ಅಷ್ಟೊಂದು ಹಣಕ್ಕೆ ಯಾರೂ ಅರ್ಹರಲ್ಲ; ಮಿಚೆಲ್ ಸ್ಟಾರ್ಕ್ ಐಪಿಎಲ್ ಖರೀದಿ ಕುರಿತು ಸುನಿಲ್ ಗವಾಸ್ಕರ್ ಹೇಳಿಕೆ
Feb 12, 2024 04:14 PM IST
ಮಿಚೆಲ್ ಸ್ಟಾರ್ಕ್ ಐಪಿಎಲ್ ಖರೀದಿ ಕುರಿತು ಸುನಿಲ್ ಗವಾಸ್ಕರ್ ಹೇಳಿಕೆ
- Mitchell Starc: ಐಪಿಎಲ್ 2024ರ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಖರೀದಿಗೆ ಕೆಕೆಆರ್ ಫ್ರಾಂಚೈಸಿಯು ಭಾರಿ ಹಣ ಸುರಿಯಿತು. ಈ ಕುರಿತು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟೊಂದು ಹಣಕ್ಕೆ ಯಾವುದೇ ಆಟಗಾರ ಅರ್ಹರಲ್ಲ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಖರೀದಿಯಾದ ಆಟಗಾರ ಮಿಚೆಲ್ ಸ್ಟಾರ್ಕ್ (Mitchell Starc). ಆಸ್ಟ್ರೇಲಿಯಾದ ಅನುಭವಿ ವೇಗಿ ತಮ್ಮ ಬೆಲೆಯನ್ನು ಸಮರ್ಥಿಸಿಕೊಳ್ಳಲು 2024ರ ಆವೃತ್ತಿಯಲ್ಲಿ ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಸ್ಟಾರ್ಕ್ ಆಡಲಿದ್ದಾರೆ. ದುಬೈನಲ್ಲಿ ನಡೆದ ಐಪಿಎಲ್ 2024ರ ಹರಾಜಿನಲ್ಲಿ 2023ರ ವಿಶ್ವಕಪ್ ವಿಜೇತ ತಂಡದ ಬೌಲರ್ ಸ್ಟಾರ್ಕ್ ಅವರನ್ನು ಶಾರುಖ್ ಖಾನ್ ಸಹ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿಯು ಬರೋಬ್ಬರಿ 24.75 ಕೋಟಿ ರೂಪಾಯಿಗೆ ಖರೀದಿಸಿತು. ಕಳೆದ ವರ್ಷ ನಡೆದ ಹರಾಜಿನಲ್ಲಿ ಕೆಕೆಆರ್ ದಾಖಲೆಯ ಬಿಡ್ ಮಾಡುವ ಮೂಲಕ ಸ್ಟಾರ್ಕ್ ಅವರನ್ನು ತನ್ನ ಬತ್ತಳಿಕೆ ಸೇರಿಸಿಕೊಂಡಿತು.
ಅಷ್ಟೊಂದು ಹಣಕ್ಕೆ ಯಾರೂ ಯೋಗ್ಯರಲ್ಲ
ಕೆಕೆಆರ್ ತಂಡದ ಅತ್ಯಂತ ದುಬಾರಿ ಖರೀದಿಯ ಕುರಿತು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿದ ಗವಾಸ್ಕರ್, ಐಪಿಎಲ್‌ನಲ್ಲಿ ಸ್ಟಾರ್ಕ್ ಅವರು ಪಡೆದಷ್ಟು ಬೆಲೆಗೆ ಯಾವುದೇ ಆಟಗಾರ ಅರ್ಹರಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Watch: ಮಾವನ ಆರೋಪದ ಕುರಿತು ವರದಿಗಾರರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ರಿವಾಬಾ ಜಡೇಜಾ; ವಿಡಿಯೋ ವೈರಲ್
“ಸಂಪೂರ್ಣ ಸ್ಪಷ್ಟವಾಗಿ ಹೇಳಬೇಕೆಂದರೆ, ಇಷ್ಟೊಂದು ಮೊತ್ತಕ್ಕೆ ಯಾರೂ ಯೋಗ್ಯರು ಎಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ಸ್ಟಾರ್ಕ್ ಅವರು ಆಡುವ 14 ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಲು ಸಾಧ್ಯವಾದರೆ, ಆಗ ಆ ಹಣದ ಮೌಲ್ಯವನ್ನು ನಾವು ಹೇಳಬಹುದು. ಅವರೇನಾದರೂ ಇತರ ಪಂದ್ಯಗಳಲ್ಲಿಯೂ ಕೊಡುಗೆ ನೀಡಿದರೆ ಅದು ಅದ್ಭುತವಾಗಿರಲಿದೆ,” ಎಂದು ಗವಾಸ್ಕರ್ ಹೇಳಿದ್ದಾರೆ.
ಅವರು ಮ್ಯಾಚ್ ವಿನ್ನಿಂಗ್ ಎಸೆತಗಳನ್ನು ಬೌಲಿಂಗ್ ಮಾಡಬೇಕು
“ಅವರು 14 ಪಂದ್ಯಗಳಲ್ಲಿ ಕನಿಷ್ಠ ನಾಲ್ಕು ಪಂದ್ಯಗಳಲ್ಲಿಯಾದರೂ ಮ್ಯಾಚ್ ವಿನ್ನಿಂಗ್ ಸ್ಪೆಲ್‌ಗಳನ್ನು ಎಸೆಯಬೇಕಾಗಿದೆ. ಬಹುಶಃ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ, ನಿರ್ಣಾಯಕ ಪ್ರದರ್ಶನ ನೀಡಬೇಕು. ಏಕೆಂದರೆ ಈ ಮೂರು ತಂಡಗಳು ಉನ್ನತ ದರ್ಜೆಯ ಬ್ಯಾಟಿಂಗ್ ಲೈನ್ಅಪ್ ಹೊಂದಿವೆ. ಆ ತಂಡಗಳನ್ನು ಆಲೌಟ್ ಮಾಡಿದರೆ, ಅವರಿಗೆ ಕೊಟ್ಟ ಹಣವು ಮೌಲ್ಯಯುತವಾಗಿರುತ್ತದೆ,” ಎಂದು ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ | ಸೊಸೆಯನ್ನು ದೂರಿದ ತಂದೆ ವಿರುದ್ಧ ಕಿಡಿಕಾರಿದ ರವೀಂದ್ರ ಜಡೇಜಾ; ಪತ್ನಿ ರಿವಾಬಾ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದ ಕ್ರಿಕೆಟಿಗ
ಆಸ್ಟ್ರೇಲಿಯಾ ವೇಗಿ ಕೊನೆಯ ಬಾರಿಗೆ 2018ರಲ್ಲಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರು. 9.4 ಕೋಟಿ ರೂಪಾಯಿಗೆ ಮಾರಾಟವಾದ ಅವರು, ಆ ಸಮಯದಲ್ಲಿ ಐಪಿಎಲ್‌ನಲ್ಲಿ ಆಡಲಿಲ್ಲ. ಸ್ಟಾರ್ಕ್ ಕೊನೆಯ ಬಾರಿಗೆ 2015ರ ಆವೃತ್ತಿಯಲ್ಲಿ ಐಪಿಎಲ್ ಪಂದ್ಯವನ್ನಾಡಿದ್ದರು.
ಇದನ್ನೂ ಓದಿ | ಕೆಎಸ್ ಭರತ್ ಬದಲಿಗೆ ಯುವ ಆಟಗಾರನಿಗೆ ಅವಕಾಶ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ
(This copy first appeared in Hindustan Times Kannada website. To read more like this please logon to kannada.hindustantimes.com)