logo
ಕನ್ನಡ ಸುದ್ದಿ  /  ಕ್ರಿಕೆಟ್  /  Ranji Trophy: ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ 29 ರನ್‌ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮಯಾಂಕ್‌ ಪಡೆ

Ranji Trophy: ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ 29 ರನ್‌ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮಯಾಂಕ್‌ ಪಡೆ

Jayaraj HT Kannada

Jan 29, 2024 09:33 PM IST

ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ 29 ರನ್‌ಗಳ ರೋಚಕ ಗೆಲುವು

    • Tripura vs Karnataka Ranji Trophy 2024: ಕರ್ನಾಟಕದ ಗೆಲುವಿನಲ್ಲಿ ವಿಜಯ್‌ಕುಮಾರ್ ವೈಶಾಖ್ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೂಲ್ಯ ಅರ್ಧಶತಕ ಸಿಡಿಸಿದ್ದ ಅವರು, 2 ವಿಕೆಟ್ ಕೂಡ ಪಡೆದರು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್‌ಗಳ ಕಾಣಿಕೆ ನೀಡಿದರು. ಬಳಿಕ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದರು.
ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ 29 ರನ್‌ಗಳ ರೋಚಕ ಗೆಲುವು
ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ 29 ರನ್‌ಗಳ ರೋಚಕ ಗೆಲುವು (PTI)

ರಣಜಿ ಟ್ರೋಫಿಯಲ್ಲಿ (Tripura vs Karnataka) ಗೋವಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ರಣಜಿ ತಂಡವು, ತ್ರಿಪುರಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಅಗರ್ತಲಾದ ಮಹಾರಾಜ ವೀರ್ ವಿಕ್ರಮ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯ್‌ಕುಮಾರ್ ವೈಶಾಖ್ ಅವರ ಪಂದ್ಯಶ್ರೇಷ್ಠ ಪ್ರದರ್ಶನ ಹಾಗೂ ವಿಧ್ವತ್ ಕಾವೇರಪ್ಪ ಮಿಂಚಿನ ಬೌಲಿಂಗ್ ನೆರವಿಂದ ಮಯಾಂಕ್ ಅಗರ್ವಾಲ್ ಬಳಗವು 29 ರನ್‌ಗಳಿಂದ ಗೆದ್ದು ಬೀಗಿದೆ.

ಟ್ರೆಂಡಿಂಗ್​ ಸುದ್ದಿ

ಸತತ 6 ಸೋಲಿನಿಂದ ಸತತ 6 ಗೆಲುವಿನ ತನಕ; ಅಸಾಧ್ಯವನ್ನೂ ಸಾಧಿಸಿದ ಆರ್‌ಸಿಬಿ ಪ್ಲೇಆಫ್ ಹಾದಿಯೇ ರೋಚಕ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ಉಭಯ ತಂಡಗಳು ಕೂಡಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಾಧಾರಣ ಮೊತ್ತ ಕಲೆ ಹಾಕಿದವು. ಮೂರನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 59 ರನ್ ಗಳಿಸಿದ್ದ ತ್ರಿಪುರಾ ನಾಲ್ಕನೇ ದಿನ ಗೆಲುವಿಗೆ 134 ರನ್‌ಗಳ ಗುರಿ ಪಡೆಯಿತು. ಆದರೆ, ಕೊನೆಯ ದಿನ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 163 ರನ್‌ಗಳಿಗೆ ತ್ರಿಪುರಾ ಆಲೌಟ್ ಆಯ್ತು. ತಂಡದ ಪರ ಸುದೀಪ್ ಚಟರ್ಜಿ ಭರ್ಜರಿ 82 ರನ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಉಳಿದಂತೆ ತಂಡದ ಬೇರೆ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ.

ಶ್ರೀದಾಮ್ ಪೌಲ್ 21 ರನ್‌ ಗಳಿಸಿದರೆ, ಗಣೇಶ್ ಸತೀಶ್ 22 ರನ್‌ ಕಲೆ ಹಾಕಿದರು. ಮೂವರು ಬ್ಯಾಟರ್‌ಗಳನ್ನು ಹೊರತುಪಡಿಸಿದರೆ, ಬೆರಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಲಿಲ್ಲ. ಕರ್ನಾಟಕ ಪರ ವಿಧ್ವತ್ ಕಾವೇರಪ್ಪ 4 ವಿಕೆಟ್ ಪಡೆದರೆ, ವಿಜಯ್‌ಕುಮಾರ್ 3 ವಿಕೆಟ್ ಕಬಳಿಸಿದರು.

ವಿಜಯ್‌ಕುಮಾರ್ ವೈಶಾಖ್ ಆಲ್‌ರೌಂಡ್‌ ಆಟ

ವೇಗದ ಬೌಲರ್‌ ವಿಜಯ್‌ಕುಮಾರ್ ವೈಶಾಖ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೂಲ್ಯ ಅರ್ಧಶತಕ ಸಿಡಿಸಿದ್ದ ಅವರು, 2 ವಿಕೆಟ್ ಕೂಡ ಪಡೆದರು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಬಳಿಕ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ | 4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡವು 241 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ತ್ರಿಪುರಾ 200 ರನ್‌ ಕಲೆ ಹಾಕಲಷ್ಟೇ ಶಕ್ತವಾಯ್ತು. ಎರಡನೇ ಇನ್ನಿಂಗ್ಸ್‌ನಲ್ಲಿ‌ ಕರ್ನಾಟಕ 151 ರನ್‌ ಗಳಿಸಿದರೆ, ತ್ರಿಪುರಾ 163 ರನ್‌ ಗಳಿಸಿ ಸೋಲಿಗೆ ಶರಣಾಯ್ತು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಈ ಗೆಲುವಿನೊಂದಿಗೆ ಕರ್ನಾಟಕ ರಣಜಿ ತಂಡವು ಪಂದ್ಯಾವಳಿಯ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಮಯಾಂಕ್‌ ಅಗರ್ವಾಲ್‌ ಪಡೆಯು ಒಟ್ಟು 15 ಅಂಕಗಳನ್ನು ಕಲೆ ಹಾಕಿದೆ. ಗುಜರಾತ್‌ ವಿರುದ್ಧದ ಪಂದ್ಯವನ್ನು ಕೇವಲ 6 ರನ್‌ಗಳಿಂದ ಕಳೆದುಕೊಂಡಿರುವುದು ತಂಡದ ಏಕೈಕ ಸೋಲಾಗಿದೆ.

ಮುಂದಿನ ಪಂದ್ಯದಲ್ಲಿ ಅಗರ್ವಾಲ್‌ ಬಳಗವು ರೈಲ್ವೇಸ್ ವಿರುದ್ಧ ಸೆಣಸಲಿದೆ. ಫೆಬ್ರವರಿ 2ರಂದು ಪಂದ್ಯ ಆರಂಭವಾಗಲಿದೆ. ಆ ಬಳಿಕ ತಮಿಳುನಾಡು ಹಾಗೂ ಚಂಡೀಗಢ ತಂಡಗಳನ್ನು ಎದುರಿಸಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ