logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಂಜು ಸ್ಯಾಮ್ಸನ್​ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11

ಸಂಜು ಸ್ಯಾಮ್ಸನ್​ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11

Prasanna Kumar P N HT Kannada

Jul 26, 2024 06:58 AM IST

google News

ಸಂಜು ಸ್ಯಾಮ್ಸನ್​ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11

    • Team India probable playing 11 vs sri lanka: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೆ ಭಾರತ ತಂಡದ  ಪ್ಲೇಯಿಂಗ್ 11 ಹೇಗಿರಲಿದೆ? ಇಲ್ಲಿದೆ ವಿವರ.
ಸಂಜು ಸ್ಯಾಮ್ಸನ್​ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್​ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11

ಇತ್ತೀಚೆಗಷ್ಟೆ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ವಿಶ್ವಾಸ ಹೊಂದಿರುವ ಭಾರತ ತಂಡ (Team India), ನೂತನ ಕೋಚ್​ ಗೌತಮ್ ಗಂಭೀರ್ (Gautam Gambhir) ಮತ್ತು ನೂತನ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದಲ್ಲಿ ಹೊಸ ಯುಗ ಆರಂಭಿಸಲು ಸಜ್ಜಾಗಿದೆ. ಟಿ20 ವಿಶ್ವಕಪ್​ ಚಾಂಪಿಯನ್ ಮೆನ್ ಇನ್​ ಬ್ಲ್ಯೂ, ಜುಲೈ 27ರಂದು ನಡೆಯುವ ಶ್ರೀಲಂಕಾ (India vs Sri Lanka) ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಸಿದ್ಧಗೊಂಡಿದೆ. ಆ ಮೂಲಕ 2026ರ ಚುಟುಕು ವಿಶ್ವಕಪ್​ಗೆ ಸಿದ್ಧತೆ ಆರಂಭಿಸಲಿದೆ.

ಆದರೆ, ಲಂಕನ್ನರ ದಹನಕ್ಕೆ ಟೀಮ್ ಇಂಡಿಯಾ 11 ರಣಕಲಿಗಳು ಯಾರು ಎಂಬುದು ಟೀಮ್ ಮ್ಯಾನೇಜ್ಮೆಂಟ್​​ಗೂ ಗೊಂದಲ ತರಿಸಿದೆ. ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಕೆಲ ಆಟಗಾರರು ಮತ್ತು ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದ ಕೆಲವು ಆಟಗಾರರು ಈ ಸರಣಿಗೆ ಅವಕಾಶ ಪಡೆದಿದ್ದಾರೆ. ಹೀಗಾಗಿ, ಯಾರಿಗೆ ಅವಕಾಶ ನೀಡಬೇಕು ಎಂಬುದು ಕೋಚ್ ಗಂಭೀರ್​ಗೆ ತಲೆನೋವಾಗಿ ಪರಿಣಮಿಸಿದೆ. ಕೋಚ್​​ ಆಗಿ ನೇಮಕವಾದ ಮೊದಲ ಸರಣಿಯಲ್ಲೇ ಅಗ್ನಿಪರೀಕ್ಷೆ ಎದುರಾಗಿದೆ.

ಅಗ್ರ 4 ಸ್ಥಾನಕ್ಕೆ ಯಾರು?

ಋತುರಾಜ್ ಗಾಯಕ್ವಾಡ್ ಮತ್ತು ಅಭಿಷೇಕ್ ಶರ್ಮಾ ಆಯ್ಕೆಯಾಗದ ಕಾರಣ ಆರಂಭಿಕರ ಆಯ್ಕೆಗೆ ಯಾವುದೇ ಸಮಸ್ಯೆ ಎದುರಾಗುತ್ತಿಲ್ಲ. ಓಪನಿಂಗ್​ ಸ್ಲಾಟ್​​ನಲ್ಲಿ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯುವುದು ಖಚಿತವಾಗಿದೆ. ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ ಒನ್​ಡೌನ್ ಬರಬಹುದು. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ನಾಯಕ ಸೂರ್ಯಕುಮಾರ್ ನಾಲ್ಕನೇ ಕ್ರಮಾಂಕದಲ್ಲೇ ಆಡಬಹುದು. ಒಂದು ವೇಳೆ ಪಂತ್​ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಿದರೆ ಸೂರ್ಯ ಒನ್​ಡೌನ್ ಬರಬಹುದು.

ಸಂಜುಗೆ ಅನ್ಯಾಯ, ಆಲ್​ರೌಂಡರ್​​ಗಳಾಗಿ ನಾಲ್ವರು ಕಣಕ್ಕೆ

ರಿಷಭ್ ಪಂತ್ ವಿಕೆಟ್ ಕೀಪರ್​ ಆಗಿ ಮೊದಲ ಆಯ್ಕೆಯಾಗಿರುವ ಕಾರಣ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದು ಕಷ್ಟ. ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯ, ಶಿವಂ ದುವೆ ಮತ್ತು ರಿಂಕ್ ಸಿಂಗ್ ಕ್ರಮವಾಗಿ 5, 6, 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಮತ್ತೊಬ್ಬ ಆಲ್​ರೌಂಡರ್​ ಅಕ್ಷರ್​ ಪಟೇಲ್​ ರೇಸ್​​ನಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ವಾಷಿಂಗ್ಟನ್ ಸುಂದರ್​ಗೂ ಅವಕಾಶ ಸಿಗಲಿದೆ. ಇದರೊಂದಿಗೆ ತಂಡವು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರಲಿದೆ. ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಇಬ್ಬರು ವೇಗದ ಬೌಲರ್‌ಗಳಾಗಿ ಆಡಬಹುದು.

ಆದರೆ ಮೊಹಮ್ಮದ್ ಸಿರಾಜ್ ನೆಟ್ ಸೆಷನ್ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಒಂದು ವೇಳೆ ಗಾಯದ ತೀವ್ರತೆ ಹೆಚ್ಚಾಗಿದ್ದರೆ, ಈ ಪಂದ್ಯಕ್ಕೆ ಅವಕಾಶ ಪಡೆಯುವುದು ಬಹುತೇಕ ಕಷ್ಟವಾಗಬಹುದು. ಆಗ ಅವರ ಬದಲಿಗೆ ಖಲೀಲ್ ಅಹ್ಮದ್​ಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ. ಆದರೆ ಮೊದಲ ಆಯ್ಕೆ ಸಿರಾಜ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಜೊತೆಗೆ ರಿಯಾನ್ ಪರಾಗ್, ರವಿ ಬಿಷ್ಣೋಯ್ ಮತ್ತು ಖಲೀಲ್ ಅಹ್ಮದ್ ಕೂಡ ಮೊದಲ ಟಿ20ಐ ಪಂದ್ಯದಿಂದ ದೂರ ಉಳಿಯಬೇಕಾಗಬಹುದು.

ಮೊದಲ ಟಿ20ಐಗೆ ಭಾರತದ ಸಂಭಾವ್ಯ ಆಟಗಾರರ XI

ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ