logo
ಕನ್ನಡ ಸುದ್ದಿ  /  ಕ್ರಿಕೆಟ್  /  ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಪ್ಲೇಆಫ್ ರೇಸ್​ನಲ್ಲೂ ಉಳಿಯಬಹುದು

ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಪ್ಲೇಆಫ್ ರೇಸ್​ನಲ್ಲೂ ಉಳಿಯಬಹುದು

Prasanna Kumar P N HT Kannada

May 08, 2024 07:13 PM IST

RCB Playing XI: ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಬಲಿಷ್ಠ ಪ್ಲೇಯಿಂಗ್ XI

    • RCB Playing XI : ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಸಲಿರುವ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ಈ ಮುಂದೆ ನೋಡೋಣ.
RCB Playing XI: ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಬಲಿಷ್ಠ ಪ್ಲೇಯಿಂಗ್ XI
RCB Playing XI: ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಬಲಿಷ್ಠ ಪ್ಲೇಯಿಂಗ್ XI

2024ರ ಐಪಿಎಲ್ (IPL 2024)​ ಲೀಗ್ ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಟೂರ್ನಿಯು ಕೊನೆಯ ಹಂತಕ್ಕೆ ಬಂದು ನಿಂತರೂ ಯಾವೊಂದು ತಂಡವೂ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಲ್ಲ. ಅದರಂತೆ, ತಲಾ ಪಂದ್ಯಗಳಲ್ಲಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Royal challengers Bengaluru vs Punjab Kings) ಸಹ ಪ್ಲೇಆಫ್​​ ರೇಸ್​ನಿಂದ ಇನ್ನೂ ಹೊರಬಿದ್ದಿಲ್ಲ. ಇದೀಗ ಉಭಯ ತಂಡಗಳು ಐಪಿಎಲ್​ನ 58ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ತಮ್ಮ ಪ್ಲೇಆಫ್ ಸ್ಥಾನ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

ಪಂಜಾಬ್ ಮತ್ತು ಆರ್​ಸಿಬಿ ತಂಡಗಳ ನಡುವಿನ ಮಹತ್ವದ ಪಂದ್ಯಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನವು ಆತಿಥ್ಯ ವಹಿಸುತ್ತಿದೆ. ಪ್ಲೇಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಸೋತವರು ಬಹುತೇಕ ಟೂರ್ನಿಯಿಂದ ಹೊರಬೀಳಲಿದ್ದಾರೆ. ಎರಡೂ ತಂಡಗಳು ಆಡಿರುವ 11 ಪಂದ್ಯಗಳಲ್ಲಿ 7 ಸೋಲು, 4 ಗೆದ್ದಿವೆ. ಅಂಕಪಟ್ಟಿಯಲ್ಲಿ ಆರ್​ಸಿಬಿ ಮತ್ತು ಪಿಬಿಕೆಎಸ್ ಕ್ರಮವಾಗಿ 7 ಮತ್ತು 8ರಲ್ಲಿ ಸ್ಥಾನ ಪಡೆದಿವೆ. ಹಾಗಾದರೆ, ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?

ಆರ್​​ಸಿಬಿ ತಂಡದಲ್ಲಿ ಬದಲಾವಣೆ ಅಸಾಧ್ಯ?

ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಹಾಗಾಗಿ ಗೆಲುವಿನ ತಂಡವನ್ನೇ ಕಣಕ್ಕಿಳಿಸಲು ಟೀಮ್ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಆದರೆ ಮಹಿಪಾಲ್ ಲೊಮ್ರೋರ್​​ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಪ್ರಸ್ತುತ ಆರ್​ಸಿಬಿ, ಬೆಂಕಿ ಬಿರುಗಾಳಿ ಫಾರ್ಮ್​​ನಲ್ಲಿದ್ದು, ಎದುರಾಳಿ ತಂಡಗಳನ್ನು ಭಯಬೀಳಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರೆಸಿದರೆ, ಈ ಪಂದ್ಯದಲ್ಲೂ ಜಯ ಸಾಧಿಸುವುದು ಖಚಿತ.

ಈ ಪಂದ್ಯಕ್ಕೆ ಮರಳುತ್ತಾ ಶಿಖರ್​ ಧವನ್?

ನಾಯಕ ಶಿಖರ್ ಧವನ್ ಗಾಯದ ಅನುಪಸ್ಥಿತಿ ಮತ್ತೆ ಕಾಡಲಿದೆ. ಅವರು ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಆದರೆ ಪಿಬಿಕೆಎಸ್​ ರಿಲೀ ರೊಸ್ಸೌವ್ ಅವರನ್ನು ಕೈಬಿಡುವ ನಿರೀಕ್ಷೆ ಇದೆ. ಈ ಪಂದ್ಯಕ್ಕೆ ಲಿಯಾಮ್ ಲಿವಿಂಗ್​ಸ್ಟನ್​ ಅವರನ್ನು ಆಡಿಸುವ ಸಾಧ್ಯತೆ ಇದೆ. ಭಾರತದ ಜೋಡಿಯಾದ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಮತ್ತೊಂದು ಖಡಕ್ ಇನ್ನಿಂಗ್ಸ್ ಕಟ್ಟುವ ಭರವಸೆ ಇದೆ. ಆದರೆ, ರಾಹುಲ್ ಚಹರ್ ಕೊನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಮತ್ತೆ ಅವಕಾಶ ಪಡೆಯಲಿದ್ದಾರೆ.

ಪಿಬಿಕೆಎಸ್ ಸಂಭಾವ್ಯ XI

ಜಾನಿ ಬೈರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್​ಸ್ಟೋನ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ರಾಹುಲ್ ಚಹರ್, ಕಗಿಸೊ ರಬಾಡ,

ಪಿಬಿಕೆಎಸ್ ಇಂಪ್ಯಾಕ್ಟ್ ಪ್ಲೇಯರ್: ಅರ್ಷದೀಪ್ ಸಿಂಗ್

ಆರ್​​ಸಿಬಿ ಸಂಭಾವ್ಯ XI

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್​), ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಕ್.

ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್: ಮಹಿಪಾಲ್ ಲೊಮ್ರೊರ್​.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL, 2024

Live

PBKS

98/1

9.2 Overs

VS

SRH

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ