ಸೌತ್ ಆಫ್ರಿಕಾ ಎದುರಿನ ಟೆಸ್ಟ್​, ಏಕದಿನ, ಟಿ20ಗೆ ಭಾರತ ತಂಡ ಪ್ರಕಟ; ಮೂವರು ನಾಯಕರು, ಕೊಹ್ಲಿ-ರೋಹಿತ್​ಗೆ ರೆಸ್ಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸೌತ್ ಆಫ್ರಿಕಾ ಎದುರಿನ ಟೆಸ್ಟ್​, ಏಕದಿನ, ಟಿ20ಗೆ ಭಾರತ ತಂಡ ಪ್ರಕಟ; ಮೂವರು ನಾಯಕರು, ಕೊಹ್ಲಿ-ರೋಹಿತ್​ಗೆ ರೆಸ್ಟ್

ಸೌತ್ ಆಫ್ರಿಕಾ ಎದುರಿನ ಟೆಸ್ಟ್​, ಏಕದಿನ, ಟಿ20ಗೆ ಭಾರತ ತಂಡ ಪ್ರಕಟ; ಮೂವರು ನಾಯಕರು, ಕೊಹ್ಲಿ-ರೋಹಿತ್​ಗೆ ರೆಸ್ಟ್

India Squad For South Africa Tour: ಏಕಕಾಲಕ್ಕೆ ಟೆಸ್ಟ್, ಏಕದಿನ, ಟಿ20 ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೂರು ಸ್ವರೂಪದ ಸರಣಿಗಳಿಗೂ ಮೂವರು ನಾಯಕರನ್ನು ಆಯ್ಕೆ ಮಾಡಲಾಗಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.

ಡಿಸೆಂಬರ್​ 10ರಿಂದ ಶುರುವಾಗುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಏಕಕಾಲಕ್ಕೆ ಟೆಸ್ಟ್​, ಏಕದಿನ, ಟಿ20ಗೆ ತಂಡವನ್ನು ಆಯ್ಕೆ ಮಾಡಲಾಗಿದ್ದು, ಮೂರು ಫಾರ್ಮೆಟ್​ಗೂ ಮೂವರು ನಾಯಕರೊಂದಿಗೆ ತಂಡವನ್ನು ಘೋಷಿಸಲಾಗಿದೆ.

ಗುರುವಾರ ನವದೆಹಲಿಯಲ್ಲಿ ಬಿಸಿಸಿಐ ಸೆಲೆಕ್ಷನ್ ಕಮಿಟಿ ಸಭೆ ಸೇರಿದ ನಂತರ ಈ ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರವಾಸದಲ್ಲಿ ಭಾರತ ಎ ದಕ್ಷಿಣ ಆಫ್ರಿಕಾ ಎ ವಿರುದ್ಧ 2 ನಾಲ್ಕು ದಿನಗಳ ಪಂದ್ಯಗಳನ್ನು ಮತ್ತು ಒಂದು ಅಂತರ-ಸೇನಾ ಮೂರು ದಿನಗಳ ಪಂದ್ಯವನ್ನೂ ಆಡಲಿದೆ.

ಕೆಲವು ಅಚ್ಚರಿ ಆಯ್ಕೆ

ಟೆಸ್ಟ್​​​ಗೆ ರೋಹಿತ್​ ಶರ್ಮಾ, ಏಕದಿನಕ್ಕೆ ಕೆಎಲ್ ರಾಹುಲ್ ಮತ್ತು ಟಿ20ಗೆ ಸೂರ್ಯಕುಮಾರ್ ನಾಯಕನಾಗಿದ್ದಾರೆ. ಅಜಿಂಕ್ಯ ರಹಾನೆಯನ್ನು ಟೆಸ್ಟ್ ತಂಡದಿಂದ ಡ್ರಾಪ್ ಮಾಡಲಾಗಿದೆ. ಋತುರಾಜ್ ಗಾಯಕ್ವಾಡ್​, ಮುಕೇಶ್​ ಕುಮಾರ್ 3 ಫಾರ್ಮೆಟ್​ಗೂ ಆಯ್ಕೆಯಾಗಿದ್ದಾರೆ.

ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಲ್ ಮತ್ತೆ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಸಾಯಿ ಸುದರ್ಶನ್, ರಜತ್ ಪಟಿದಾರ್, ರಿಂಕು ಸಿಂಗ್ ಸಹ ಒಡಿಐ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ವೈಟ್​ ಬಾಲ್ ಸರಣಿಗೆ ಕೊಹ್ಲಿ-ರೋಹಿತ್​ಗೆ ವಿಶ್ರಾಂತಿ

ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಸಿರೀಸ್​​ನಿಂದ ವಿಶ್ರಾಂತಿ ಪಡೆದಿದ್ದಾರೆ. ಆದರೆ ಟೆಸ್ಟ್ ಸರಣಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಮೊಹಮ್ಮದ್ ಶಮಿ ಸದ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಅವರ ಲಭ್ಯತೆಯು ಫಿಟ್ನೆಸ್‌ ಮೇಲೆ ಒಳಪಟ್ಟಿರುತ್ತದೆ.

ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ​ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಕೇಶ್ ಕುಮಾರ್, ಮೊಹಮ್ಮದ್ ಶಮಿ*, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ

ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್, ಅವೇಶ್ ಖಾನ್, ಆರ್ಷ್​ದೀಪ್ ಸಿಂಗ್, ದೀಪಕ್ ಚಹರ್.

3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ

ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ದೀಪಕ್ ಚಹರ್.

ಭಾರತ - ದಕ್ಷಿಣ ಆಫ್ರಿಕಾ ನಡುವಿನ ಸರಣಿಗಳ ವೇಳಾಪಟ್ಟಿ
ದಿನದಿನಾಂಕಪಂದ್ಯಗಳುಸ್ಥಳ
ಭಾನುವಾರಡಿಸೆಂಬರ್ 10, 2023ಮೊದಲ ಟಿ20ಡರ್ಬನ್
ಮಂಗಳವಾರಡಿಸೆಂಬರ್ 12, 2023ಎರಡನೇ ಟಿ20ಗ್ಕೆಬರ್ಹಾ
ಗುರುವಾರಡಿಸೆಂಬರ್ 14, 2023ಮೂರನೇ ಟಿ20ಜೋಹಾನ್ಸ್‌ಬರ್ಗ್
ಭಾನುವಾರಡಿಸೆಂಬರ್ 17, 2023ಮೊದಲ ಏಕದಿನಜೋಹಾನ್ಸ್‌ಬರ್ಗ್
ಮಂಗಳವಾರಡಿಸೆಂಬರ್ 19, 2023ಎರಡನೇ ಏಕದಿನಗ್ಕೆಬರ್ಹಾ
ಗುರುವಾರಡಿಸೆಂಬರ್ 21, 2023ಮೂರನೇ ಏಕದಿನಪಾರ್ಲ್
ಮಂಗಳವಾರಡಿ. 26 ರಿಂದ ಡಿ. 30, 2023ಮೊದಲ ಟೆಸ್ಟ್ಸೆಂಚುರಿಯನ್
ಬುಧವಾರಜ.3ರಿಂದ ಜ.07, 2024ಎರಡನೇ ಟೆಸ್ಟ್ಕೇಪ್ ಟೌನ್

Whats_app_banner