logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ; ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್, ಬಿಳಿ ಗಡ್ಡ ಕಂಡು ಅಚ್ಚರಿ

ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ; ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್, ಬಿಳಿ ಗಡ್ಡ ಕಂಡು ಅಚ್ಚರಿ

Jayaraj HT Kannada

Mar 17, 2024 12:34 PM IST

google News

ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

    • Virat Kohli: ಮಗ ಅಕಾಯ್ ಜನಿಸಿದ ನಂತರ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ
ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

ಕೊನೆಗೂ ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ (Virat Kohli) ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ದೂರದ ಲಂಡನ್‌ನಲ್ಲಿ ವಿರುಷ್ಕಾ ದಂಪತಿ ಗಂಡು ಮಗು ಅಕಾಯ್‌ಗೆ ಜನ್ಮ ನೀಡಿದ ನಂತರ, ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಟೀಮ್‌ ಇಂಡಿಯಾದ ಮಾಜಿ ನಾಯಕ, ಮುಂದೆ ನಡೆಯಲಿರುವ ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕೊನೆಗೂ ತವರು ನೆರದಲ್ಲಿ ಭಾರತೀಯ ಬಾಟಗಾರನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಐಪಿಎಲ್‌ ಪಂದ್ಯಾವಳಿಯು ಮಾರ್ಚ್‌ 22 ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕೊಹ್ಲಿ ಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತರಬೇತಿ ಶಿಬಿರದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಆರ್‌ಸಿಬಿ ತಂಡವು ಮಾರ್ಚ್ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಅದಕ್ಕೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ. ಹತ್ತು ಹಲವು ಸರ್‌ಪ್ರೈಸ್‌ ನಿರೀಕ್ಷೆಯಿರುವ ಕಾರ್ಯಕ್ರಮದಲ್ಲಿ ವಿರಾಟ್‌ ಕೊಹ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಸದ್ಯ ಮಿಲಿಯನ್‌ ಡಾಲರ್‌ ಟೂರ್ನಿಯ ಆರಂಭಕ್ಕೂ ಮುನ್ನ ವೈರಲ್ ಭಯಾನಿ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ, ವಿರಾಟ್‌ ಕೊಹ್ಲಿ ಅವರನ್ನು ಕಾಣಬಹುದು.

ಇತ್ತೀಚೆಗೆ ಎರಡನೇ ಬಾರಿಗೆ ತಂದೆಯಾದ 35 ವರ್ಷದ ಕೊಹ್ಲಿ, ಇದೇ ಕಾರಣದಿಂದಾಗಿ ಇಂಗ್ಲೆಂಡ್‌ ವಿರುದ್ಧದ ಟಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಅವರೊಂದಿಗೆ ಲಂಡನ್‌ನಲ್ಲಿದ್ದ ಆರ್‌ಸಿಬಿ ಮಾಜಿ ನಾಯಕ, ಫೆಬ್ರವರಿ 20 ರಂದು ತಮ್ಮ ಮಗನ ಜನನದ ಸುದ್ದಿಯನ್ನು ಘೋಷಿಸಿದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದಾರೆ.

ಗಡ್ಡ ಬೆಳ್ಳಗಾಗಿದೆ ಎಂದ ಅಭಿಮಾನಿಗಳು

ಈ ನಡುವೆ ವಿರಾಟ್‌ ಅವರನ್ನು ನೋಡಿದ ಕೆಲವು ಅಭಿಮಾನಿಗಳು, ಅವರ ಗಡ್ಡದ ಕೆಲವು ಕೂದಲು ಬೆಳ್ಳಗಾಗಿರುವುದನ್ನು ಗಮನಿಸಿದ್ದಾರೆ. ಇದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ | ಟಿ20 ವಿಶ್ವಕಪ್‌ ಸೆಮೀಸ್-ಫೈನಲ್‌‌ ಪಂದ್ಯಗಳಿಗೆ ಮೀಸಲು ದಿನ; ಮಳೆಬಾಧಿತ ನಾಕೌಟ್‌ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಕಡ್ಡಾಯ

ಕೊಹ್ಲಿ ಕೊನೆಯ ಬಾರಿಗೆ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು. ಜನವರಿಯ ಬಳಿಕ ಅವರು ಮೈದಾನಕ್ಕಿಳಿದಿಲ್ಲ. ಇದೀಗ ಐಪಿಎಲ್‌ನಲ್ಲೇ ನೇರವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ನಡುವೆ ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲೂ ವಿರಾಟ್‌ ಆಡುವ ಸಾಧ್ಯತೆ ಬಗ್ಗೆ ಭಾರಿ ಗೊಂದಲಗಳಿವೆ. ಹೀಗಾಗಿ ಐಪಿಎಲ್‌ ಪ್ರದರ್ಶನವು ಕೊಹ್ಲಿಗೆ ಅತ್ಯಂತ ನಿರ್ಣಾಯಕವಾಗಿದೆ.

ಇದನ್ನೂ ಓದಿ | Explainer: ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ, ಏನಿದು ಸ್ಟಾಪ್ ಕ್ಲಾಕ್ ರೂಲ್?

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy is first appeared in Hindustan Times Kannada website. To read more Cricket news, please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ