ಕನ್ನಡ ಸುದ್ದಿ  /  Cricket  /  Former Cricketer Praveen Kumar Blasts Over Hardik Pandya Ipl Stand Mumbai Indians Captain In Indian Premier League Jra

ನೀವು ಗಾಯಗೊಂಡು ಭಾರತದ ಪರ ಆಡಲ್ಲ, ನೇರವಾಗಿ ಐಪಿಎಲ್‌ ಆಡ್ತೀರಿ; ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ

Hardik Pandya: ಐಪಿಎಲ್‌ಗಿಂತ ಎರಡು ತಿಂಗಳಿಗಿಂದ ಮುಂಚೆ ಗಾಯಗೊಂಡು, ಭಾರತದ ಪರವಾಗಲಿ, ರಾಜ್ಯದ ಪರವಾಗಲಿ ಆಡಲ್ಲ. ನೇರವಾಗಿ ಐಪಿಎಲ್‌ನಲ್ಲಿ ಆಡುವುದು ಸರಿಕಾಣುತ್ತಿಲ್ಲ. ಹಣ ಸಂಪಾದಿಸುವುದು ತಪ್ಪೇನಲ್ಲ. ಆದರೆ ರಾಜ್ಯ ಮತ್ತು ದೇಶಕ್ಕಾಗಿ ಆಡಲು ಸಿದ್ಧರಿರಬೇಕು ಎಂದು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ
ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ (Mumbai Indians)

ಏಕದಿನ ವಿಶ್ವಕಪ್‌ 2023ರ ಪಂದ್ಯಾವಳಿಯ ಮಧ್ಯದಲ್ಲೇ ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದ ಹಾರ್ದಿಕ್‌ ಪಾಂಡ್ಯ, ಇದೀಗ ಐಪಿಎಲ್‌ನಲ್ಲಿ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್ ವೇಳೆಗೆ, ಹಾರ್ದಿಕ್‌ ತಂಡವೂ ಬದಲಾಗಿದೆ. ಕಳೆದ ಬಾರಿ ಗುಜರಾತ್‌ಗೆ ಟೈಟಾನ್ಸ್‌ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ಹಾರ್ದಿಕ್‌, ಈ ಬಾರಿ ತಮ್ಮ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅತ್ತ, ಟೀಮ್‌ ಇಂಡಿಯಾದ ಅನುಭವಿ ನಾಯಕನಾದ ರೋಹಿತ್‌ ಶರ್ಮಾ ಅವರ ಬಳಿಯಿದ್ದ ನಾಯಕತ್ವವನ್ನು ಪಾಂಡ್ಯಗೆ ಹಸ್ತಾಂತರಿಸಿರುವುದು ಅಭಿಮಾನಿ ಬಳಗದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ, ಇತ್ತೀಚಿನ ದಿನದವರೆಗೂ ಗಾಯಗೊಂಡು ಫಿಟ್‌ ಆಗಿರದ ಹಾರ್ದಿಕ್‌, ಐಪಿಎಲ್‌ ಹತ್ತಿರವಾಗುತ್ತಿದ್ದಂತೆಯೇ ಫಿಟ್‌ ಆಗಿದ್ದೇಗೆ ಎಂಬುದು ಚರ್ಚೆಯ ವಿಷಯವಾಗಿದೆ.

ಈ ಹಿಂದೆಯೂ, ಗಾಯಗೊಂಡಿದ್ದ ಪಾಂಡ್ಯ ಐಪಿಎಲ್‌ ಆರಂಭದ ವೇಳೆಗೆ ಫಿಟ್‌ ಆಗಿ ಮೈದಾನಕ್ಕಿಳಿದಿದ್ದಾರೆ. ಈ ಬಾರಿಯೂ ಇದೇ ಮರುಕಳಿಸಿದೆ. ಈ ನಡುವೆ ಈ ಬಾರಿ ಆಲ್‌ರೌಂಡರ್‌ಗೆ ವಿಶೇಷ ಜವಾಬ್ದಾರಿಯೂ ಇದೆ. ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ ಅನ್ನು ಚಾಂಪಿಯನ್‌ ಪಟ್ಟಕ್ಕೇರಿಸುವ ನಾಯಕತ್ವ ನೀಡಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಕುರಿತು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಪ್ರಶ್ನೆ ಕೇಳಿದ್ದಾರೆ.

ಮುಂಬೈ ಫ್ರಾಂಚೈಸಿಯು ಅವಸರದಿಂದ ಇಂಥಾ ನಿರ್ಧಾರ ತೆಗೆದುಕೊಂಡಿತೇ? ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡುವ ನಿರ್ಧಾರ ಸರಿಯಾಗಿದೆಯೇ? ಎಂಬುದಾಗಿ ಪ್ರವೀಣ್ ಕುಮಾರ್ ಅವರಲ್ಲಿ ಕೇಳಲಾಯಿತು.‌ ಇದಕ್ಕೆ ಉತ್ತರಿಸಿದ ಮಾಜಿ ವೇಗಿ, ಐಪಿಎಲ್‌ಗೆ ಆದ್ಯತೆ ನೀಡುವ ಕ್ರಿಕೆಟಿಗರೆಲ್ಲರಿಗೂ ಟಾಂಗ್‌ ಕೊಟ್ಟಿದ್ದಾರೆ.

“ಎರಡು ತಿಂಗಳಿಂದ ಕ್ರಿಕೆಟ್‌ ಆಡಿಲ್ಲ. ಐಪಿಎಲ್‌ಗಿಂತ ಎರಡು ತಿಂಗಳಿಗಿಂದ ಮುಂಚೆ ಗಾಯಗೊಂಡು, ಭಾರತದ ಪರವಾಗಲೀ, ದೇಶೀಯ ಕ್ರಿಕೆಟ್‌ನಲ್ಲಿ ರಾಜ್ಯದ ಪರವಾಗಲಿ ಆಡಿಲ್ಲ. ಬದಲಿಗೆ ನೇರವಾಗಿ ಐಪಿಎಲ್‌ನಲ್ಲಿ ಆಡುತ್ತೀರಿ. ಇದು ಸರಿಕಾಣುತ್ತಿಲ್ಲ. ಹಣ ಸಂಪಾದಿಸುವುದು ತಪ್ಪೇನಲ್ಲ. ನಿಮ್ಮನ್ನು ತಡೆಯುವವರು ಯಾರು? ಆದರೆ ನೀವು ರಾಜ್ಯ ಮತ್ತು ದೇಶಕ್ಕಾಗಿ ಆಡಬೇಕು. ಈಗ ಆಟಗಾರರು ಐಪಿಎಲ್‌ಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಾರೆ" ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.

ಐಪಿಎಲ್‌ಗಿಂತ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆದ್ಯತೆ ನೀಡುವಂತೆ ಮಾಜಿ ವೇಗಿ ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ. ಹಣ ಸಂಪಾದಿಸಿ, ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಆದರೆ ನೀವು ದೇಶಕ್ಕಾಗಿ ಅಥವಾ ದೇಶೀಯ ಕ್ರಿಕೆಟ್‌ ಆಡಲ್ಲ ಎಂಬಂತೆ ಇರಬಾರದು. ಐಪಿಎಲ್‌ಗೆ ಮೊದಲು ಒಂದು ತಿಂಗಳು ವಿಶ್ರಾಂತಿ ಪಡೆದು ನಂತರ ಆಡುತ್ತೇನೆ ಎಂಬುದು ಸರಿ ಅಲ್ಲ. ಆಟಗಾರರು ಎಲ್ಲವನ್ನೂ ಸಮತೋಲನಗೊಳಿಸಬೇಕು. ಹಣ ಮುಖ್ಯ, ಆದರೆ ಫ್ರಾಂಚೈಸ್‌ ಕ್ರಿಕೆಟ್‌ಗೆ ಆದ್ಯತೆ ನೀಡುವುದು ತಪ್ಪು, ಎಂದು ಪ್ರವೀಣ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿರುವ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ | Video: ನಾಯಕನಾಗಿ ಮುಂಬೈ ಇಂಡಿಯನ್ಸ್ ಕ್ಯಾಂಪ್‌ ಸೇರಿಕೊಂಡ ಹಾರ್ದಿಕ್ ಪಾಂಡ್ಯ; ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೇವರಿಗೆ ಪೂಜೆ

ಕಳೆದ ವರ್ಷದ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಪರ ಆಡಿದ್ದ ಪಾಂಡ್ಯ, ಈ ಬಾರಿ ತಮ್ಮ ಹಳೆಯ ಫ್ರಾಂಚೈಸ್‌ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಖುಷಿಯಿಂದಲೇ ಎಂಐ ಡ್ರೆಸಿಂಗ್‌ ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ದೇವರ ಫೋಟೋ ಇಟ್ಟು ದೇವರ ಆಶೀರ್ವಾದ ಪಡೆಯುವ ಮೂಲಕ, ಹೊಸ ಪ್ರಯಣ ಆರಂಭಿಸಿದ್ದಾರೆ.

ಇದನ್ನೂ ಓದಿ | ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point