logo
ಕನ್ನಡ ಸುದ್ದಿ  /  ಕ್ರಿಕೆಟ್  /  Shubman Gill: ಶುಭ್ಮನ್ ಗಿಲ್​ಗೆ ಡೆಂಗ್ಯೂ ಜ್ವರ; ಆಸ್ಟ್ರೇಲಿಯಾ ಎದುರಿನ ವಿಶ್ವಕಪ್ ಪಂದ್ಯಕ್ಕೆ ಅನುಮಾನ

Shubman Gill: ಶುಭ್ಮನ್ ಗಿಲ್​ಗೆ ಡೆಂಗ್ಯೂ ಜ್ವರ; ಆಸ್ಟ್ರೇಲಿಯಾ ಎದುರಿನ ವಿಶ್ವಕಪ್ ಪಂದ್ಯಕ್ಕೆ ಅನುಮಾನ

Prasanna Kumar P N HT Kannada

Oct 06, 2023 09:33 AM IST

google News

ಶುಭ್ಮನ್ ಗಿಲ್​ಗೆ ಡೆಂಗ್ಯೂ ಜ್ವರ.

    • Shubman Gill: ಭಾರತದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಡೆಂಗ್ಯೂ ಜ್ವರ (Dengue) ಬಂದಿದ್ದು, ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ.
ಶುಭ್ಮನ್ ಗಿಲ್​ಗೆ ಡೆಂಗ್ಯೂ ಜ್ವರ.
ಶುಭ್ಮನ್ ಗಿಲ್​ಗೆ ಡೆಂಗ್ಯೂ ಜ್ವರ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಭಾರತ ತನ್ನ ಮೊದಲ ಪಂದ್ಯಕ್ಕೆ ಭಾರಿ ಸಿದ್ಧತೆ ನಡೆಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ (India vs Australia) ಗೆದ್ದು ವಿಶ್ವಕಪ್ ಅಭಿಯಾನ ಆರಂಭಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ಅದಕ್ಕೂ ಮೊದಲೇ ಆಘಾತವೊಂದು ಎದುರಾಗಿದೆ. ಭಾರತದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill), ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಡೆಂಗ್ಯೂ ಜ್ವರ (Dengue) ಬಂದಿದ್ದು, ಮೊದಲ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ.

ಅಕ್ಟೋಬರ್​ 8ರಂದು ಆಸ್ಟ್ರೇಲಿಯಾ ವಿರುದ್ಧ ಭಾರತದ ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ 24 ವರ್ಷದ ಗಿಲ್​, ಮೈದಾನಕ್ಕಿಳಿಯುವ ಸಾಧ್ಯತೆ ಭಾರಿ ಕಡಿಮೆ ಎಂದು ಹೇಳಲಾಗುತ್ತಿದೆ. ವರ್ಷದುದ್ದಕ್ಕೂ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದ ಗಿಲ್, 2023ರಲ್ಲಿ ಏಕದಿನ ಮಾದರಿಯಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಭರ್ಜರಿ​ ಫಾರ್ಮ್​​ನಲ್ಲಿರುವ ಗಿಲ್​ ಮೊದಲ ಪಂದ್ಯಕ್ಕೆ ಅಲಭ್ಯರಾಗುತ್ತಿರುವುದು ಭಾರತಕ್ಕೆ ಭಾರಿ ಹಿನ್ನೆಡೆ ತಂದೊಡ್ಡಿದೆ.

ಪ್ರಾಕ್ಟೀಸ್​ನಲ್ಲಿ ಕಾಣಿಸಿಕೊಳ್ಳದ ಗಿಲ್

ಡೆಂಗ್ಯೂ ಜ್ವರ ಕಾಣಿಸಿಕೊಂಡ ಕಾರಣ ಪಂಜಾಬ್ ಮೂಲದ ಬ್ಯಾಟರ್ ಗುರುವಾರ ನಡೆದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನೆಟ್ಸ್ ಸೆಷನ್ ಅನ್ನು ತಪ್ಪಿಸಿಕೊಂಡರು. ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಈ ವಾರದ ಆರಂಭದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಗಿಲ್​ಗೆ ಡೆಂಗ್ಯೂ ಸೋಂಕು ತಗುಲಿರುವ ಕುರಿತು ವರದಿಯಾಗಿದೆ. ಅಕ್ಟೋಬರ್​​ 6ರ ಶುಕ್ರವಾರ ಮತ್ತೊಂದು ಪರೀಕ್ಷೆ ನಡೆಸಲಾಗುತ್ತದೆ.

ತಂಡಕ್ಕೆ ಆಯ್ಕೆ ಮಾಡಬೇಕೆ ಅಥವಾ ಬೇಡವೇ ಎನ್ನುವುದರ ಬಗ್ಗೆ ಗೊಂದಲ ಉಂಟಾಗಿದೆ. ಒಂದು ವೇಳೆ ಇಂದು ನಡೆಸುವ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್​ ಬಂದರೆ ಮೈದಾನಕ್ಕಿಳಿಯಲು ಸಾಧ್ಯವಾಗುತ್ತದೆ. ಶುಭ್ಮನ್ ಚೇತರಿಸಿಕೊಳ್ಳಲು ವಿಫಲವಾದರೆ, ನಾಯಕ ರೋಹಿತ್ ಶರ್ಮಾ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಓಪನಿಂಗ್ ಮಾಡುವುದು ಯಾರು ಎಂಬುದು ಕುತೂಹಲಕಾರಿಯಾಗಿದೆ.

ರಾಹುಲ್ ಅಥವಾ ಇಶಾನ್ ಓಪನಿಂಗ್?

ಗಿಲ್ ಅಲಭ್ಯರಾದರೆ ಭಾರತದ ಮುಂದೆ ಎರಡು ಓಪನಿಂಗ್ ಆಯ್ಕೆಗಳಿವೆ. ಎಡಗೈ ಆಟಗಾರ ಇಶಾನ್ ಕಿಶನ್ ಅಥವಾ ಬಲಗೈ ಬ್ಯಾಟ್ಸ್​​ಮನ್​​ ಕೆಎಲ್ ರಾಹುಲ್​​ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ಬಹುತೇಕ ಇಶಾನ್ ಕಿಶನ್ ಆರಂಭಿಕವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಯಾಕೆಂದರೆ ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಅದ್ಭುತ ಪ್ರದರ್ಶನ ನೀಡಿರುವ ಹಿನ್ನೆಲೆ ಇಶಾನ್​​​ಗೆ ಇನ್ನಿಂಗ್ಸ್​ ತೆರೆಯುವ ಸಾಧ್ಯತೆ ಹೆಚ್ಚಿದೆ.

ಏಕದಿನ ವಿಶ್ವಕಪ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ