logo
ಕನ್ನಡ ಸುದ್ದಿ  /  ಕ್ರಿಕೆಟ್  /  U-19 World Cup: ಸಚಿನ್-ಉದಯ್ 215 ರನ್ ಜೊತೆಯಾಟ, ನೇಪಾಳ ವಿರುದ್ಧ ಸುಲಭ ಗೆಲುವು; ಸೆಮಿಫೈನಲ್ ಲಗ್ಗೆ ಇಟ್ಟ ಭಾರತ

U-19 World Cup: ಸಚಿನ್-ಉದಯ್ 215 ರನ್ ಜೊತೆಯಾಟ, ನೇಪಾಳ ವಿರುದ್ಧ ಸುಲಭ ಗೆಲುವು; ಸೆಮಿಫೈನಲ್ ಲಗ್ಗೆ ಇಟ್ಟ ಭಾರತ

Jayaraj HT Kannada

Feb 02, 2024 10:15 PM IST

ನೇಪಾಳ ವಿರುದ್ಧ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ

    • Under 19 World Cup 2024: ನೇಪಾಳ ವಿರುದ್ಧ ಗೆದ್ದ ಭಾರತ ಅಂಡರ್‌ 19 ತಂಡವು, ಸೆಮಿಫೈನಲ್‌ ಪ್ರವೇಶಿಸಿದೆ. ಫೆಬ್ರವರಿ 06ರ ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಉದಯ್‌ ಸಹಾರನ್‌ ನೇತೃತ್ವದ ಭಾರತವು ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೆಮಿ ಕದನದಲ್ಲಿ ಎದುರಿಸಲಿದೆ.
ನೇಪಾಳ ವಿರುದ್ಧ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ
ನೇಪಾಳ ವಿರುದ್ಧ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ

ಅಂಡರ್‌ 19 ವಿಶ್ವಕಪ್‌ನಲ್ಲಿ (ICC Under 19 World Cup 2024) ಭಾರತ ಕಿರಿಯರ ತಂಡವು (India U19 vs Nepal U19) ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಇಟ್ಟಿದೆ. ಗುಂಪು ಹಂತ ಮಾತ್ರವಲ್ಲದೆ ಸೂಪರ್‌ ಸಿಕ್ಸ್‌ ಹಂತದ ಎಲ್ಲಾ ಎರಡು ಪಂದ್ಯಗಳಲ್ಲೂ ಗೆದ್ದು ಅಜೇಯರಾಗಿರುವ ಯುವ ಆಟಗಾರರು, ವಿಶ್ವಕಪ್‌ ಗೆಲುವಿಗೆ ಇನ್ನು ಎರಡೇ ಹೆಜ್ಜೆ ದೂರದಲ್ಲಿದ್ದಾರೆ.‌

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಬ್ಲೋಮ್‌ಫಾಂಟೈನ್‌ನ ಮಂಗೌಂಗ್ ಓವಲ್‌ನಲ್ಲಿ ನಡೆದ ಸೂಪರ್‌ ಸಿಕ್ಸ್‌ ಹಂತದ ಎರಡನೇ ಪಂದ್ಯದಲ್ಲಿ, ನೇಪಾಳ ವಿರುದ್ಧ ಭಾರತವು 132 ರನ್‌ಗಳ ಅಂತರದಿಂದ ಬೃಹತ್‌ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತವು, ಸಚಿನ್‌ ದಾಸ್‌ ಹಾಗೂ ನಾಯಕ ಉದಯ್‌ ಸಹಾರನ್‌ ಶತಕದ ನೆರವಿಂದ 5 ವಿಕೆಟ್‌ ಕಳೆದುಕೊಂಡು 297 ರನ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ನೇಪಾಳವು 9 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿತು.

ಭಾರತ ಅಂಡರ್‌ 19 ತಂಡವು ಫೆಬ್ರವರಿ 06ರ ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತವು, 62 ರನ್‌ ವೇಳೆಗೆ ಅಗ್ರ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬ್ಯಾಟರ್‌ಗಳಾದ ಆದರ್ಶ್ ಸಿಂಗ್ ಮತ್ತು ಅರ್ಶಿನ್ ಕುಲಕರ್ಣಿ ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ತೆರೆಯಲು ಬಂದರು. ಗುಲ್ಶನ್ ಝಾ ಅವರ ಐದನೇ ಓವರ್‌ನಲ್ಲಿ ಆದರ್ಶ್ 21 ರನ್‌ಗಳಿಗೆ ಔಟಾದರು. ಪ್ರಿಯಾಂಶು ಮೊಲಿಯಾ ಮತ್ತು ಅರ್ಶಿನ್ ನಡುವೆ 35 ರನ್‌ಗಳ ಸಣ್ಣ ಜೊತೆಯಾಟ ನಡೆಯಿತು. 19 ರನ್ ಗಳಿಸಿ ಪ್ರಿಯಾಂಶು ರನೌಟ್ ಆದರು. ಅರ್ಶಿನ್‌ ಕುಲ್ಕರ್ಣಿ ಆಟ 18 ರನ್‌ಗಳಿಗೆ ಅಂತ್ಯವಾಯ್ತು.

215 ರನ್‌ ಜೊತೆಯಾಟ

ಈ ವೇಳೆ ಒಂದಾದ ಸಚಿನ್ ದಾಸ್ ಮತ್ತು ನಾಯಕ ಉದಯ್ ಸಹರನ್, ನಾಲ್ಕನೇ ವಿಕೆಟ್‌ಗೆ 215 ರನ್‌ಗಳ ಪ್ರಬುದ್ಧ ಜೊತೆಯಾಟವಾಡಿದರು. ಈ ಜೋಡಿ ತಲಾ ಶತಕದೊಂದಿಗೆ ಭಾರತದ ಮೊತ್ತವನ್ನು ಹಿಗ್ಗಿಸಿದರು. 101 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ ಸಚಿನ್‌ 116 ರನ್‌ ಸಿಡಿಸಿದರು. ಅವರ ಬೆನ್ನಲ್ಲೇ ನಾಯಕ ಉದಯ್ ಕೂಡ ಶತಕ ಸಿಡಿಸಿದರು. 107 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳೊಂದಿಗೆ 100 ಮೂರಂಕಿ ತಲುಪಿದ ಬೆನ್ನಲ್ಲೇ ಗುಲ್ಶನ್ ಎಸೆತದಲ್ಲಿ ಔಟಾದರು.

ಇದನ್ನೂ ಓದಿ | IND vs ENG 2nd Test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ

ನೇಪಾಳದ ಪರ ಬಲಗೈ ಸೀಮರ್ ಗುಲ್ಶನ್ 10 ಓವರ್‌ಗಳಲ್ಲಿ 56 ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ಮತ್ತೊಬ್ಬ ವೇಗಿ ಆಕಾಶ್ ಚಂದ್ 65 ರನ್ ನೀಡಿ ಒಂದು ವಿಕೆಟ್ ಪಡೆದರು.

ಚೇಸಿಂಗ್‌ನಲ್ಲಿ ಎಡವಿದ ನೇಪಾಳ

ಚೇಸಿಂಗ್‌ ನಡೆಸಿ ನೇಪಾಳ ನಿಧಾನಗತಿಯ ಆರಂಭ ಪಡೆದರೂ, ಉತ್ತಮ‌ ಲಯದಲ್ಲಿ ಸಾಗಿತು. ಆರಂಭಿಕರಾದ ದೀಪಕ್‌ 22 ರನ್‌ ಗಳಿಸಿದರೆ, ಅರ್ಜುನ್‌ ಕುಮಾಲ್‌ 26 ರನ್‌ ಕಲೆ ಹಾಕಿದರು. ನಾಯಕ ದೇವ್‌ ಖನಾಲ್‌ 33 ರನ್‌ ಗಳಿಸಿ, ತಂಡದ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾದರು.

ಇದನ್ನೂ ಓದಿ | ಸುಲಭವಾಗಿ ಸ್ಪಿನ್ ಬಲೆಗೆ ಬೀಳುತ್ತಿರುವ ಹಿಟ್‌ಮ್ಯಾನ್; 2020ರಿಂದ ಸ್ಪಿನ್ನರ್‌ಗಳ ಮುಂದೆ ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್

ಒಂದು ಹಂತದಲ್ಲಿ 71 ರನ್‌ ವೇಳೆಗೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡವು, ದಿಢೀರ್‌ ಕುಸಿತ ಕಂಡಿತು. 77 ರನ ವೇಳೆಗೆ 7 ವಿಕೆಟ್‌ ಕಳೆದುಕೊಂಡಿತು. ಡೆತ್‌ ಓವರ್‌ಗಳಲ್ಲಿ ಬೌಲರ್‌ಗಳು ವಿಕೆಟ್‌ ಉಳಿಸಿಕೊಂಡು ತಂಡ ಆಲೌಟ್‌ ಆಗದಂತೆ ನೋಡಿಕೊಂಡರು. ಆಕಾಶ್‌ ಚಂದ್‌ ಮತ್ತು ದುರ್ಗೇಶ್‌ ಗುಪ್ತ ಅಜೇಯ ಆಟವಾಡಿದರು.

(This copy first appeared in Hindustan Times Kannada website. To read more like this please logon to kannada.hindustantime.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ