logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಆಡಿದ್ದ 12 ಆಟಗಾರರಿಗಿಲ್ಲ ಏಕದಿನ ತಂಡದಲ್ಲಿ ಸ್ಥಾನ; ಒಡಿಐ ಸರಣಿಗೆ ಬಹುತೇಕ ಹೊಸಬರಿಗೆ ಮಣೆ

ವಿಶ್ವಕಪ್ ಆಡಿದ್ದ 12 ಆಟಗಾರರಿಗಿಲ್ಲ ಏಕದಿನ ತಂಡದಲ್ಲಿ ಸ್ಥಾನ; ಒಡಿಐ ಸರಣಿಗೆ ಬಹುತೇಕ ಹೊಸಬರಿಗೆ ಮಣೆ

Prasanna Kumar P N HT Kannada

Dec 01, 2023 11:42 AM IST

google News

ಭಾರತ ತಂಡ.

    • India vs South Africa ODI Series: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಭಾರಿ ಬದಲಾವಣೆಯಾಗಿವೆ. ಭಾರತದ 2023ರ ಏಕದಿನ ವಿಶ್ವಕಪ್ ತಂಡದಲ್ಲಿದ್ದ ಕೇವಲ ಮೂವರು ಆಟಗಾರರನ್ನಷ್ಟೇ ಈ ಸರಣಿಗೆ ಉಳಿಸಿಕೊಂಡಿದೆ.
ಭಾರತ ತಂಡ.
ಭಾರತ ತಂಡ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​, ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. 3 ಸರಣಿಗಳಿಗೂ ಮೂವರು ವಿಭಿನ್ನ ನಾಯಕರು ತಂಡಗಳನ್ನು ಮುನ್ನಡೆಸಲಿದ್ದಾರೆ. ಒಂದು ತಿಂಗಳ ಈ ಪ್ರವಾಸದಲ್ಲಿ ಭಾರತ ಎರಡು ಟೆಸ್ಟ್​ ಪಂದ್ಯಗಳು, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಸೌತ್​ ಆಫ್ರಿಕಾ ನೆಲದಲ್ಲಿ ಮೂರು ಸರಣಿಗಳನ್ನೂ ಗೆದ್ದು ದಾಖಲೆ ಬರೆಯಲು ಟೀಮ್ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಅಲ್ಲದೆ, ಟಿ20 ಸರಣಿ ಮೂಲಕ ಮುಂದಿನ ವರ್ಷ ನಡೆಯುವ ಚುಟುಕು ವಿಶ್ವಕಪ್​​ಗೆ ಸಿದ್ಧತೆ ಆರಂಭಿಸಲಿದೆ. ಹಾಗೆಯೇ ಟೆಸ್ಟ್​ ಸರಣಿ ಜಯಿಸಿ ಸತತ 3ನೇ ಬಾರಿಗೆ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲುವ ಗುರಿ ಹಾಕಿಕೊಂಡಿದೆ.

ಆದರೆ, ಏಕದಿನ ತಂಡದಲ್ಲಿ ಭಾರಿ ಬದಲಾವಣೆಯಾಗಿವೆ. ಭಾರತದ 2023ರ ಏಕದಿನ ವಿಶ್ವಕಪ್ ತಂಡದಲ್ಲಿದ್ದ ಕೇವಲ ಮೂವರನ್ನಷ್ಟೇ ಉಳಿಸಿಕೊಂಡು ಸಂಪೂರ್ಣ ಬದಲಾಯಿಸಲಾಗಿದೆ. ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದು, ನಾಯಕ ರೋಹಿತ್ ಶರ್ಮಾ ರೆಸ್ಟ್ ಪಡೆದಿದ್ದರೆ, ಉಪನಾಯಕ ಹಾರ್ದಿಕ್ ಪಾಂಡ್ಯ ಗಾಯದಿಂದ ಗೈರು ಹಾಜರಾಗಿದ್ದಾರೆ. ವಿರಾಟ್ ಕೊಹ್ಲಿ ಕೂಡ ವಿಶ್ರಾಂತಿ ಪಡೆದಿದ್ದಾರೆ.

12 ಆಟಗಾರರು ತಂಡದ ಭಾಗವಾಗಿಲ್ಲ

ಮೂರು ಪಂದ್ಯಗಳ ಏಕದಿನ ಸರಣಿಗೆ ರಾಹುಲ್ ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಮತ್ತು ಕುಲ್ದೀಪ್ ಯಾದವ್ ಮಾತ್ರ ಭಾರತದ ತಂಡದ ಭಾಗವಾಗಿದ್ದಾರೆ. ಭಾರತದ ವಿಶ್ವಕಪ್ ತಂಡದಲ್ಲಿದ್ದ ಒಟ್ಟು 12 ಆಟಗಾರರು ಈ ಸರಣಿಯ ಭಾಗವಾಗಿಲ್ಲ. ಜೊತೆಗೆ ಹಾರ್ದಿಕ್​ರನ್ನು ಟೂರ್ನಿಯ ಮಧ್ಯದಿಂದ ಹೊರಗಿಡಲಾಗಿತ್ತು.

ಸಾಯಿ ಸುದರ್ಶನ್, ರಿಂಕು ಸಿಂಗ್, ಮತ್ತು ರಜಿತ್ ಪಾಟಿದಾರ್ ಅವರು ಏಕದಿನ ಸ್ವರೂಪದಲ್ಲಿ ತಮ್ಮ ಚೊಚ್ಚಲ ಪ್ರವೇಶ ಪಡೆಯುವ ಕನಸಿನಲ್ಲಿದ್ದಾರೆ. ಮೂರು ಏಕದಿನ ಪಂದ್ಯಗಳು ಡಿಸೆಂಬರ್ 17, 19 ಮತ್ತು 21 ರಂದು ನಡೆಯಲಿವೆ. ಹಾಗಿದ್ದರೆ, ಏಕದಿನ ವಿಶ್ವಕಪ್ ತಂಡದಲ್ಲಿದ್ದವರು, ಈಗ ಆಯ್ಕೆಯಾದವರು ಯಾರು?

ಯಾರು ಇನ್, ಯಾರು ಔಟ್?

ಇನ್- ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್, ಅವೇಶ್ ಖಾನ್, ಅರ್ಷ್​ದೀಪ್ ಸಿಂಗ್, ದೀಪಕ್ ಚಹರ್.

ಔಟ್ - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್.

ದಕ್ಷಿಣ ಆಫ್ರಿಕಾದ ಏಕದಿನ ಸರಣಿಗೆ ಭಾರತ ತಂಡ

ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷ್​ದೀಪ್ ಸಿಂಗ್, ದೀಪಕ್ ಚಹರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ