logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೋತು ಕಣ್ಣೀರಿಟ್ಟ ದಕ್ಷಿಣ ಆಫ್ರಿಕಾ ಆಟಗಾರರು; ಚೋಕರ್ಸ್ ಪಟ್ಟ ಯಾವಾಗ ಕಳಚುತ್ತೋ ಪಾಪ ಎಂದ ನೆಟ್ಟಿಗರು

ಸೋತು ಕಣ್ಣೀರಿಟ್ಟ ದಕ್ಷಿಣ ಆಫ್ರಿಕಾ ಆಟಗಾರರು; ಚೋಕರ್ಸ್ ಪಟ್ಟ ಯಾವಾಗ ಕಳಚುತ್ತೋ ಪಾಪ ಎಂದ ನೆಟ್ಟಿಗರು

Dec 22, 2023 05:13 PM IST

South Africa: ಏಕದಿನ ವಿಶ್ವಕಪ್‌ ಟೂರ್ನಿಯ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ಹೊರ ನಡೆಯಿತು. ಇದರಿಂದ ವಿಶ್ವಕಪ್ ಗೆಲ್ಲುವ ಕನಸು ನನಸಾಗಿಯೇ ಉಳಿಯಿತು. ನೆಟ್ಟಿಗರು ಆಫ್ರಿಕಾ ಆಟಗಾರರನ್ನು ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ.

  • South Africa: ಏಕದಿನ ವಿಶ್ವಕಪ್‌ ಟೂರ್ನಿಯ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ಹೊರ ನಡೆಯಿತು. ಇದರಿಂದ ವಿಶ್ವಕಪ್ ಗೆಲ್ಲುವ ಕನಸು ನನಸಾಗಿಯೇ ಉಳಿಯಿತು. ನೆಟ್ಟಿಗರು ಆಫ್ರಿಕಾ ಆಟಗಾರರನ್ನು ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಯಾಣ ಅಂತ್ಯಗೊಂಡಿದೆ. ಐಸಿಸಿ ನಾಕೌಟ್​​​ಗಳಲ್ಲೇ ಸೋಲುವ ಸೌತ್​ ಆಫ್ರಿಕಾ, ಈ ಬಾರಿಯೂ ಚೋಕರ್ಸ್ ಹಣೆಪಟ್ಟಿ ತನ್ನಲ್ಲೇ ಉಳಿಸಿಕೊಂಡಿದೆ.
(1 / 13)

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್​​ಗಳಿಂದ ಸೋತ ದಕ್ಷಿಣ ಆಫ್ರಿಕಾ ಫೈನಲ್​ ತಲುಪಲು ಮತ್ತೊಮ್ಮೆ ವಿಫಲವಾಯಿತು.
(2 / 13)

5 ಬಾರಿ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳನ್ನು ಆಡಿದ್ದರೂ ಪ್ರೋಟೀಸ್, ಒಂದು ಬಾರಿಯೂ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆ 5 ಸೆಮಿಫೈನಲ್‌ಗಳಲ್ಲಿ 4ರಲ್ಲಿ ಸೋತಿದ್ದಾರೆ. ಒಮ್ಮೆ ಟೈ ಆಗಿತ್ತು.
(3 / 13)

ಕ್ರಿಕೆಟ್​ ಲೋಕದ ಬಲಿಷ್ಠ ತಂಡವೆಂದು ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾ, ಒಂದು ಬಾರಿಯೂ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿಲ್ಲ ಎಂಬುದು ದುರದೃಷ್ಟಕರ.
(4 / 13)

ಟಾಸ್ ಗೆದ್ದು ಮೊದಲು ನಡೆಸಿದ ದಕ್ಷಿಣ ಆಫ್ರಿಕಾ, 212 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆಸೀಸ್ 47.2 ಓವರ್‌ಗಳಲ್ಲಿ ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಿ ಫೈನಲ್​ ತಲುಪಿದರು.
(5 / 13)

ಲೀಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಸೌತ್​ ಆಫ್ರಿಕಾ ಬ್ಯಾಟರ್​​​​ಗಳು, ಸೆಮಿಫೈನಲ್​ನಲ್ಲಿ ಫುಲ್ ಸೈಲೆಂಟ್ ಆದರು. ಪರಿಣಾಮ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಿಲ್ಲ. ಡೇವಿಡ್ ಮಿಲ್ಲರ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರೂ ಗೆಲುವು ದಕ್ಕಲಿಲ್ಲ.
(6 / 13)

ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ ದಕ್ಷಿಣ ಆಫ್ರಿಕಾ, ಫೀಲ್ಡಿಂಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿತು. ಹಲವು ಕ್ಯಾಚ್​​ಗಳನ್ನು ಕೈಚೆಲ್ಲಿದರು. ರನೌಟ್​​​ಗಳನ್ನು ಮಿಸ್​ ಮಾಡಿದರು. ಕೆಟ್ಟ ಫೀಲ್ಡಿಂಗ್ ನಡೆಸಿ ರನ್ ಲೀಕ್ ಮಾಡಲು ಕಾರಣರಾದರು. ಇದು ಸೋಲಿಗೆ ಪ್ರಮುಖ ಕಾರಣ.
(7 / 13)

ಹೀನಾಯ ಸೋಲಿನ ಬಳಿಕ ಸೌತ್​ ಆಫ್ರಿಕಾ ತಂಡವನ್ನು ಎಕ್ಸ್​ ಖಾತೆಯಲ್ಲಿ ಚೋಕರ್ಸ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಹೊಸ ಹುಮ್ಮಸ್ಸು, ಹೊಸ ಸಾರಥ್ಯದೊಂದಿಗೆ ಮತ್ತೆ ಪುಟ್ಟಿದೆದ್ದು ಬನ್ನಿ ಎಂದು ಕೆಲವರು ಹಾರೈಸಿದ್ದಾರೆ.
(8 / 13)

ಈ ಪಂದ್ಯ ಕ್ವಿಂಟನ್ ಡಿ ಕಾಕ್ ಪಾಲಿಗೆ ಕೊನೆಯ ಪಂದ್ಯ. ಟೂರ್ನಿಗೂ ಮುನ್ನ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಡಿ ಕಾಕ್, ಅತ್ಯದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಟೂರ್ನಿಯಲ್ಲಿ 4 ಶತಕ ಸಿಡಿಸಿದ್ದ ಡಿ ಕಾಕ್​ಗೆ ಸೋಲಿನ ವಿದಾಯ ಹೇಳಿದರು. 10 ಪಂದ್ಯಗಳಲ್ಲಿ 594 ರನ್ ಗಳಿಸಿದರು.
(9 / 13)

ಈ ಹಿಂದೆಯೂ 4 ಬಾರಿ ಸೆಮಿಫೈನಲ್​ನಲ್ಲಿ ಸೋಲನುಭವಿಸಿದೆ. 2015 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಆಫ್ರಿಕಾ ಡಕ್​ ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ 4 ವಿಕೆಟ್​​ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು. ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್ ಗಳಿಸಿತ್ತು. ಕಿವೀಸ್ 1 ಎಸೆತ ಬಾಕಿ ಇರುವಂತೆಯೇ ಜಯಿಸಿತು.
(10 / 13)

2023ರಂತೆಯೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ 2007ರಲ್ಲಿ 2ನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ, ಕೇವಲ 149 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 111 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿ ಫೈನಲ್​ಗೇರಿತ್ತು.
(11 / 13)

1999ರಲ್ಲಿ ವಿಶ್ವಕಪ್ ಫೈನಲ್‌ಗೆ ತಲುಪಲು ಸೌತ್ ಆಫ್ರಿಕಾ ಹತ್ತಿರವಾಗಿತ್ತು. ಈ ಪಂದ್ಯ ಟೈ ಆಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, 213 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಕೂಡ 213 ರನ್‌ಗಳಿಗೇ ಆಲೌಟ್ ಆಗಿ ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು. ಆದರೆ 'ಸೂಪರ್ ಸಿಕ್ಸ್' ಟೇಬಲ್‌ನಲ್ಲಿ ಹೆಚ್ಚು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಕಾರಣ ಆಸೀಸ್​​​ ಫೈನಲ್​ ಪ್ರವೇಶಿಸಿತ್ತು.
(12 / 13)

1992ರ ವಿಶ್ವಕಪ್ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, 19 ರನ್‌ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 45 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಮಳೆಯ ಕಾರಣ ಚೇಸಿಂಗ್​ಗೆ ಗುರಿ ಬದಲಾವಣೆ ಮಾಡಲಾಯಿತು. 43 ಓವರ್‌ಗಳಲ್ಲಿ 252 ರನ್​​ ಟಾರ್ಗೆಟ್ ನೀಡಲಾಯಿತು. ಆದರೆ 6 ವಿಕೆಟ್‌ಗೆ 232 ರನ್‌ಗಳಿಸಲಷ್ಟೇ ಶಕ್ತವಾಯಿತು.
(13 / 13)

    ಹಂಚಿಕೊಳ್ಳಲು ಲೇಖನಗಳು