logo
ಕನ್ನಡ ಸುದ್ದಿ  /  ಕ್ರಿಕೆಟ್  /  ನೇಪಾಳ ವಿರುದ್ಧವೂ ಜಯ; ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್​​ ಪ್ರವೇಶಿಸಿದ ಭಾರತ ತಂಡ

ನೇಪಾಳ ವಿರುದ್ಧವೂ ಜಯ; ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್​​ ಪ್ರವೇಶಿಸಿದ ಭಾರತ ತಂಡ

Prasanna Kumar P N HT Kannada

Jul 23, 2024 11:46 PM IST

google News

ನೇಪಾಳ ವಿರುದ್ಧವೂ ಜಯ; ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್​​ಗೆ ಪ್ರವೇಶಿಸಿದ ಭಾರತ ತಂಡ

    • Womens Asia Cup 2024: ಮಹಿಳಾ ಏಷ್ಯಾಕಪ್​ 2024 ಟೂರ್ನಿಯ ಗುಂಪು ಹಂತದಲ್ಲಿ ನೇಪಾಳ ತಂಡದ ವಿರುದ್ಧ ಟೀಮ್ ಇಂಡಿಯಾ ವನಿತೆಯರು 82 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.
ನೇಪಾಳ ವಿರುದ್ಧವೂ ಜಯ; ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್​​ಗೆ ಪ್ರವೇಶಿಸಿದ ಭಾರತ ತಂಡ
ನೇಪಾಳ ವಿರುದ್ಧವೂ ಜಯ; ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್​​ಗೆ ಪ್ರವೇಶಿಸಿದ ಭಾರತ ತಂಡ

ಸ್ಫೋಟಕ ಬ್ಯಾಟರ್​ ಶಫಾಲಿ ವರ್ಮಾ (81) ಅವರ ಭರ್ಜರಿ ಬ್ಯಾಟಿಂಗ್ ಮತ್ತು ದೀಪ್ತಿ ಶರ್ಮಾ ಅವರ (3/13) ಅದ್ಭುತ ಬೌಲಿಂಗ್​​​ ನೆರವಿನಿಂದ ನೇಪಾಳ ತಂಡದ ವಿರುದ್ಧ ಟೀಮ್ ಇಂಡಿಯಾ 82 ರನ್​ಗಳ ಅಮೋಘ ಗೆಲುವು ಸಾಧಿಸಿದೆ. ರಣಗಿರಿಯ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2024ರ ಮಹಿಳಾ ಏಷ್ಯಾಕಪ್​ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಭಾರತ, ಸೆಮಿಫೈನಲ್ ಪ್ರವೇಶಿಸಿತು.

ಏಷ್ಯಾಕಪ್​​ನ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಲೀಗ್ ಹಂತದಲ್ಲಿ ಪಾಕಿಸ್ತಾನ ಎದುರು 7 ವಿಕೆಟ್​ಗಳ ಗೆಲುವು, ಯುಎಇ ವಿರುದ್ಧ 78 ರನ್​ಗಳ ದಿಗ್ವಿಜಯ ಸಾಧಿಸಿದ್ದ ಹರ್ಮನ್ ಪಡೆ ಇದೀಗ ಕೊನೆಯ ಪಂದ್ಯದಲ್ಲೂ ನೇಪಾಳ ವಿರುದ್ಧ ಜಯದ ನಗೆ ಬೀರಿತು. ಸತತ ಮೂರು ಗೆಲುವುಗಳೊಂದಿಗೆ ಎ ಗುಂಪಿನಲ್ಲಿ ಮೊದಲ ಸ್ಥಾನಿಯಾಗಿ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ಹರ್ಮನ್​ಪ್ರೀತ್ ಕೌರ್ ಅಲಭ್ಯತೆಯಲ್ಲಿ ಸ್ಮೃತಿ ಮಂಧಾನ ಅವರು ತಂಡವನ್ನು ಮುನ್ನಡೆಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಶಫಾಲಿ ವರ್ಮಾ (81) ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಗುರಿ ಬೆನ್ನಟ್ಟಿದ ನೇಪಾಳ ತನ್ನ 20 ಓವರ್​​ಗಳ ಕೋಟಾ ಮುಗಿಸಿದರೂ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು 96 ರನ್ ಮಾತ್ರ.

ಟೂರ್ನಿಯಿಂದ ಹೊರಬಿದ್ದ ಯುಎಇ, ನೇಪಾಳ

ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದರೆ, ಯುನೈಟೆಡ್ ಅರಬ್ ಎಮಿರೇಟ್ಸ್​ ಮತ್ತು ನೇಪಾಳ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಯುಎಇ ಮೂರಕ್ಕೆ ಮೂರು ಪಂದ್ಯಗಳನ್ನು ಸೋತರೆ, ನೇಪಾಳ ಒಂದರಲ್ಲಿ ಗೆದ್ದು ಉಳಿದ ಎರಡರಲ್ಲಿ ಸೋಲು ಕಂಡಿತು. ಮತ್ತೊಂದೆಡೆ ಭಾರತ ಹ್ಯಾಟ್ರಿಕ್ ಜಯ ಸಾಧಿಸಿದರೆ, ಪಾಕ್ 1ರಲ್ಲಿ ಎರಡರಲ್ಲಿ ಗೆದ್ದು ಸೆಮೀಸ್​ಗೆ ಲಗ್ಗೆ ಇಟ್ಟಿದೆ.

ಶಫಾಲಿ ಬೊಂಬಾಟ್ ಆಟ

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 122 ರನ್ ಹರಿದು ಬಂತು. ಶಫಾಲಿ ವರ್ಮಾ ಜೊತೆ ದಯಾಲನ್ ಹೇಮಲತಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸ್ಮೃತಿ ಮಂಧಾನ ತನ್ನ ಸ್ಥಾನವನ್ನು ಈ ಪಂದ್ಯದಲ್ಲಿ ತ್ಯಾಗ ಮಾಡಿದ್ದರು. ಶಫಾಲಿ 48 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್​ ಸಹಿತ 81 ರನ್ ಗಳಿಸಿದರೆ, ಹೇಮಲತಾ 42 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​​ನೊಂದಿಗೆ 47 ರನ್ ಗಳಿಸಿದರು. ಎಸ್​ ಸಜನಾ 10, ಜೆಮಿಮಾ ರೊಡ್ರಿಗಸ್ ಅಜೇಯ 28, ರಿಚಾ ಘೋಷ್ ಅಜೇಯ 6 ರನ್ ಗಳಿಸಿದರು.

ರನ್ ಗಳಿಸಲು ಪರದಾಡಿದ ನೇಪಾಳ

ಬೃಹತ್ ಗುರಿ ಬೆನ್ನಟ್ಟಿದ ನೇಪಾಳ ತಂಡವು ಆರಂಭದಿಂದಲೂ ರನ್ ಗಳಿಸಲು ಪರದಾಟ ನಡೆಸಿತು. ಸೀತಾ ರಾಣಾ ಮಗರ್ 18 ರನ್ ಗಳಿಸಿದ್ದೇ ಗರಿಷ್ಠ. ಯಾವ ಹಂತದಲ್ಲೂ ನೇಪಾಳ ಪ್ರತಿರೋಧ ತೋರಲೇ ಇಲ್ಲ. ದೀಪ್ತಿ ಶರ್ಮಾ 3, ರಾಧಾ ಯಾದವ್, ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದರೆ, ರೇಣುಕಾ ಸಿಂಗ್ 1 ವಿಕೆಟ್ ಪಡೆದರು. ಮೂರು ಪಂದ್ಯಗಳಲ್ಲೂ ಬೌಲರ್​​ಗಳು ಪ್ರದರ್ಶನ ನೀಡಿದ್ದಾರೆ. ಭಾರತ ತಂಡವು ಸೆಮಿಫೈನಲ್​ನಲ್ಲಿ ಬಿ ಗುಂಪಿನಲ್ಲಿ ಅರ್ಹತೆ ಪಡೆಯುವ 2ನೇ ತಂಡವನ್ನು ಎದುರಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ