Watch: ಮಾವನ ಆರೋಪದ ಕುರಿತು ವರದಿಗಾರರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ರಿವಾಬಾ ಜಡೇಜಾ; ವಿಡಿಯೋ ವೈರಲ್
Rivaba Jadeja: ತಮ್ಮ ಮಾವ ಅನಿರುಧ್ ಸಿನ್ಹ ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಿವಾಬಾ ಜಡೇಜಾ ಅವರಲ್ಲಿ ಕೇಳಲಾಯ್ತು. ಸಾರ್ವಜನಿಕ ಕಾರ್ಯಕ್ರಮದ ವೇಳೆ ಇಂಥ ವಿಷಯಗಳನ್ನು ಚರ್ಚಿಸುವ ಬದಲು, ನೇರವಾಗಿ ತನ್ನನ್ನು ಸಂಪರ್ಕಿಸುವಂತೆ ರವೀಂದ್ರ ಜಡೇಜಾ ಪತ್ನಿ ವರದಿಗಾರರಿಗೆ ಮನವಿ ಮಾಡಿದ್ದಾರೆ.
ರವೀಂದ್ರ ಜಡೇಜಾ (Ravindra Jadeja) ಅವರ ತಂದೆ ಅನಿರುಧ್ ಸಿನ್ಹ ಅವರ ಸಂದರ್ಶನದ ನಂತರ, ಕ್ರಿಕೆಟಿಗ ಜಡೇಜಾ ಕ್ರಿಕೆಟ್‌ಗಿಂತ ಹೆಚ್ಚಾಗಿ ಕೌಟುಂಬಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಮಗ ಜಡೇಜಾ ಜೊತೆಗಿನ ಸಂಬಂಧದ ಕುರಿತಾಗಿ ಅನಿರುಧ್ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆ ಸಂದರ್ಶನದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಜಡೇಜಾ, ಅದು ಸ್ಕ್ರಿಪ್ಟೆಡ್ ಮತ್ತು ಸಂಪೂರ್ಣಸುಳ್ಳು ಎಂದು ಹೇಳಿದ್ದರು. ಇದೀಗ, ಮಾವನ ಆರೋಪಗಳ ಕುರಿತಾದ ಪ್ರಶ್ನೆಗೆ ಜಡೇಜಾ ಪತ್ನಿ ರಿವಾಬಾ (Rivaba Jadeja) ಆಕ್ರೋಶದ ಉತ್ತರ ನೀಡಿದ್ದಾರೆ.
ಅನಿರುಧ್ ಸಿನ್ಹ ಅವರು, ತಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಲು ರಿವಾಬಾ ಕಾರಣ ಎಂದು ಆರೋಪಿಸಿದ್ದರು. ಇದೇ ಕಾರಣದಿಂದ ರವೀಂದ್ರ ತಮ್ಮ ತಂದೆ ಮತ್ತು ಸಹೋದರಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು. ತಾನು 2BKH ಫ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಪತ್ನಿಯ 20,000 ರೂಪಾಯಿ ಪಿಂಚಣಿ ಹಣದಿಂದ ಕುಟುಂಬದ ವೆಚ್ಚಗಳನ್ನು ನಿರ್ವಹಿಸುತ್ತಿರುವುದಾಗಿ ಅನಿರುಧ್ ಹೇಳಿದ್ದಾರೆ.
ಇದನ್ನೂ ಓದಿ | ಸೊಸೆಯನ್ನು ದೂರಿದ ತಂದೆ ವಿರುದ್ಧ ಕಿಡಿಕಾರಿದ ರವೀಂದ್ರ ಜಡೇಜಾ; ಪತ್ನಿ ರಿವಾಬಾ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದ ಕ್ರಿಕೆಟಿಗ
ರವೀಂದ್ರ ಅವರ ಪತ್ನಿ ರಿವಾಬಾ ಅವರಿಂದಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿವೆ ಎಂದು ಅನಿರುದ್ಧ್ ಆರೋಪಿಸಿದ್ದಾರೆ. ಮದುವೆಯಾದ ನಂತರ ರವೀಂದ್ರ ಅವರ ರೆಸ್ಟೋರೆಂಟ್ ಮಾಲೀಕತ್ವದ ಬಗ್ಗೆ ವಿವಾದ ಎದ್ದಿತ್ತು. ರೆಸ್ಟೋರೆಂಟ್ ಮಾಲೀಕತ್ವವನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ರಿವಾಬಾ ಹೇಳಿದಳು. ಆ ಕಾರಣದಿಂದಾಗಿ ಅವರ ನಡುವೆ ಜಗಳವೂ ಆಗಿತ್ತು. ಅವರು ಸಮಸ್ಯೆಯನ್ನು ನಿಭಾಯಿಸುತ್ತಾರೆ ಎಂದು ಭಾವಿಸಿ ಸಹೋದರಿ ಸಹಿ ಹಾಕಲು ಒಪ್ಪಿಕೊಂಡಳು ಎಂದು ತಂದೆ ಹೇಳಿಕೊಂಡಿದ್ದಾರೆ.
ಉತ್ತರ ಬೇಕಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ಮಾವ ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಿವಾಬಾ ಅವರಲ್ಲಿ ಕೇಳಲಾಯ್ತು. ಬಿಜೆಪಿ ಶಾಸಕಿಯಾಗಿರುವ ರಿವಾಬಾ, ಪತ್ರಕರ್ತನ ಪ್ರಶ್ನೆಗೆ ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದ ವೇಳೆ ಇಂಥ ವಿಷಯಗಳನ್ನು ಚರ್ಚಿಸುವ ಬದಲು, ನೇರವಾಗಿ ತನ್ನನ್ನು ಸಂಪರ್ಕಿಸುವಂತೆ ಅವರು ವರದಿಗಾರರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ವಾಚ್ಮನ್ ಮಗ ರವೀಂದ್ರ ಜಡೇಜಾ; ಅಮ್ಮನಂತಿದ್ದ ಅಕ್ಕ, ಬಡತನದಲ್ಲೂ ಕ್ರಿಕೆಟರ್ ಮಾಡಿದ ತಂದೆಯನ್ನೇ ದೂರವಿಟ್ರಾ? ಇಲ್ಲಿದೆ ಜಡ್ಡು ಬದುಕಿನ ಕತೆ
“ನಾವು ಇವತ್ತು ಇಲ್ಲಿ ಸೇರಿದ್ದು ಯಾಕೆ? ನೀವು ಆ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು,” ಎಂದು ರಿವಾಬಾ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರವೀಂದ್ರ ಜಡೇಜಾನನ್ನು ಒಬ್ಬ ಕ್ರಿಕೆಟಿಗನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. 20 ಲೀಟರ್ ಹಾಲಿನ ಕ್ಯಾನ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದೆ. ಅಲ್ಲದೆ ವಾಚ್‌ಮ್ಯಾನ್ ಆಗಿಯೂ ಕೆಲಸ ಮಾಡಿದ್ದೇನೆ. ಜಡೇಜಾ ಸಹೋದರಿ ಆತನಿಗಾಗಿ ನನಗಿಂತ ಹೆಚ್ಚು ಕಷ್ಟ ಪಟ್ಟಿದ್ದಾಳೆ. ಅವಳು ಅವನನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದಾರೂ, ಆತ ಮಾತ್ರ ತನ್ನ ಸಹೋದರಿಯೊಂದಿಗೂ ಯಾವುದೇ ಸಂಬಂಧ ಉಳಿಸಿಕೊಂಡಿಲ್ಲ ಎಂದು ತಂದೆ ಆರೋಪಿಸಿದ್ದಾರೆ.
ಆರೋಪ ತಳ್ಳಿಹಾಕಿದ ಜಡೇಜಾ
ಆ ಎಲ್ಲಾ ಆರೋಪಗಳು ಅಸಂಬದ್ಧವಾಗಿದ್ದು, ತನ್ನ ಪತ್ನಿ ರಿವಾಬಾ ಅವರ ಘನತೆಗೆ ಕಳಂಕ ತರುವ ಪ್ರಯತ್ನ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. “ಸಂದರ್ಶನದಲ್ಲಿ ಹೇಳಲಾದ ಎಲ್ಲಾ ವಿಷಯಗಳು ಅರ್ಥಹೀನ ಮತ್ತು ಸುಳ್ಳು. ಇದು ಕೇವಲ ಏಕಪಕ್ಷೀಯ ವಿಚಾರ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಇವು ನನ್ನ ಹೆಂಡತಿಯ ವರ್ಚಸ್ಸಿಗೆ ಧಕ್ಕೆ ತರಲು ಮಾಡಿದ ಪ್ರಯತ್ನ. ಇದು ನಿಜಕ್ಕೂ ಖಂಡನೀಯ ಮತ್ತು ಅಸಹ್ಯಕರವಾಗಿವೆ. ನಾನು ಕೂಡ ಹೇಳಲು ಬಹಳಷ್ಟು ಇದೆ. ಆದರೆ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕ ಮಾಡಲು ನನಗೆ ಇಷ್ಟವಿಲ್ಲ” ಎಂದು ರವೀಂದ್ರ ಜಡೇಜಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | ಮೊಹಮ್ಮದ್ ಕೈಫ್ರಿಂದ ಯಶ್ ದುಲ್ವರೆಗೆ; ಅಂಡರ್ 19 ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟ ನಾಯಕರು ಇವರೇ
(This copy first appeared in Hindustan Times Kannada website. To read more like this please logon to kannada.hindustantimes.com)