logo
ಕನ್ನಡ ಸುದ್ದಿ  /  ಕ್ರಿಕೆಟ್  /  Watch: ಮದುವೆಯಾಗುವ ಹುಡುಗ ಹೇಗಿರಬೇಕು; ಅಭಿಮಾನಿ​ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ, ಉತ್ತರ ಇಲ್ಲಿದೆ

Watch: ಮದುವೆಯಾಗುವ ಹುಡುಗ ಹೇಗಿರಬೇಕು; ಅಭಿಮಾನಿ​ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ, ಉತ್ತರ ಇಲ್ಲಿದೆ

Prasanna Kumar P N HT Kannada

Dec 28, 2023 11:14 AM IST

ಅಭಿಮಾನಿ​ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ.

    • Smriti Mandhana on Future Husband: ಮದುವೆ ಆಗುವ ಹುಡುಗ ಹೇಗಿರಬೇಕೆಂಬುದನ್ನು ಸ್ಮತಿ ಮಂಧಾನ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಲೋಕದ ಕ್ವೀನ್​ ನೀಡಿದ ಉತ್ತರ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಏನೆಲ್ಲಾ ಗುಣಲಕ್ಷಣಗಳನ್ನು ಹೊಂದಿರಬೇಕೆಂದು ತಿಳಿಸಿದ್ದಾರೆ.
ಅಭಿಮಾನಿ​ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ.
ಅಭಿಮಾನಿ​ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ.

ಮಹಿಳಾ ಕ್ರಿಕೆಟ್ ಲೋಕದ ಅತ್ಯಂತ ಸುಂದರ ಆಟಗಾರ್ತಿಯರಲ್ಲಿ ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಕೂಡ ಒಬ್ಬರು. ಮಹಿಳಾ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಮಂಧಾನ, ಕ್ರಶ್ ಎಂದೇ ಕರೆಸಿಕೊಳ್ಳುತ್ತಾರೆ. ಅತ್ಯುತ್ತಮ ಬ್ಯಾಟರ್​. ಹಾಗೆಯೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮತ್ತು ಸಂಭಾವ್ಯ ಮುಂದಿನ ನಾಯಕಿ. ಅಂತಹ ಆಟಗಾರ್ತಿಗೆ ಮದುವೆ ಆಗುವ ಹೇಗಿರಬೇಕು ಎಂದು ಫ್ಯಾನ್ಸ್​ ಲೆಕ್ಕಾಚಾರ ಹಾಕಿದ್ದೂ ಇದೆ.

ಟ್ರೆಂಡಿಂಗ್​ ಸುದ್ದಿ

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಅಲ್ಲದೆ, ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂಬುದನ್ನು ಸ್ಮೃತಿ ಮಂಧಾನ ಅವರಿಂದ ತಿಳಿದುಕೊಳ್ಳಲು ಸಹ ಅಭಿಮಾನಿಗಳಿಗೆ ಕುತೂಹಲ ಇದೆ. ಈ ಎಲ್ಲಾ ಕುತೂಹಲ ಇದೀಗ ತೆರೆ ಬಿದ್ದಿದೆ. ಮದುವೆ ಆಗುವ ಹುಡುಗ ಹೇಗಿರಬೇಕೆಂಬುದನ್ನು ಸ್ಮತಿ ಮಂಧಾನ ಅವರೇ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಲೋಕದ ಕ್ವೀನ್​ ನೀಡಿದ ಉತ್ತರ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಪತಿ ಏನೆಲ್ಲಾ ಗುಣಲಕ್ಷಣಗಳನ್ನು ಹೊಂದಿರಬೇಕೆಂದು ತಿಳಿಸಿದ್ದಾರೆ. ಮುಂದಿದೆ ಉತ್ತರ ನೋಡಿ.

ಕೌನ್​ಬನೇಗಾ ಕರೋಡ್​ಪತಿ ಕಾರ್ಯಕ್ರಮಕ್ಕೆ ಹಾಜರು

ಇತ್ತೀಚೆಗೆ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್​ಪತಿ'ಯ 'ಹಾಟ್ ಸೀಟ್' ಮೇಲೆ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಸ್ಮೃತಿ ಮಂಧಾನ ಅವರು ಕುಳಿತಿದ್ದರು. ಈ ವೇಳೆ ಅವರು ಕಠಿಣ ಪ್ರಶ್ನೆ ಎದುರಿಸಬೇಕಾಯಿತು. ಆದರೆ ಈ ಪ್ರಶ್ನೆ, ನಿರೂಪಕ ಅಮಿತಾಭ್ ಬಚ್ಚನ್ ಅವರಿಂದಲ್ಲ. ಮತ್ತು ಪ್ರಶ್ನೆ ನೀಡುವ ಕಂಪ್ಯೂಟರ್​​ನಿಂದ ಅಲ್ಲ. ಈ ಪ್ರಶ್ನೆ ಸಭಿಕರಲ್ಲಿ ಕುಳಿತಿದ್ದ ಯುವ ಅಭಿಮಾನಿಯಿಂದ ಬಂದಿತ್ತು. ಈ ಪ್ರಶ್ನೆ ಕೇಳಿ ಸ್ಮೃತಿ ಮಂಧಾನ ಶಾಕ್ ಆದರು.

ಅಭಿಮಾನಿ ಪ್ರಶ್ನೆ ಹೀಗಿತ್ತು

ಅಭಿಮಾನಿಯೊಬ್ಬ ಮೇಲೆದ್ದು, ಮಂಧಾನ ಜಿ ನಿಮಗಾಗಿ ಈ ಪ್ರಶ್ನೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಅಭಿಮಾನಿ ಬಳಗ ಇದೆ. ಟೀಮ್ ಇಂಡಿಯಾದ ಬಹುತೇಕ ಯುವತಿಯರು ನಿಮ್ಮನ್ನು ಫಾಲೋ ಮಾಡುತ್ತಾರೆ. ಆದರೆ ನಿಮ್ಮ ಭಾವಿ ಪತಿ ಹೇಗಿರಬೇಕು? ಅಂದರೆ ಹುಡುಗರಲ್ಲಿ ಯಾವ ಗುಣಗಳು ನಿಮಗಿಷ್ಟ ಎಂದು ಕೇಳಿದ್ದಾರೆ. ಈ ಪ್ರಶ್ನೆ ಪ್ರಕಾರ ಆದರ್ಶ ಪತಿ ಯಾರು? ಅವರಲ್ಲಿ ಯಾವ ಗುಣಗಳನ್ನು ನೀವು ಹುಡುಕುತ್ತೀರಾ ಎಂದು ಕೇಳಿದ್ದಾರೆ.

ದಂಗಾದ ಅಮಿತಾಭ್, ನಕ್ಕು ನಕ್ಕು ಸುಸ್ತಾದ ಇಶಾನ್

ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳಿ ನಾಚಿ ನೀರಾದ ಸ್ಮೃತಿ, ಉತ್ತರಿಸಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ಮಂಧಾನ ಪಕ್ಕದಲ್ಲೇ ವಿಕೆಟ್‌ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಎದ್ದುಬಿದ್ದು ನಕ್ಕರು. ಅವರ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಹೋಸ್ಟ್ ಮಾಡುತ್ತಿದ್ದ ಅಮಿತಾಬ್ ಬಚ್ಚನ್ ಕೂಡ ಹಠಾತ್ ಪ್ರಶ್ನೆಯಿಂದ ಗಾಬರಿಗೊಂಡರು. ವಿಸ್ಮಯದಿಂದ ಅಭಿಮಾನಿಯನ್ನು ನೋಡಿದರು. ಮತ್ತು ಸ್ಮೃತಿ ಮಂಧಾನ ಕಡೆಯೂ ನೋಡಿದರು.

ಅಭಿಮಾನಿಗೆ ಬಿಗ್​ ಬಿ ಮರು ಪ್ರಶ್ನೆ

ಮಂಧಾನ ಉತ್ತರ ನೀಡುವುದಕ್ಕೂ ಮುನ್ನ ಅಮಿತಾಭ್ ಬಚ್ಚನ್, ಪ್ರಶ್ನೆ ಕೇಳಿದ ಅಭಿಮಾನಿಗೆ ಮರು ಪ್ರಶ್ನೆ ಹಾಕುತ್ತಾರೆ. ತಮಗೆ ಮದುವೆ ಆಗಿದೆಯೇ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಅಭಿಮಾನಿ, ಇಲ್ಲ ಸರ್ ಎನ್ನುತ್ತಾರೆ. ಆಗ ಒಳ್ಳೆದಾಯಿತು ಎಂದು ಬಿಗ್​ಬಿ ಹೇಳುತ್ತಾರೆ. ಅಲ್ಲಿದ್ದ ಸಭಿಕರೆಲ್ಲಾ ಜೋರಾಗಿ ನಗುತ್ತಾರೆ. ಉತ್ತರ ನೀಡುವುದಕ್ಕೂ ಮೊದಲು ನಾಚಿ ನೀರಾದ ಮಂಧಾನ, ನಗುತ್ತಲೇ ಉತ್ತರ ಕೊಡುತ್ತಾರೆ. ನಾನು ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲ ಎನ್ನುತ್ತಾ ಬ್ಲಷ್​ ಆಗುತ್ತಾರೆ.

ಹೀಗಿತ್ತು ನೋಡಿ ಮಂಧಾನ ಉತ್ತರ

ನನ್ನ ಕ್ರೀಡಾ ವೃತ್ತಿಯ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಒಳ್ಳೆಯ ಹುಡುಗನನ್ನು ಹುಡುಕುತ್ತಿದ್ದೇನೆ ಎನ್ನುತ್ತಾರೆ. ಆಗ ಬಿಗ್​ ಬಿ, ಒಳ್ಳೆ ಹುಡುಗ ಯಾವ ರೀತಿ ಎಂದು ಮಂಧಾನಗೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಸ್ಮೃತಿ, ಒಳ್ಳೆ ಹುಡುಗ ಅಂದರೆ ನನ್ನನ್ನು ಕೇರ್ ಮಾಡಬೇಕು. ಮಹಿಳಾ ಕ್ರೀಡಾಪಟುವಾಗಿ ನಾನು ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗದಿರಬಹುದು. ಇದೆಲ್ಲ ಅರ್ಥ ಮಾಡಿಕೊಂಡರೆ ಸಾಕು. ಇದು ನನ್ನ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂದಿನಿಂದ ಇಂಡೋ-ಆಸೀಸ್ ಸರಣಿ

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಭಾರತ ತಂಡದ ಅದ್ಭುತ ಗೆಲುವಿನಲ್ಲಿ ಮಂಧಾನ ಪ್ರಮುಖ ಪಾತ್ರ ವಹಿಸಿದ್ದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ ಗಳಿಸಿದರು ಮತ್ತು ನಂತರ ಅಜೇಯ 38 ರನ್ ಗಳಿಸಿದ್ದರು. 27ರ ವರ್ಷದ ಆಟಗಾರ್ತಿ ಡಿಸೆಂಬರ್ 28ರಂದು ಆರಂಭವಾಗಲಿರುವ ಆಸೀಸ್ ವಿರುದ್ಧ ಟಿ20ಐ ಮತ್ತು ಏಕದಿನ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕಿಯೂ ಆಗಿದ್ದಾರೆ. ಕಳೆದ ಬಾರಿ ಅವರು ನಾಯಕಿಯಾಗಿ ಕಳಪೆ ಪ್ರದರ್ಶನ ನೀಡಿದ್ದರು. ಆಡಿದ್ದ 8 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ವರ್ಷ, ಮಂಧಾನಾ ತನ್ನ ತಂಡಕ್ಕೆ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಡಲು ಎದುರು ನೋಡುತ್ತಿದ್ದಾರೆ.

IPL, 2024

Live

PBKS

214/5

20.0 Overs

VS

SRH

208/5

(18.1)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ