logo
ಕನ್ನಡ ಸುದ್ದಿ  /  ಕ್ರಿಕೆಟ್  /  3 ವರ್ಷಗಳ ಬಳಿಕ ಟೀಮ್ ಇಂಡಿಯಾ ಕಮ್‌​ಬ್ಯಾಕ್; ಇದಕ್ಕಾಗಿ ವರುಣ್ ಚಕ್ರವರ್ತಿ ಏನೆಲ್ಲ ಮಾಡಿದ್ರು ಗೊತ್ತೇ?

3 ವರ್ಷಗಳ ಬಳಿಕ ಟೀಮ್ ಇಂಡಿಯಾ ಕಮ್‌​ಬ್ಯಾಕ್; ಇದಕ್ಕಾಗಿ ವರುಣ್ ಚಕ್ರವರ್ತಿ ಏನೆಲ್ಲ ಮಾಡಿದ್ರು ಗೊತ್ತೇ?

Jayaraj HT Kannada

Oct 08, 2024 11:40 AM IST

google News

3 ವರ್ಷಗಳ ಬಳಿಕ ಟೀಮ್ ಇಂಡಿಯಾ ಕಮ್‌​ಬ್ಯಾಕ್; ವರುಣ್ ಚಕ್ರವರ್ತಿ ಏನೆಲ್ಲ ಮಾಡಿದ್ರು ಗೊತ್ತೇ?

    • Varun Chakravarthy: ತಮ್ಮ ಕಮ್​ಬ್ಯಾಕ್ ಬಗ್ಗೆ ಮಾತನಾಡಿದ ವರುಣ್ ಚಕ್ರವರ್ತಿ ಭಾವುಕರಾಗಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಡುವಾಗ ಮಾಡುತ್ತಿದ್ದ ಕೆಲವು ಪ್ರಯೋಗಗಳನ್ನು ಟೀಮ್‌ ಇಂಡಿಯಾದಲ್ಲೂ ಮುಂದೆವರೆಸಿದೆ. ಇದು ನನಗೆ ಉತ್ತಮ ಫಲಿತಾಂಶ ಕೊಟ್ಟಿದೆ ಎಂದಿದ್ದಾರೆ.
3 ವರ್ಷಗಳ ಬಳಿಕ ಟೀಮ್ ಇಂಡಿಯಾ ಕಮ್‌​ಬ್ಯಾಕ್; ವರುಣ್ ಚಕ್ರವರ್ತಿ ಏನೆಲ್ಲ ಮಾಡಿದ್ರು ಗೊತ್ತೇ?
3 ವರ್ಷಗಳ ಬಳಿಕ ಟೀಮ್ ಇಂಡಿಯಾ ಕಮ್‌​ಬ್ಯಾಕ್; ವರುಣ್ ಚಕ್ರವರ್ತಿ ಏನೆಲ್ಲ ಮಾಡಿದ್ರು ಗೊತ್ತೇ? (BCCI)

ಮಿಸ್ಟರಿ ಸ್ಪಿನ್ನರ್ ಎಂದೇ ಖ್ಯಾತರಾಗಿರುವ ವರುಣ್ ಚಕ್ರವರ್ತಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಬರೋಬ್ಬರಿ 1066 ದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ಪುನರಾಗಮನ ಮಾಡಿದ ಇವರು, ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಪಡೆಯುವ ಮೂಲಕ ತಾನೊಬ್ಬ ಶ್ರೇಷ್ಠ ಸ್ಪಿನ್ನರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಚಕ್ರವರ್ತಿ ಅವರು ಯುಎಇಯಲ್ಲಿ ನಿರಾಶಾದಾಯಕ ಟಿ20 ವಿಶ್ವಕಪ್ ಅಭಿಯಾನದ 3 ವರ್ಷಗಳ ನಂತರ 2021ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್‌ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡರು.

ತನ್ನ ಕಮ್​ಬ್ಯಾಕ್ ಬಗ್ಗೆ ಮಾತನಾಡಿದ ವರುಣ್ ಚಕ್ರವರ್ತಿ, ಮೂರು ವರ್ಷಗಳ ನಂತರ ಮರಳಿ ಬಂದಿದ್ದೇನೆ ಎಂದು ಭಾವುಕರಾದರು. ನಾನು ಐಪಿಎಲ್‌ನಲ್ಲಿ ಮಾಡುತ್ತಿದ್ದ ಕೆಲವು ಪ್ರಯೋಗ ಇಲ್ಲೂ ಮುಂದುವರೆಸಿದೆ. ನಾನು ವಾಸ್ತವದಲ್ಲಿ ಬದುಕಲು ಬಯಸುತ್ತೇನೆ. ಹಿಂದೆ ನಡೆದಿರುವ ಬಗ್ಗೆ ಯೋಚಿಸುವುದಿಲ್ಲ. ಐಪಿಎಲ್ ನಂತರ, ನಾನು ಕೆಲವು ಪಂದ್ಯಗಳನ್ನು ಆಡಿದ್ದೇನೆ. ಮುಖ್ಯವಾಗಿ ಟಿಎನ್‌ಪಿಎಲ್‌ನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.

ರವಿಚಂದ್ರನ್ ಅಶ್ವಿನ್ ಜೊತೆ ಕೆಲಸ ಮಾಡಿದ್ದು ತುಂಬಾ ಸಹಕಾರಿ ಆಗಿದೆ. ಅಲ್ಲಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಈ ಸರಣಿಯ ಮೂಲಕ ನನಗೆ ಎರಡನೇ ಜನ್ಮ ಬಂದಂತೆ ಭಾಸವಾಯಿತು. ನನ್ನ ಮುಂದೆ ಹಲವು ಸವಾಲುಗಳಿದ್ದವು. ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂದಾದಾಗ ಕುಗ್ಗದೆ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಆಗ ಒಂದು ದಿನ ಅವಕಾಶದ ಬಾಗಿಲು ತೆರೆಯುತ್ತದೆ ಎಂಬುದು ವರುಣ್ ಮಾತು.

“ನಾನು ಸೈಡ್-ಸ್ಪಿನ್ ಬೌಲರ್ ಆಗಿದ್ದೆ. ಆದರೆ ಇದೀಗ ಸಂಪೂರ್ಣವಾಗಿ ಓವರ್-ಸ್ಪಿನ್ ಬೌಲರ್ ಆಗಿ ಬದಲಾಗಿದ್ದೇನೆ. ಇದು ಸ್ಪಿನ್ ಬೌಲಿಂಗ್‌ನ ಒಂದು ನಿಮಿಷದ ತಾಂತ್ರಿಕ ಅಂಶವಾಗಿದೆ. ಆದರೆ ಇದನ್ನು ನನಗೆ ಮಾಡಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಯಿತು. TNPL ಮತ್ತು IPL ನಲ್ಲಿ ಇದನ್ನು ಪರೀಕ್ಷಿಸಿ ಯಶಸ್ವಿಯಾದೆ. ಭಾರತ ತಂಡವನ್ನು ಘೋಷಿಸಿದಾಗಲೆಲ್ಲಾ, ನನ್ನ ಹೆಸರೇಕೆ ಇಲ್ಲ? ಎಂದು ನನಗೆ ಅನಿಸುತ್ತಿತ್ತು. ನಾನು ಅದರ ಬಗ್ಗೆ ಯೋಚಿಸುತ್ತಲೇ ಇದ್ದೆ, ಹೇಗಾದರೂ ಕಮ್​ಬ್ಯಾಕ್ ಮಾಡಬೇಕು ಎಂಬ ಪಣತೊಟ್ಟೆ”, ಎಂದರು.

“ನಾನು ಸಾಕಷ್ಟು ದೇಶೀಯ ಆಟಗಳನ್ನು ಆಡಲು ಪ್ರಾರಂಭಿಸಿದೆ. ಅದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಅದು ನನಗೆ ಸಹಾಯ ಮಾಡಿದೆ. ಭಾರತ ತಂಡದಲ್ಲಿ ಅವಕಾಶಕ್ಕಾಗಿ ಒಳ್ಳೆಯ ಸ್ಪರ್ಧೆ ಇದೆ ಮತ್ತು ಉತ್ತಮ ಒಡನಾಟವೂ ಇದೆ. ನನ್ನನ್ನು ಹುರಿದುಂಬಿಸುತ್ತಿದ್ದ ವ್ಯಕ್ತಿ ರವಿ ಬಿಷ್ಣೋಯ್. ಅವರು ಬಂದು ನನಗೆ ಆಗಾಗ ಸಲಹೆ ನೀಡುತ್ತಿದ್ದರು,” ಎಂದು ವರುಣ್ ಅವರು ತಮ್ಮ ಪುನರಾಗಮನದ ಬಗ್ಗೆ ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ