VVS Laxman Birthday: ಮಾಜಿ ರಾಷ್ಟ್ರಪತಿಯವರ ಸೋದರಳಿಯ ವಿವಿಎಸ್ ಲಕ್ಷ್ಮಣ್ ಡಾಕ್ಟರ್ ಕೋರ್ಸ್ ಬಿಟ್ಟು ಕ್ರಿಕೆಟ್‌ನತ್ತ ಮುಖಮಾಡಿದ ರೋಚಕ ಕಥೆ
Nov 01, 2023 12:30 PM IST
ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ 49ನೇ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಆಗಬೇಕಿದ್ದ ಲಕ್ಷ್ಮಣ್ ಅವರು ಕ್ರಿಕೆಟರ್ ಆಗಿದ್ದೇಗೆ ಅನ್ನೋದರ ಆಸಕ್ತಿಕರ ಮಾಹಿತಿ ಇಲ್ಲಿದೆ.
ಬೆಂಗಳೂರು: ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಹಾಗೂ ಮೋಸ್ಟ್ ಸ್ಟೈಲಿಶ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ (VVS Laxman Birthday) ವೈದ್ಯರಾಗಬೇಕೆಂದು ಮೆಡಿಕಲ್ ಕೋರ್ಸ್‌ಗೆ ಸೇರಿದ್ದರು. ಆದರೆ ಅವರು ಎಂಬಿಬಿಎಸ್ ಬಿಟ್ಟು ಕ್ರಿಕೆಟರ್ ಆದರು. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ಇಂದು (ನವೆಂಬರ್ 1, ಬುಧವಾರ) ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಲಕ್ಷ್ಮಣ್ ಅವರಿಗೆ ಕುಟುಂಬಸ್ಥರು, ಸಂಬಂಧಿಕರು, ಗಣ್ಯರು, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ವಿವಿಎಸ್ ಲಕ್ಷ್ಮಣ್ ಅವರು 1974ರ ನವೆಂಬರ್ 1 ರಂದು ಹೈದರಾಬಾದ್‌ನ ವಿದ್ಯಾವಂತ ಕುಟುಂಬದಲ್ಲಿ ಜನಿಸಿದರು. 2004ರಲ್ಲಿ ಜಿಆರ್ ಶೈಲಜಾ ಎಂಬುವವರನ್ನು ವಿವಾಹವಾದರು. ಇವರಿಗೆ ಸರ್ವಜಿತ್ ಲಕ್ಷ್ಮಣ್ ಮತ್ತು ಅಚಿಂತ್ಯ ಲಕ್ಷ್ಮಣ್ ಎಂಬ ಇಬ್ಬರ ಮಕ್ಕಳ ಇದ್ದಾರೆ.
ಮೆಡಿಕಲ್ ಕೋರ್ಸ್ ಬಿಟ್ಟು ವಿವಿಎಸ್ ಕ್ರಿಕೆಟ್ ವೃತ್ತಿ ಬದುಕನ್ನಾಗಿ ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ವಿಯಾದವರು. ಇವರ ವೃತ್ತಿಜೀವನವು ಸಾಕಷ್ಟು ಅದ್ಭುತವಾಗಿವೆ. ಇವರನ್ನು ವೆರಿ ವೆರಿ ಸ್ಪೆ,ಲ್ ಕ್ರಿಕೆಟ್ ಎಂಬ ಖ್ಯಾತಿಯನ್ನು ಸಹ ಪಡೆದಿದ್ದಾರೆ.
ವಿವಿಎಸ್ ಲಕ್ಷ್ಮಣ್ ಮಾಜಿ ರಾಷ್ಟ್ರಪತಿಯವರ ಸೋದರಳಿಯ
ವಿವಿಎಸ್ ಲಕ್ಷ್ಮಣ್ ಅವರು ಮಾಜಿ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸೋದರಳಿಯ ಎಂದು ಅದೆಷ್ಟೋ ಮಂದಿಗೆ ತಿಳಿದಿರಲಿಕ್ಕಿಲ್ಲ. ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದವರು. ಲಕ್ಷ್ಮಣ್ ಅವರದ್ದು ಶಿಕ್ಷಿತ ಕುಟುಂಬ. ಇವರ ಪೋಷಕರು ವೈದ್ಯರಾಗಿದ್ದಾರೆ. ಇವರೂ ಕೂಡ ವೈದ್ಯರಾಬೇಕೆಂದು ಮೆಡಿಕ್ ಕೋರ್ಸ್‌ಗೆ ಸೇರಿದ್ದರು. ಆದರೆ ಅದನ್ನು ಬಿಟ್ಟು ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚಿಸಿಕೊಂಡರು. ಆಟದ ಚಟ ಹಿಡಿಸುತ್ತಿದ್ದಂತೆ ಎಂಬಿಬಿಎಸ್ ಕೋರ್ಸ್ ಮುಗಿಸಲು ಸಾಧ್ಯವಾಗಲಿಲ್ಲ. ನಂತರ ಕ್ರಿಕೆಟ್ ಅವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.
ವಿವಿಎಸ್ ಲಕ್ಷ್ಮಣ್ ಅವರ ಕ್ರಿಕೆಟ್ ಜೀವನ ಅದ್ಭುತವಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ದಿನಗಟ್ಟಲೇ ಕ್ರೀಸ್‌ನಲ್ಲಿ ಬೇರೂರುತ್ತಿದ್ದ ಲಕ್ಷ್ಮಣ್ ಹಲವು ದಾಖಲೆಗಳನ್ನು ಬರೆದಿದ್ದಾರೆ. 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಟೆಸ್ಟ್ ಕದನದಲ್ಲಿ ಆಸೀಸ್ ಮೇಲೆ ಟೀಂ ಇಂಡಿಯಾ ಸವಾರಿ ಮಾಡಿತ್ತು. ಈ ಪಂದ್ಯದ ಗೆಲುವಿನಲ್ಲಿ ವಿವಿಎಸ್ ಲಕ್ಷ್ಮಣ್ ಬರೋಬ್ಬರಿ 281 ರನ್ ಬಾರಿಸುವ ಮೂಲಕ ಪ್ರಮುಖ ಕೊಡುಗೆ ನೀಡಿದ್ದರು.
ವಿವಿಎಸ್ ಲಕ್ಷ್ಮಣ್ ಕ್ರಿಕೆಟ್ ಕೆರಿಯರ್ ಹೀಗಿತ್ತು
ಟೀಂ ಇಂಡಿಯಾ ಪರ 134 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿವಿಎಸ್ ಲಕ್ಷ್ಮಣ್, 225 ಇನ್ನಿಂಗ್ಸ್‌ಗಳಿಂದ 17 ಶತಕ, 2 ದ್ವಿಶತಕ ಸೇರಿ 8,781 ರನ್ ಬಾರಿಸಿದ್ದಾರೆ. 86 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 83 ಒಡಿಐ ಇನ್ನಿಂಗ್ಸ್‌ಗಳಲ್ಲಿ 6 ಶತಕ ಸೇರಿ 2,338 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲೂ ಆಡಿರುವ ಲಕ್ಷ್ಮಣ್ 20 ಪಂದ್ಯಗಳಿಂದ 1 ಅರ್ಧ ಶತಕ ಸೇರಿ 282 ರನ್ ಗಳಿಸಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಲಕ್ಷ್ಮಣ್ ಕ್ರಿಕೆಟ್‌ಗೆ ನೀಡಿದ್ದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾ ಪರ 16 ವರ್ಷಗಳ ಕಾಲ ಆಡಿರುವ ಬಲಗೈ ಬ್ಯಾಟರ್ ಒಂದೇ ಒಂದು ವಿಶ್ವಕಪ್ ಟೂರ್ನಿಯಲ್ಲಿ ಆಡಿಲ್ಲ ಎನ್ನುವುದು ವಿಶೇಷ.