logo
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಅಲ್ಲವೇ ಅಲ್ಲ; ಮುಂಬೈಗೆ ಮೊದಲ ನಾಯಕ, ಪ್ರಥಮ ಟ್ರೋಫಿ ಗೆದ್ದ ಕ್ಯಾಪ್ಟನ್ ಯಾರು? ಗೆಸ್ ಮಾಡಿ

ರೋಹಿತ್ ಅಲ್ಲವೇ ಅಲ್ಲ; ಮುಂಬೈಗೆ ಮೊದಲ ನಾಯಕ, ಪ್ರಥಮ ಟ್ರೋಫಿ ಗೆದ್ದ ಕ್ಯಾಪ್ಟನ್ ಯಾರು? ಗೆಸ್ ಮಾಡಿ

Prasanna Kumar P N HT Kannada

Dec 16, 2023 11:52 AM IST

ಮುಂಬೈಗೆ ಮೊದಲ ನಾಯಕ, ಪ್ರಥಮ ಟ್ರೋಫಿ ಗೆದ್ದ ಕ್ಯಾಪ್ಟನ್ ಯಾರು.

    • Mumbai Indians: ಐಪಿಎಲ್​ನಲ್ಲಿ ಐದು ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಮೊದಲ ನಾಯಕ ಯಾರು? ಅಲ್ಲದೆ, ಮೊದಲ ಟ್ರೋಫಿ ಗೆದ್ದು ಕೊಟ್ಟ ಕ್ಯಾಪ್ಟನ್ ಯಾರು? ಸುಳಿವು ಹೀಗಿದೆ- ರೋಹಿತ್​ ಅಲ್ಲ. ಆದರೆ ಮೊದಲ ಕ್ಯಾಪ್ಟನ್ ಹಾಗೂ ಟ್ರೋಫಿ ಗೆದ್ದ ನಾಯಕ ಒಬ್ಬರೇ.
ಮುಂಬೈಗೆ ಮೊದಲ ನಾಯಕ, ಪ್ರಥಮ ಟ್ರೋಫಿ ಗೆದ್ದ ಕ್ಯಾಪ್ಟನ್ ಯಾರು.
ಮುಂಬೈಗೆ ಮೊದಲ ನಾಯಕ, ಪ್ರಥಮ ಟ್ರೋಫಿ ಗೆದ್ದ ಕ್ಯಾಪ್ಟನ್ ಯಾರು.

2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಮಿನಿ ಹರಾಜಿಗೆ ಕೇವಲ ನಾಲ್ಕು ದಿನಗಳ ಮೊದಲು, ಮುಂಬರುವ ಆವೃತ್ತಿಯಲ್ಲಿ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ (Mumbai Indians) ಪ್ರಕಟಣೆ ಹೊರಡಿಸಿದೆ. ರೋಹಿತ್ ಇನ್ನು ಮುಂದೆ ಕೇವಲ ತಂಡದ ಆಟಗಾರ ಎಂದು ತಿಳಿಸಿದೆ. 2013ರಿಂದ 10 ವರ್ಷಗಳ ರೋಹಿತ್​ ನಾಯಕತ್ವ ಯುಗಾಂತ್ಯ ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

2013ರಲ್ಲಿ ರಿಕಿ ಪಾಂಟಿಂಗ್‌ ಅವರಿಂದ ಟೂರ್ನಿಯ ಮಧ್ಯೆದಲ್ಲೇ ತಂಡದ ಜವಾಬ್ದಾರಿ ವಹಿಸಿಕೊಂಡ ನಂತರ ರೋಹಿತ್, ಮುಂಬೈಗೆ ಒಟ್ಟು ಐದು ಐಪಿಎಲ್​ ಟ್ರೋಫಿಗಳನ್ನು ಗೆದ್ದುಕೊಟ್ಟರು. ರೋಹಿತ್ ನಾಯಕತ್ವದಲ್ಲಿ ಬ್ಲೂ ಅಂಡ್ ಗೋಲ್ಡ್ ತಂಡವು 2013, 2015, 2017, 2019 ಮತ್ತು 2020ರ ಐಪಿಎಲ್‌ ಆವೃತ್ತಿಗಳಲ್ಲಿ ಟ್ರೋಫಿ ಗೆದ್ದಿದೆ. ಜೊತೆಗೆ 2013ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನೂ ಗೆದ್ದರು.

ಮುಂಬೈಗೆ ಮೊದಲ ನಾಯಕ ಯಾರು?

2013ರಿಂದ ರೋಹಿತ್ ತಮ್ಮ 5 ಐಪಿಎಲ್ ವಿಜಯಗಳಲ್ಲಿ ಅಂಬಾನಿ ಬ್ರಿಗೇಡ್ ತಂಡವನ್ನು ಮುನ್ನಡೆಸಿದ್ದರೆ, 2008ರ ಚೊಚ್ಚಲ ಲೀಗ್​ನಲ್ಲಿ ಮುಂಬೈ ತಂಡವನ್ನು ಮುನ್ನಡಿಸಿದ್ದು ಯಾರು? ರೋಹಿತ್​ ಅವರಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರು ಸಚಿನ್ ಎಂದು ಊಹಿಸಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಅವರು ಯಾರೂ ಅಲ್ಲ, ಭಾರತದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್. ಮುಂಬೈಗೆ ಮೊದಲ ಟ್ರೋಫಿ ಗೆದ್ದುಕೊಟ್ಟ ನಾಯಕ ಕೂಡ ಇವರೇ!

ಟ್ರೋಫಿ ಗೆದ್ದಿದ್ದು ಐಪಿಎಲ್​ನಲ್ಲಿ ಅಲ್ಲ..!

ಸಚಿನ್​ ತೆಂಡೂಲ್ಕರ್ ನಾಯಕನ ಪಟ್ಟ ಅಲಂಕರಿಸಬೇಕಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಸಚಿನ್ ಗಾಯದ ಸಮಸ್ಯೆಗೆ ಸಿಲುಕಿದ್ದರು. ಹಾಗಾಗಿ ತಂಡವನ್ನು ಭಜ್ಜಿ ಮುನ್ನಡೆಸಿದರು. ಅಲ್ಲದೆ, ಭಜ್ಜಿ ತನ್ನ ನಾಯಕತ್ವದಲ್ಲಿ ಮುಂಬೈಗೆ ಮೊದಲ ಟ್ರೋಫಿ ಗೆದ್ದುಕೊಟ್ಟರು. ಆದರೆ ಅದು ಐಪಿಎಲ್​ನಲ್ಲಿ ಅಲ್ಲ, ಬದಲಿಗೆ 2011ರ ಚಾಂಪಿಯನ್ಸ್​ ಲೀಗ್ಸ್​​ನಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ್ದರು. ಮುಂಬೈಗೆ ಮೊದಲ ನಾಯಕ ಮತ್ತು ಮೊದಲ ಬಾರಿಗೆ ಮುಂಬೈ ಟ್ರೋಫಿ ವಿಜೇತ ನಾಯಕ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.

ರೋಹಿತ್ ನಾಯಕತ್ವದಲ್ಲಿ​ 6 ಟ್ರೋಫಿ ಗೆಲುವು

ಮುಂಬೈ ಇಂಡಿಯನ್ಸ್ ತನ್ನ ಇತಿಹಾಸದಲ್ಲಿ ಒಟ್ಟು 7 ಟ್ರೋಫಿಗಳನ್ನು ಗೆದ್ದುಕೊಂಡಿದೆ. ಈ ಪೈಕಿ 6 ಟ್ರೋಫಿಗಳು ರೋಹಿತ್ ನಾಯಕತ್ವದಲ್ಲಿ ಬಂದಿರುವುದು ವಿಶೇಷ. ಒಂದು ಪ್ರಶಸ್ತಿ ಹರ್ಭಜನ್ ನಾಯಕತ್ವದಲ್ಲಿ ಬಂದಿವೆ. ನಿಯಮಿತ ನಾಯಕ ಸಚಿನ್ ತೆಂಡೂಲ್ಕರ್ ಗಾಯದಿಂದ ಹೊರಗುಳಿದ ಕಾರಣ ಹರ್ಭಜನ್ ಪಟ್ಟ ಏರಿದ್ದರು. ಅಂದು ಪ್ರಮುಖ ಆಟಗಾರರ ಅಲಭ್ಯತೆಯಲ್ಲೂ ಭಜ್ಜಿ ಪ್ರಶಸ್ತಿ ಗೆದ್ದಿದ್ದರು.

ಮುಂಬೈ ಇಂಡಿಯನ್ಸ್​ ಮೊದಲ ಕೆಲವು ಪಂದ್ಯಗಳಿಗೆ ಆಟಗಾರರಿಗೆ ವಿಶಿಷ್ಟ ಭತ್ಯೆಯನ್ನು ನೀಡಿತ್ತು. 5 ವಿದೇಶಿ ಆಟಗಾರರನ್ನು ಕಣಕ್ಕಿಳಿಸಲು ಅನುಮತಿಸಲಾಯಿತು. ಚೆನ್ನೈನ ಚೆಪಾಕ್​​ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರ್ಭಜನ್ ನೇತೃತ್ವದ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೋಲಿಸಿ ವಿಜಯೋತ್ಸವ ಆಚರಿಸಿತ್ತು. 2013ರಲ್ಲಿ ರಿಕಿ ಪಾಂಟಿಂಗ್​ಗೆ ನಾಯಕತ್ವ ನೀಡಲಾಯಿತು. ಅದೇ ಆವೃತ್ತಿಯ ಮಧ್ಯದಲ್ಲಿ ರೋಹಿತ್​ರನ್ನು ಕ್ಯಾಪ್ಟನ್ ಮಾಡಲಾಯಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ