logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಬೇಡ, ಟಿ20 ವಿಶ್ವಕಪ್​ನಲ್ಲಿ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಬ್ರಿಯಾನ್ ಲಾರಾ ಸಲಹೆ

ವಿರಾಟ್ ಕೊಹ್ಲಿ ಬೇಡ, ಟಿ20 ವಿಶ್ವಕಪ್​ನಲ್ಲಿ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಬ್ರಿಯಾನ್ ಲಾರಾ ಸಲಹೆ

Prasanna Kumar P N HT Kannada

May 08, 2024 05:47 PM IST

ವಿರಾಟ್ ಕೊಹ್ಲಿ ಬೇಡ, ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಬ್ರಿಯಾನ್ ಲಾರಾ ಸಲಹೆ

    • Brian Lara : ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್ ಬ್ಯಾಟಿಂಗ್ ಮಾಡಬೇಕು ಎಂದು ವೆಸ್ಟ್ ಇಂಡೀಸ್ ದಿಗ್ಗಜ ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಬೇಡ, ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಬ್ರಿಯಾನ್ ಲಾರಾ ಸಲಹೆ
ವಿರಾಟ್ ಕೊಹ್ಲಿ ಬೇಡ, ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಬ್ರಿಯಾನ್ ಲಾರಾ ಸಲಹೆ

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬಾರದು ಎಂದು ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಬ್ರಿಯಾನ್ ಲಾರಾ (Brian Lara) ಅಚ್ಚರಿ ಹೇಳಿಕೆ ನೀಡಿದ್ದಾರೆ. ಕೊಹ್ಲಿ ಬದಲಿಗೆ ವಿಶ್ವ ಶ್ರೇಯಾಂಕದಲ್ಲಿ ನಂಬರ್ 1 ಟಿ20 ಬ್ಯಾಟರ್ ಆಗಿರುವ​ ಸೂರ್ಯಕುಮಾರ್ ಯಾದವ್ (Suryakumar Yadav)​ ಅವರನ್ನು ಕಣಕ್ಕಿಳಿಸಬೇಕು ಎಂದು ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸತತ 6 ಸೋಲಿನಿಂದ ಸತತ 6 ಗೆಲುವಿನ ತನಕ; ಅಸಾಧ್ಯವನ್ನೂ ಸಾಧಿಸಿದ ಆರ್‌ಸಿಬಿ ಪ್ಲೇಆಫ್ ಹಾದಿಯೇ ರೋಚಕ

ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ವೈಟ್ ಬಾಲ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಹೋನ್ನತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ಸ್ಥಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಾಗಿಲ್ಲ. ಭಾರತ ತಂಡ ಮಾತ್ರವಲ್ಲ, ವಿಶ್ವ ಕ್ರಿಕೆಟ್​ನಲ್ಲೇ 3ನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್​ ಆಗಿದ್ದಾರೆ. ಆದರೆ ಬ್ರಿಯಾನ್ ಲಾರಾ ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ. ಪ್ರಸ್ತುತ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಸೂರ್ಯಕುಮಾರ್ ಕುರಿತು ಲಾರಾ ಹೇಳಿದ್ದೇನು?

ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂದು ಲಾರಾ ಸೂಚಿಸಿದ್ದಾರೆ. ನನ್ನೊಂದು ಸಲಹೆ ಇದೆ. ನೀವು ಅದನ್ನು ಇಷ್ಟ ಪಡುತ್ತಿರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ ಸೂರ್ಯ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂದು ತಿಳಿಸಿದ್ದಾರೆ. ಇದೇ ವೇಳೆ ಸೂರ್ಯ 3ರಲ್ಲಿ ಮೈದಾನದಕ್ಕೆ ತಂಡಕ್ಕಾಗುವ ಲಾಭ ಏನೆಂದು ತಿಳಿಸಿದ್ದಾರೆ.

ಸೂರ್ಯ ಅವರು ಕೇವಲ ಮೂರರಲ್ಲಿ ಬ್ಯಾಟಿಂಗ್ ಮಾಡಬೇಕು. ಅವರು ಟಿ20 ಪಂದ್ಯದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಸ್ಕೈ ಸಾಧ್ಯವಾದಷ್ಟು ಬೇಗ ಬ್ಯಾಟಿಂಗ್ ನಡೆಸಿದರೆ, ತಂಡಕ್ಕೆ ಉತ್ತಮ ಲಾಭ. ತಂಡದ ಮೊತ್ತ ಒಂದೇ ಸಮನೆ ಏರಲಿದೆ. ಅವರು ಓಪನರ್ ಅಲ್ಲ. ಹಾಗಾಗಿ ಅವರನ್ನು 3ನೇ ಕ್ರಮಾಂಕಕ್ಕೆ ಶಿಫ್ಟ್ ಮಾಡಿ. ಆತ 10-15 ಓವರ್‌ಗಳವರೆಗೆ ಬ್ಯಾಟ್ ಮಾಡಲು ಸಾಧ್ಯವಾದರೆ, ಏನಾಗಲಿದೆ ಎಂದು ನಿಮಗೂ ತಿಳಿದಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದೊಂದಿಗಿನ ಸಂವಾದದಲ್ಲಿ ಲಾರಾ ಹೇಳಿದ್ದಾರೆ.

ನೀವು (ಟೀಮ್​ ಮ್ಯಾನೇಜ್​ಮೆಂಟ್) ಆತನೊಂದಿಗೆ ಮೊದಲು ಬ್ಯಾಟ್ ಮಾಡಿಸಿದರೆ, ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಎದುರಾಳಿಗಳ ಮೇಲೆ ಸವಾರಿ ಮಾಡಲಿದ್ದಾರೆ. ಆತ ಪಂದ್ಯ ಗೆಲ್ಲಿಸಿಕೊಡುತ್ತಾರೆ ಎಂದು ಹೇಳಿದ್ದಾರೆ. ತಂಡದಲ್ಲಿ ಎಲ್ಲರಿಗೂ ಸ್ಥಾನ ದೊರಕುವಂತೆ ನೋಡಿಕೊಂಡು ಉತ್ತಮವಾಗಿ ರಚಿಸಬೇಕು. ಈ ಪೈಕಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಕೊಹ್ಲಿ ಯಾವ ಕ್ರಮಾಂಕದಲ್ಲಿ ಆಡಬೇಕೆಂದು ಮಾತ್ರ ಲಾರಾ ಸೂಚಿಸಿಲ್ಲ.

ನಾಲ್ಕನೇ ಸ್ಥಾನದಲ್ಲಿ ಸೂರ್ಯ ಬ್ಯಾಟಿಂಗ್

ಸೂರ್ಯಕುಮಾರ್ ಪ್ರಸ್ತುತ ವಿಶ್ವದ ನಂಬರ್ ಒನ್ ಟಿ20ಐ ಬ್ಯಾಟರ್. ಈ ಫಾರ್ಮೆಟ್​ನಲ್ಲಿ ನಾಲ್ಕು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರೋಹಿತ್ ಶರ್ಮಾ ಮಾತ್ರ ಕಡಿಮೆ ಫಾರ್ಮ್ಯಾಟ್‌ನಲ್ಲಿ ತಲಾ 5 ಶತಕ ಸಿಡಿಸಿದ್ದಾರೆ. ಆದಾಗ್ಯೂ, ಟೀಮ್ ಇಂಡಿಯಾದ 4ನೇ ಕ್ರಮಾಂಕದಲ್ಲಿ ಸೂರ್ಯ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರೆ, ಕೊಹ್ಲಿ 3ನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ