logo
ಕನ್ನಡ ಸುದ್ದಿ  /  ಕ್ರಿಕೆಟ್  /  Sourav Ganguly: ಭಾರತ-ಪಾಕಿಸ್ತಾನ ನಡುವೆ ಗೆಲ್ಲೋದ್ಯಾರು; ಗಂಗೂಲಿ ನೀಡಿದ ಉತ್ತರವೇ ಅಚ್ಚರಿ

Sourav Ganguly: ಭಾರತ-ಪಾಕಿಸ್ತಾನ ನಡುವೆ ಗೆಲ್ಲೋದ್ಯಾರು; ಗಂಗೂಲಿ ನೀಡಿದ ಉತ್ತರವೇ ಅಚ್ಚರಿ

Prasanna Kumar P N HT Kannada

Aug 25, 2023 03:54 PM IST

google News

ಭಾರತ-ಪಾಕಿಸ್ತಾನ ನಡುವೆ ಯಾರು ಗೆಲ್ಲುತ್ತಾರೆ ಎಂದು ಹೇಳಿದ ಸೌರವ್ ಗಂಗೂಲಿ,

    • Sourav Ganguly: ಭಾರತ ಮತ್ತು ಪಾಕಿಸ್ತಾನ ತಂಡಗಳಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ಮಾಧ್ಯಮಗಳಿಗೆ ಗಂಗೂಲಿ ನೀಡಿರುವ ಉತ್ತರ ಇಲ್ಲಿದೆ!
ಭಾರತ-ಪಾಕಿಸ್ತಾನ ನಡುವೆ ಯಾರು ಗೆಲ್ಲುತ್ತಾರೆ ಎಂದು ಹೇಳಿದ ಸೌರವ್ ಗಂಗೂಲಿ,
ಭಾರತ-ಪಾಕಿಸ್ತಾನ ನಡುವೆ ಯಾರು ಗೆಲ್ಲುತ್ತಾರೆ ಎಂದು ಹೇಳಿದ ಸೌರವ್ ಗಂಗೂಲಿ,

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ (Asia Cup 2023) ದಿನಗಣನೆ ಆರಂಭವಾಗಿದೆ. ಇನ್ನೇನು ಐದೇ ದಿನಗಳು ಬಾಕಿ ಉಳಿದಿದೆ. ಭಾರತ ತಂಡವು ಪಾಕ್​ಗೆ ತೆರಳದ ಕಾರಣ ಹೈಬ್ರಿಡ್ ಮಾದರಿಯಲ್ಲಿ (Hybrid Model) ಟೂರ್ನಿಯಲ್ಲಿ ನಡೆಸುತ್ತಿದ್ದು, ಟೀಮ್ ಇಂಡಿಯಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ಟೀಮ್ ಇಂಡಿಯಾ (Team India) ತಯಾರಿ ಆರಂಭಿಸಿದೆ. ಕಳೆದ ಬಾರಿಯ ಟಿ20 ಏಷ್ಯಾಕಪ್​​ನಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿದ್ದ ಭಾರತ, ಈ ಸಲ ಕಪ್ ಎತ್ತಲು ಪಣತೊಟ್ಟಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ (India vs Pakistan) ತಂಡಗಳ ನಡುವಿನ ಕಾದಾಟ ನಿರೀಕ್ಷೆ ಹೆಚ್ಚಿಸಿದೆ. ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಜೋರಾಗಿದೆ. ಮಾಜಿ-ಹಾಲಿ ಕ್ರಿಕೆಟಿಗರು ಅವರವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದೀಗ ಸಾಂಪ್ರದಾಯಿಕ ಎದುರಾಳಿ ತಂಡಗಳಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಉತ್ತರಿಸಿದ್ದಾರೆ. ಮಾಧ್ಯಮಗಳಿಗೆ ಗಂಗೂಲಿ ನೀಡಿರುವ ಉತ್ತರ ಇಲ್ಲಿದೆ!

ಎರಡೂ ತಂಡಗಳು ಬಲಿಷ್ಠ

ಭಾರತ-ಪಾಕ್ ಉಭಯ ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಅಚ್ಚರಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಮತ್ತು ಭಾರತ ತಂಡದ ನಡುವಣ ಯಾವುದು ಗೆಲ್ಲುವ ತಂಡ ಎಂದು ಉತ್ತರಿಸುವುದು ಕಷ್ಟ. ಉಭಯ ತಂಡಗಳು ಬಲಿಷ್ಠವಾಗಿವೆ. ಒಂದೆಡೆ ಪಾಕಿಸ್ತಾನವೂ ಬಲಿಷ್ಠವಾಗಿದೆ. ಮತ್ತೊಂದೆಡೆ ಭಾರತ ತಂಡವೂ ಬಲಿಷ್ಠವಾಗಿದೆ. ಹಾಗಾಗಿ ಯಾವುದೂ ನನ್ನ ನೆಚ್ಚಿನ ತಂಡವಲ್ಲ. ಪಂದ್ಯದ ದಿನದಂದು ಯಾವ ತಂಡವು ಅದ್ಭುತ, ಅಮೋಘ ಪ್ರದರ್ಶನ ನೀಡುತ್ತದೋ ಆ ಗೆಲುವು ಸಾಧಿಸುತ್ತದೆ ಎಂದು ದಾದಾ ಹೇಳಿದ್ದಾರೆ.

ಬುಮ್ರಾ ಕಂಬ್ಯಾಕ್ ಬಲ ಹೆಚ್ಚಿಸಿದೆ!

ಇದೇ ವೇಳೆ ಜಸ್ಪ್ರಿತ್ ಬುಮ್ರಾ ತಂಡಕ್ಕೆ ಮರಳಿರುವುದರ ಕುರಿತು ಪ್ರತಿಕ್ರಿಯಿಸಿದರು. ಬುಮ್ರಾ ಆಗಮನದಿಂದ ತಂಡಕ್ಕೆ ಭಾರತ ತಂಡದ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಐರ್ಲೆಂಡ್​ ಸರಣಿಯಲ್ಲಿ ನಿರೀಕ್ಷೆಯಂತೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಏಷ್ಯಾಕಪ್​ 50 ಓವರ್​​ಗಳ ಸ್ವರೂಪದ್ದಾದ ಕಾರಣ, ಬೂಮ್ರಾ 10 ಓವರ್​ ಬೌಲಿಂಗ್ ಮಾಡಲಿದ್ದಾರೆ. ಕಾಲಕ್ಕೆ ತಕ್ಕಂತೆ ಅವರ ಫಿಟ್​ನೆಸ್​ ಸುಧಾರಿಸಲಿದೆ. ಆ ಆ ಮೂಲಕ ತಮ್ಮ ಹಳೆಯ ಖದರ್​​​ಗೆ ಮರಳಲಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಕ್ಷರ್​ ಬ್ಯಾಟಿಂಗ್​ ಮಾಡ್ತಾರೆ!

ಏಷ್ಯಾಕಪ್ ತಂಡದಲ್ಲಿ ಚಹಲ್​ಗೆ ಅವಕಾಶ ನೀಡದೇ ಇರುವ ಕುರಿತು ಪ್ರತಿಕ್ರಿಯಿಸಿದ ಗಂಗೂಲಿ, ಯುಜ್ವೇಂದ್ರ ಚಹಲ್ ಪರ ಬ್ಯಾಟ್​ ಬೀಸಲಿಲ್ಲ. ಸದ್ಯ ತಂಡದಲ್ಲಿ ಮೂವರು ಸ್ಪಿನ್ನರ್​ಗಳಿದ್ದಾರೆ. ನನಗೆ ಅನಿಸಿದ ಪ್ರಕಾರ ಅಕ್ಷರ್​ ಪಟೇಲ್ ತಂಡದಲ್ಲಿ ಉತ್ತಮ. ಅವರು ಬೌಲಿಂಗ್ ಜೊತೆಗೆ ಬ್ಯಾಟಿಂಗ್​​​ನಲ್ಲೂ ಪ್ರದರ್ಶನ ನೀಡುತ್ತಾರೆ. ಒತ್ತಡದ ಸಂದರ್ಭದಲ್ಲಿ ಬ್ಯಾಟಿಂಗ್​​​​ ಮೂಲಕ ಸಹಾಯ ಮಾಡಲಿದ್ದಾರೆ ಎಂದು ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ