logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ 2 ವಿಕೆಟ್‌ಗೆ 450 ರನ್, ಭಾರತ 65ಕ್ಕೆ ಆಲೌಟ್; ಮಿಚೆಲ್ ಮಾರ್ಷ್ ವಿಶ್ವಕಪ್ ಫೈನಲ್ ಭವಿಷ್ಯ ಭ್ರಮೆ ಎಂದ ಟೀಂ ಇಂಡಿಯಾ ಫ್ಯಾನ್ಸ್

ಆಸ್ಟ್ರೇಲಿಯಾ 2 ವಿಕೆಟ್‌ಗೆ 450 ರನ್, ಭಾರತ 65ಕ್ಕೆ ಆಲೌಟ್; ಮಿಚೆಲ್ ಮಾರ್ಷ್ ವಿಶ್ವಕಪ್ ಫೈನಲ್ ಭವಿಷ್ಯ ಭ್ರಮೆ ಎಂದ ಟೀಂ ಇಂಡಿಯಾ ಫ್ಯಾನ್ಸ್

Raghavendra M Y HT Kannada

Nov 17, 2023 08:36 PM IST

google News

ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಮಿಚೆಲ್ ಮಾರ್ಷ್

  • ಏಕದಿನ ವಿಶ್ವಕಪ್ ಫೈನಲ್ ಬಗ್ಗೆ ಮಿಚೆಲ್ ಮಾರ್ಷ್ ನುಡಿದಿದ್ದ ಭವಿಷ್ಯ ವೈರಲ್ ಆಗಿದೆ. ಆದರೆ ಇಂಥ ಫಲಿತಾಂಶದ ಭವಿಷ್ಯ ಭ್ರಮೆ ಎಂದು ಟೀಂ ಇಂಡಿಯಾ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಮಿಚೆಲ್ ಮಾರ್ಷ್
ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಮಿಚೆಲ್ ಮಾರ್ಷ್ (ANI)

ಬೆಂಗಳೂರು: ಕೋಲ್ಕತ್ತದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 2ನೇ ಸೆಮಿ ಫೈನಲ್‌ನಲ್ಲಿ (ODI World Cup Semi Final) ದಕ್ಷಿಣ ಆಫ್ರಿಕಾ (South Africa) ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ (Australia) ಎರಡನೇ ತಂಡವಾಗಿ ಫೈನಲ್ (World Cup Final) ಪ್ರವೇಶಿಸಿದೆ. ಆಸೀಸ್ 8ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ನವೆಂಬರ್ 16 (ಗುರುವಾರ) ಈ ಮಹತ್ವದ ಪಂದ್ಯ ನಡೆದಿತ್ತು.

ಇದೇ ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಟೀಂ ಇಂಡಿಯಾ (Team India) ವಿರುದ್ಧ ಆಸ್ಟ್ರೇಲಿಯಾ ಫೈನಲ್ ಪಂದ್ಯವನ್ನು ಆಡಲಿದೆ. ಇದರ ನಡುವೆ ಆಸೀಸ್‌ನ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಅವರ ಭವಿಷ್ಯವಾಣಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

6 ತಿಂಗಳ ಹಿಂದಿನ ಭವಿಷ್ಯವಾಣಿ ಬಗ್ಗೆ ಭಾರಿ ಚರ್ಚೆ

ಆರು ತಿಂಗಳ ಹಿಂದೆ ಮಾರ್ಷ್ ಮಾತನಾಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಮೆಚೆಲ್ ಮಾರ್ಷ್ ಆ ತಂಡದ ಪಾಡ್‌ಕಾಸ್ಟ್‌ನಲ್ಲಿ ಕ್ರಿಕೆಟ್ ವಿಶ್ವಕಪ್ ಭವಿಷ್ಯ ಬಗ್ಗೆ ಭವಿಷ್ಯ ನುಡಿದಿದ್ದರು.

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಜೇಯವಾಗಿ ಉಳಿಯಲಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ ಪ್ರವೇಶಿಸಲಿವೆ. ಅಷ್ಟೇ ಅಲ್ಲ ಫೈನಲ್‌ನಲ್ಲಿ ಆಸೀಸ್ 2 ವಿಕೆಟ್‌ಗೆ 450 ರನ್ ಗಳಿಸಲಿದೆ. ಇದಕ್ಕೆ ಪ್ರತಿಯಾಗಿ ಭಾರತ 65 ರನ್‌ಗಳಿಗೆ ಆಲೌಟ್ ಆಗಲಿದೆ ಎಂದು ಹೇಳಿದ್ದಾರೆ.

2023ರ ಐಪಿಎಲ್‌ ವೇಳೆ ಮಾರ್ಷ್ ಇಂತಹ ಭವಿಷ್ಯ ನುಡಿದ್ದರು. ಸದ್ಯ ಮಾರ್ಷ್ ಅವರು ಹೇಳಿದಂತೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ ಪ್ರವೇಶಿಸಿವೆ. ಆದರೆ ಇದರಲ್ಲಿ ಆಸ್ಟ್ರೇಲಿಯಾ ಅಜೇಯವಾಗಿಲ್ಲ. ಎದ್ದು ಬಿದ್ದು ಫೈನಲ್ ಪ್ರವೇಶಿಸಿದೆ. ಗ್ರೂಪ್ ಹಂತದಲ್ಲಿ ಆಸೀಸ್ 9 ಪಂದ್ಯಗಳ ಪೈಕಿ ಎರಡಲ್ಲಿ ಸೋತು 7 ಪಂದ್ಯಗಳಲ್ಲಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿತ್ತು.

ನಂತರ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ಆರಂಭದಲ್ಲಿ ಎರಡು ಪಂದ್ಯಗಳನ್ನು ಸೋಲು ಅನುಭವಿಸಿದ್ದರ ಟೀಂ ಇಂಡಿಯಾ ಆಡಿದ 9 ಪಂದ್ಯಗಳಿಗೆ 9 ರಲ್ಲೂ ಗೆದ್ದು ಸೆಮಿ ಫೈನಲ್ ಪ್ರವೇಶಿಸಿತ್ತು. ನ್ಯೂಜಿಲೆಂಡ್ ವಿರುದ್ದದ ಸೆಮಿ ಫೈನಲ್‌ನಲ್ಲಿ 70 ರನ್‌ಗಳಿಂದ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದೆ.

ಮಿಚೆಲ್ ಮಾರ್ಷ್ ಹೇಳಿಕೆಗೆ ಟೀಂ ಇಂಡಿಯಾ ಫ್ಯಾನ್ಸ್ ತಿರುಗೇಟು

ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 450 ರನ್ ಬಾರಿಸುತ್ತೆ, ಇದಕ್ಕೆ ಪ್ರತಿಯಾಗಿ ಭಾರತ 65ಕ್ಕೆ ಆಲೌಟ್ ಆಗುತ್ತೆ ಎಂಬ ಮಿಚೆಲ್ ಮಾರ್ಷ್ ಅವರ ಭವಿಷ್ಯವಾಣಿ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಮಾರ್ಷ ಭವಿಷ್ಯ ಭ್ರಮೆಯಷ್ಟೇ ಎಂದು ತಿರುಗೇಟು ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ