logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

Prasanna Kumar P N HT Kannada

Dec 22, 2024 04:42 PM IST

google News

ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

    • Prithvi Shaw Angry: ಮುಂಬೈ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ಟೀಕಿಸಿದ್ದಕ್ಕೆ ನಿರಾಸೆಗೊಂಡಿರುವ ಪೃಥ್ವಿ ಶಾ ಅವರು ಸೋಷಿಯಲ್ ಮೀಡಿಯಾದಲ್ಲಿ ಕೋಪವನ್ನು ಹೊರಹಾಕಿದ್ದಾರೆ.
ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು
ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು

ಕಳೆದ ಕೆಲವು ವಾರಗಳಿಂದ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ಸುದ್ದಿಯಲ್ಲಿರುವ ಮುಂಬೈ ಬ್ಯಾಟರ್​​ ಪೃಥ್ವಿ ಶಾ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಭಾರತ ತಂಡದಿಂದ ಹೊರಗಿಡಲು ಇದೇ ಪ್ರಮುಖ ಕಾರಣ ಎಂದು ಕ್ರಿಕೆಟ್ ಪ್ರೇಮಿಗಳು, ಮಾಜಿ ಕ್ರಿಕೆಟರ್​ಗಳು ಭಾವಿಸುತ್ತಿದ್ದಾರೆ. ಇತ್ತೀಚೆಗೆ ಪ್ರಕಟವಾದ ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡದಲ್ಲೂ ಪೃಥ್ವಿ ಸ್ಥಾನ ಪಡೆದಿಲ್ಲ. ತಂಡ ಘೋಷಿಸಿದ ವೇಳೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದ್ದು, ಫಿಟ್ನೆಸ್​ ಬಗ್ಗೆ ಟೀಕಿಸಿತ್ತು. ಇದೀಗ ಎಂಸಿಎಗೆ ಪೃಥ್ವಿ ಶಾ ತಿರುಗೇಟು ನೀಡಿದ್ದಾರೆ.

ಮುಂಬೈ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಮತ್ತು ಎಂಸಿಎ ಟೀಕಿಸಿದ್ದಕ್ಕೆ ನಿರಾಸೆಗೊಂಡಿರುವ ಪೃಥ್ವಿ ಶಾ ಅವರು ಸೋಷಿಯಲ್ ಮೀಡಿಯಾದಲ್ಲಿ ಕೋಪವನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿದ್ದ ಮುಂಬೈ ತಂಡದ ಭಾಗವಾಗಿದ್ದ ಪೃಥ್ವಿ ಶಾ ಅವರನ್ನು ವಿಜಯ್ ಹಜಾರೆ ಟ್ರೋಫಿಗೆ ಆಯ್ಕೆ ಮಾಡದಿರಲು ಕಾರಣವೇನು ಏನೆಂಬುದನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿತ್ತು. ಎಂಸಿಎ ಪೃಥ್ವಿ ಶಾ ಅವರ ಫಿಟ್ನೆಸ್ ಅನ್ನೇ ಗುರಿಯಾಗಿಸಿಕೊಂಡು ಕಟು ಟೀಕೆ ಮಾಡಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಿಟ್ನೆಸ್​ ಇಲ್ಲ, ಅಶಿಸ್ತು, ರಾತ್ರಿ ವೇಳೆ ಪಾರ್ಟಿಗಳು, ಬೆಳಿಗ್ಗೆ ಅಭ್ಯಾಸಕ್ಕೆ ಬರುತ್ತಿರಲಿಲ್ಲ ಎಂದೆಲ್ಲಾ ಹೇಳಿತ್ತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾವು 10 ಫೀಲ್ಡರ್​​ಗಳೊಂದಿಗೆ ಆಡುತ್ತಿದ್ದೆವು. ಏಕೆಂದರೆ ಪೃಥ್ವಿ ಶಾ ಬಳಿ ಚೆಂಡು ಹೋದರೂ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಫೀಲ್ಡಿಂಗ್​​ನಲ್ಲಿ ಅವರು ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಹೇಳಿದ್ದರು. ಬ್ಯಾಟಿಂಗ್ ಮಾಡುವಾಗಲೂ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಅವರ ಫಿಟ್ನೆಸ್, ಶಿಸ್ತು ಮತ್ತು ವರ್ತನೆ ಕಳಪೆಯಾಗಿದೆ ಮತ್ತು ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು ಇರಲು ಸಾಧ್ಯವಿಲ್ಲ. ತಂಡದ ಹಿರಿಯ ಆಟಗಾರರು ಸಹ ಅವರ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು.

'ಅರ್ಧಂಬರ್ಧ ತಿಳಿದು ಮಾತನಾಡಬೇಡಿ'

ಇದೇ ವೇಳೆ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಪೃಥ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ. ಅಧಿಕಾರಿಯ ಹೇಳಿಕೆ ವೈರಲ್ ಆದ ನಂತರ, ಶಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, "ನೀವು ಅದನ್ನು ಸಂಪೂರ್ಣ ಅರ್ಥವಾಗದೇ ಇದ್ದರೆ ಅದರ ಬಗ್ಗೆ ಮಾತನಾಡಲು ಬರಬೇಡಿ. ಅನೇಕರು ಅರ್ಧದಷ್ಟು ಸತ್ಯ ತಿಳಿದು ಪೂರ್ಣ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಾನು ಇನ್ನೇನು ಮಾಡಬೇಕು ಎಂದಿದ್ದ ಪೃಥ್ವಿ

ತಂಡದಿಂದ ಕೈಬಿಟ್ಟಿದ್ದಕ್ಕೂ ಪೋಸ್ಟ್ ಹಾಕಿದ್ದ ಪೃಥ್ವಿ ಕಿಡಿಕಾರಿದ್ದರು. ಹೇಳು ದೇವರೇ, ನಾನು ಇನ್ನೂ ಏನೇನು ನೋಡಬೇಕು. 65 ಇನ್ನಿಂಗ್ಸ್‌ಗಳು, 55.7ರ ಬ್ಯಾಟಿಂಗ್ ಸರಾಸರಿಯಲ್ಲಿ 3399 ರನ್‌ ಗಳಿಸಿದ್ದೇನೆ. 126 ಸ್ಟ್ರೈಕ್ ರೇಟ್‌ನೊಂದಿಗೆ ನಾನು ಸಾಕಷ್ಟು ಉತ್ತಮವಾಗಿಲ್ಲ. ಆದರೆ, ನಾನು ನಿಮ್ಮ ಮೇಲೆ ನನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಜನರು ಇನ್ನೂ ನನ್ನನ್ನು ನಂಬುತ್ತಾರೆ ಎಂದು ಆಶಿಸುತ್ತೇವೆ. ಏಕೆಂದರೆ ನಾನು ಖಚಿತವಾಗಿ ಹಿಂತಿರುಗುತ್ತೇನೆ. ಓಂ ಸಾಯಿ ರಾಮ್ ಎಂದು ತಂಡದಿಂದ ಕೈಬಿಟ್ಟ ಬಳಿಕ ಈ ಪೋಸ್ಟ್​ ಹಾಕಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ