logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ; ಸರ್ ರಿಚರ್ಡ್ ಹ್ಯಾಡ್ಲಿ ಪದಕ ಪಡೆದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆ

ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ; ಸರ್ ರಿಚರ್ಡ್ ಹ್ಯಾಡ್ಲಿ ಪದಕ ಪಡೆದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆ

Jayaraj HT Kannada

Mar 13, 2024 06:49 PM IST

google News

ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ

    • Rachin Ravindra: ಏಕದಿನ ವಿಶ್ವಕಪ್‌ನಲ್ಲಿ ಮಿಂಚಿದ್ದ 24 ವರ್ಷದ ರಚಿನ್ ರವೀಂದ್ರ, ಇದೀಗ ಸರ್ ರಿಚರ್ಡ್ ಹ್ಯಾಡ್ಲಿ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ‌ ರಚಿನ್‌ ಅಮೋಘ ಪ್ರದರ್ಶನ ನೀಡಿದ್ದರು.
ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ
ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ (AFP)

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ, ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡ ಪಡೆದ ಯುವ ಆಸ್ತಿ ರಚಿನ್ ರವೀಂದ್ರ (Rachin Ravindra). ವಿಶ್ವಕಪ್ ಅಭಿಯಾನದಲ್ಲಿ ಕಿವೀಸ್‌ ಬಳಗದ ಪರ ಅಮೋಘ ಪ್ರದರ್ಶನ ನೀಡಿದ್ದ ರಚಿನ್, ಸರ್ ರಿಚರ್ಡ್ ಹ್ಯಾಡ್ಲಿ ಪದಕವನ್ನು (Sir Richard Hadlee Medal) ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಚ್‌ 13ರ ಬುಧವಾರ ರಚಿನ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

24 ವರ್ಷದ ರವೀಂದ್ರ ಅವರು, ನ್ಯೂಜಿಲ್ಯಾಂಡ್‌ ದೇಶದಲ್ಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪದ ತಂಡಗಳಲ್ಲೂ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಮಿಂಚಿದ್ದ ಆಟಗಾರ, ಆ ನಂತರ ನಡೆದ ಹಲವು ಸರಣಿಗಳಲ್ಲಿ ಅಬ್ಬರಿಸಿದ್ದಾರೆ. ಇದೀಗ ಸರ್ ರಿಚರ್ಡ್ ಹ್ಯಾಡ್ಲಿ ಪ್ರಶಸ್ತಿಯ ವಿಜೇತರ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ವನಿತೆಯರ ವಿಭಾಗದಲ್ಲಿ, ಅಮೆಲಿಯಾ ಕೆರ್ ಪ್ರಮುಖ ಪ್ರಶಸ್ತಿ ಪಡೆದಿದ್ದಾರೆ.

2023ರ ಮಾರ್ಚ್‌ ತಿಂಗಳಲ್ಲಿ ಏಕದಿನ ಸ್ವರೂಪದ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವೀಂದ್ರ, ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಅಜೇಯ 123 ರನ್ ಸಿಡಿಸಿ ಮಿಂಚಿದರು. ಆ ಬಳಿಕ ಟೂರ್ನಿಯಲ್ಲಿ ಒಟ್ಟು ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿದಂತೆ 64ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 578 ರನ್ ಪೇರಿಸಿದರು. ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನದ ಬೆನ್ನಲ್ಲೇ ರವೀಂದ್ರ ಅವರನ್ನು 2023ರ ಐಸಿಸಿಯ ವರ್ಷದ ಉದಯೋನ್ಮುಖ ಆಟಗಾರ ಎಂದು ಹೆಸರಿಸಲಾಯಿತು.

ಇದನ್ನೂ ಓದಿ | ವಿದೇಶಿ ಮಂಡಳಿಗಳೊಂದಿಗೆ ನೇರವಾಗಿ ಕ್ರಿಕೆಟ್ ಒಪ್ಪಂದ ಮಾಡಿಕೊಳ್ಳುವಂತಿಲ್ಲ; ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಾಗತಿಕ ಆಕರ್ಷಣೆಗೊಳಗಾದ ಆಟಗಾರ, ಇದೀಗ ಐಪಿಎಲ್‌ನಲ್ಲೂ ಸಿಡಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪಾಲಾದ ರಚಿನ್‌, ಎಂಎಸ್‌ ಧೋನಿ ನೇತೃತ್ವದ ಸಿಎಸ್‌ಕೆ ಬಳಗದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.

ಇತ್ತೀಚೆಗೆ ಬೇ ಓವಲ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 240 ರನ್ ಗಳಿಸುವ ಮೂಲಕ ರವೀಂದ್ರ ನ್ಯೂಜಿಲೆಂಡ್‌ ಪರ ಚೊಚ್ಚಲ ಟೆಸ್ಟ್ ದ್ವಿಶತಕ ದಾಖಲಿಸಿದರು. ಟಿ20 ಸ್ವರೂಪದಲ್ಲಿಯೂ ಮಿಚಿನ ಪ್ರದರ್ಶನ ನೀಡಿದ್‌ ಅವರು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ 35 ಎಸೆತಗಳಲ್ಲಿ ಭರ್ಜರಿ 68 ರನ್ ಸಿಡಿಸಿದರು.‌

ಇದನ್ನೂ ಓದಿ | ನೀವು ಗಾಯಗೊಂಡು ಭಾರತದ ಪರ ಆಡಲ್ಲ, ನೇರವಾಗಿ ಐಪಿಎಲ್‌ ಆಡ್ತೀರಿ; ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ