ ಕುಸಿತ ಕಂಡಿತು. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್‌, 18.2 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು 170 ರನ್‌ ಗಳಿಸಿ ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿತು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ