logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗುರ್ಬಾಜ್ ಭರ್ಜರಿ ಶತಕ ವ್ಯರ್ಥ; ಅಫ್ಘನ್ ವಿರುದ್ಧ ಪಾಕಿಸ್ತಾನಕ್ಕೆ 1 ವಿಕೆಟ್ ರೋಚಕ ಗೆಲುವು

ಗುರ್ಬಾಜ್ ಭರ್ಜರಿ ಶತಕ ವ್ಯರ್ಥ; ಅಫ್ಘನ್ ವಿರುದ್ಧ ಪಾಕಿಸ್ತಾನಕ್ಕೆ 1 ವಿಕೆಟ್ ರೋಚಕ ಗೆಲುವು

Prasanna Kumar P N HT Kannada

Aug 26, 2023 02:09 PM IST

google News

ಅಫ್ಘನ್​ ವಿರುದ್ಧ ಪಾಕಿಸ್ತಾನಕ್ಕೆ ಜಯ.

  • Afghanistan vs Pakistan: ಅಫ್ಘಾನಿಸ್ತಾನ ಎದುರಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್​ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಏಷ್ಯಾಕಪ್ ಟೂರ್ನಿಗೂ ಮುನ್ನ ಸಿದ್ಧತೆ ಆರಂಭಿಸಿದೆ.

ಅಫ್ಘನ್​ ವಿರುದ್ಧ ಪಾಕಿಸ್ತಾನಕ್ಕೆ ಜಯ.
ಅಫ್ಘನ್​ ವಿರುದ್ಧ ಪಾಕಿಸ್ತಾನಕ್ಕೆ ಜಯ.

ರೆಹಮಾನುಲ್ಲಾ ಗುರ್ಬಾಜ್​ ಅಮೋಘ ಶತಕದಾಟದ ಹೊರತಾಗಿಯೂ ಅಫ್ಘಾನಿಸ್ತಾನ ಎದುರು ಎರಡನೇ ಏಕದಿನ ಪಂದ್ಯವನ್ನೂ ಪಾಕಿಸ್ತಾನ ಗೆದ್ದುಕೊಂಡಿದೆ. ಶ್ರೀಲಂಕಾದ ಹಂಬಂತೋಟದ ಮಹಿಂದಾ ರಾಜಪಕ್ಸೆ, ಅಂತಾರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ಜರುಗಿತು. ರೋಚಕ ಹಣಾಹಣಿಯಲ್ಲಿ ಬಾಬರ್ ಅಜಮ್ ಪಡೆ, 1 ವಿಕೆಟ್​​​ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಪಾಕಿಸ್ತಾನ ಕೈ ವಶ ಮಾಡಿಕೊಂಡಿದೆ. ಆ ಮೂಲಕ ಏಷ್ಯಾಕಪ್ ಟೂರ್ನಿಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ, ಅದ್ಭುತ ಆರಂಭ ಪಡೆಯಿತು. ಪಾಕಿಸ್ತಾನದ ಬೌಲರ್​ಗಳಿಗೆ ಬೆರಳಿಸಿತು. ಓಪನರ್​ಗಳಾಗಿ ಕಣಕ್ಕಿಳಿದ ಗುರ್ಬಾಜ್​-ಇಬ್ರಾಹಿಂ ಜದ್ರಾನ್​​, ಪಾಕ್ ಬೌಲರ್​​​​ಗಳಿಗೆ ಬೆಂಡೆತ್ತಿದರು. ಪರಿಣಾಮ ಮೊದಲ ವಿಕೆಟ್​​ಗೆ ಮೊದಲ ವಿಕೆಟ್​​ಗೆ ದಾಖಲೆಯ 227 ರನ್​ಗಳ ಜೊತೆಯಾಟ ಹರಿದು ಬಂತು. ಒಂದೆಡೆ ವಿಕೆಟ್ ಪಡೆಯಲು ಬಾಬರ್ ಪಡೆ ಬೌಲರ್​ಗಳು ಹರಸಾಹಸಪಟ್ಟರು. ಆದರೆ ಮೊದಲ ಪಂದ್ಯದಲ್ಲಿ ನೀಡಿದ್ದ ಹೀನಾಯ ಪ್ರದರ್ಶನದಿಂದ ಹೊರ ಬಂದು ಹಿಗ್ಗಾಮುಗ್ಗಾ ಜಾಡಿಸಿದರು.

ಗುರ್ಬಾಜ್​ ದಾಖಲೆಯ ಶತಕ, ಜದ್ರಾನ್ ಅರ್ಧಶತಕ

ವಿಕೆಟ್​ ಕೀಪರ್ ರೆಹಮಾನುಲ್ಲಾ ಗುರ್ಬಾಜ್ ದಾಖಲೆಯ ಶತಕ ಸಿಡಿಸಿದರು. ವಿಕೆಟ್ ಕೀಪರ್​ ಆಗಿ ಎಂಎಸ್ ಧೋನಿ ದಾಖಲೆ ಮುರಿದರು. 122 ಎಸೆತಗಳಲ್ಲಿ ಶತಕ ತಲುಪಿದ ಗುರ್ಬಾಜ್, 151 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್​​​ ಸಹಾಯದಿಂದ 151 ರನ್ ಗಳಿಸಿದರು. ಪಾಕ್ ವಿರುದ್ಧ ವಿಕೆಟ್​ ಕೀಪರ್​​ವೊಬ್ಬರು ಗಳಿಸಿದ ಅಧಿಕ ಮೊತ್ತ ಇದೇ ಆಗಿದೆ. ಈ ಹಿಂದೆ ಧೋನಿ 148 ರನ್ ಗಳಿಸಿದರು. ಮತ್ತೊಂದೆಡೆ, 101 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರು. ಆದರೆ ತಂಡದ ಮೊತ್ತ 256 ಆಗಿದ್ದಾಗ ತಂಡವು ಆರಂಭಿಕರನ್ನು ಕಳೆದುಕೊಂಡಿತು.

ಆದರೆ ಬಳಿಕ ಕಣಕ್ಕಿಳಿದ ಆಟಗಾರರಿಂದ ಉತ್ತಮ ನೆರವು ಸಿಗಲಿಲ್ಲ. ಮೊಹಮ್ಮದ್ ನಬಿ 29, ರಶೀದ್ ಖಾನ್ 2, ಶಾಹೀದ್ದುಲ್ಲಾ 1, ನಾಯಕ ಶಾಹಿದಿ ಅವರು ಅಜೇಯ 15 ರನ್ ಮತ್ತು ಅಬ್ದುಲ್ ರೆಹಮಾನ್ ಅಜೇಯ 4 ರನ್ ಗಳಿಸಷ್ಟೇ ಶಕ್ತರಾದರು. ಆರಂಭಿಕರ ಅದ್ಭುತ ಆಟದ ಪರಿಣಾಮ ಅಫ್ಘನ್, ತನ್ನ ಪಾಲಿನ 50 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದರು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 2 ವಿಕೆಟ್, ನಸೀಮ್ ಶಾ, ಉಸಾಮ ಮಿರ್​ ತಲಾ 1 ವಿಕೆಟ್ ಕಬಳಿಸಿ ಮಿಂಚಿದರು.

ಮಧ್ಯಮ ಕ್ರಮಾಂಕ ದಿಢೀರ್ ಕುಸಿತ

ಸವಾಲಿನ ಗುರಿ ಬೆನ್ನತ್ತಿದ ಪಾಕ್ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿತು. ಆದರೆ, 49.5ನೇ ಓವರ್​​​ನಲ್ಲಿ ಪಾಕಿಸ್ತಾನ ತಂಡವು ರೋಚಕ ಗೆಲುವು ಸಾಧಿಸಿತು. ಮೊದಲ ವಿಕೆಟ್​ಗೆ ಅರ್ಧಶತಕ, ಎರಡನೇ ವಿಕೆಟ್​ಗೆ ಶತಕದ ಜೊತೆಯಾಟ ಹರಿದು ಬಂತು. ಫಕಾರ್ ಜಮಾನ್ 30 ರನ್ ಗಳಿಸಿ ಫಜಲ್​​ಹಕ್ ಫಾರೂಕಿ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಇಮಾಮ್ ಉಲ್ ಹಕ್ 91 ರನ್ ಗಳಿಸಿ ಶತಕ ವಂಚಿತರಾದರೆ, ಬಾಬರ್ 53 ರನ್ ಗಳಿಸಿ ಜಾಗ ಖಾಲಿ ಮಾಡಿದರು.

ಅಗ್ರ ಮೂವರು ಔಟಾದ ಬಳಿಕ ಮಧ್ಯಮ ಕ್ರಮಾಂಕದ ದಿಢೀರ್​ ಕುಸಿತ ಕಂಡಿತು. ಆಫ್ಘನ್ ಬೌಲರ್​​ಗಳು ಬಿಗಿ ಬೌಲಿಂಗ್ ದಾಳಿ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೊಹಮ್ಮದ್ ರಿಜ್ವಾನ್ 2 ರನ್, ಆಘಾ ಸಲ್ಮಾನ್ 14 ರನ್, ಉಸಾಮ ಮಿರ್ 0 ರನ್, ಶಾಹೀನ್ ಅಫ್ರಿದಿ 4 ರನ್ ಗಳಿಸಿದರು. ಆಲ್​ರೌಂಡರ್​ ಶದಾಬ್ ಖಾನ್ ಹೋರಾಡಿದರು. ಮಾರಕ ದಾಳಿಯನ್ನು ಮೆಟ್ಟಿ ನಿಂತರು. ಸತತ ವಿಕೆಟ್​ಗಳ ನಡುವೆ ತಾಳ್ಮೆ, ಜವಾಬ್ದಾರಿಯುತ ಆಟದ ನೆರವಿನಿಂದ ಅಫ್ಘನ್ ಗೆಲುವನ್ನು ಕಸಿದುಕೊಂಡರು. 49ನೇ ಓವರ್​​​ನ ಕೊನೆ ಎಸೆತದಲ್ಲಿ ಶಾದಾಬ್ ಔಟಾದರು. 35 ಎಸೆತಗಳಲ್ಲಿ 48 ರನ್​ ಚಚ್ಚಿದರು.

ಕೊನೆಯ ಓವರ್​​ನಲ್ಲಿ ಪಾಕಿಸ್ತಾನಕ್ಕೆ 6 ರನ್​ಗಳ ಅಗತ್ಯ ಇತ್ತು. ಶಾಹೀನ್ ಅಫ್ರಿದಿ ನಸೀಮ್ ಶಾ ಇಬ್ಬರೇ ಕ್ರೀಸ್​​ನಲ್ಲಿದ್ದರು. ಫಜಲಕ್ ಫಾರೂಕಿ ಬೌಲಿಂಗ್​ನ 49.5ನೇ ಎಸೆತದಲ್ಲಿ ನಸೀಮ್ ಶಾ, ಬೌಂಡರಿ ಸಿಡಿಸಿ ಗಮನ ಎದುರಾಳಿಯ ಗೆಲುವನ್ನು ಕಿತ್ತುಕೊಂಡರು. ಅಲ್ಲದೆ, ಸರಣಿಯನ್ನು ವಶಪಡಿಸಿಕೊಂಡರು. ಸದ್ಯ 3ನೇ ಏಕದಿನ ಪಂದ್ಯವು ಆಗಸ್ಟ್​ 26ರಂದು ಆರ್​​ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯವು ಔಪಚಾರಿಕ ಎನಿಸಿದೆ. ಅಲ್ಲದೆ, ಏಷ್ಯಾಕಪ್, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ